Summer Fashion: ಸಮ್ಮರ್ ಬನ್ ಹೇರ್‌ಸ್ಟೈಲ್ ಸಿಂಗಾರಕ್ಕೆ ಜತೆಯಾದ ಜ್ಯುವೆಲರಿಗಳಿವು
Summer Fashion: ಸಮ್ಮರ್ ಸೀಸನ್‌ನಲ್ಲಿ ಸೆಕೆಯಾಗದ ಬನ್ ಹೇರ್‌ಸ್ಟೈಲ್ ಟ್ರೆಂಡಿಯಾಗಿದ್ದು, ಇವನ್ನು ಸಿಂಗರಿಸುವ ನಾನಾ ಬಗೆಯ ಹೇರ್ ಆಕ್ಸೆಸರೀಸ್‌ಗಳು ಹಾಗೂ ಜ್ಯುವೆಲರಿಗಳು ಮಾರುಕಟ್ಟೆಯಲ್ಲಿ ಆಗಮಿಸಿವೆ, ಮಾನಿನಿಯರ ಕೂದಲನ್ನು ವಿನ್ಯಾಸಗೊಳಿಸುತ್ತಿವೆ. ಇವನ್ನು ಬಳಸಿ ಹೇಗೆಲ್ಲಾ ಈ ವಿನ್ಯಾಸ ಮಾಡಬಹುದು? ಎಂಬುದರ ಬಗ್ಗೆ ಹೇರ್ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್‌ನಲ್ಲಿ ಬಗೆಬಗೆಯ ಬನ್ ಹೇರ್‌ಸ್ಟೈಲ್ ಟ್ರೆಂಡಿಯಾಗಿದ್ದು, ಇವನ್ನು ಅಲಂಕರಿಸಲು ವೈವಿಧ್ಯಮಯ ಡಿಸೈನರ್ ಹೇರ್ ಆಕ್ಸೆಸರೀಸ್‌ಗಳು ಹಾಗೂ ಜ್ಯುವೆಲರಿಗಳು (Summer Fashion) ಬಂದಿವೆ. ಇನ್ನು. ಇವನ್ನು ಬಳಸಿ ಆಕರ್ಷಕವಾಗಿ ಕೂದಲನ್ನು ಸಿಂಗರಿಸಬಹುದು. ಅಲ್ಲದೇ, ನಮ್ಮ ಬಳಿಯ ಇರುವ ಕೆಲವು ಆಭರಣಗಳನ್ನು ಬಳಸಿಯೂ ಸಿಗರಿಸಬಹುದು ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್‌ಗಳು. ಸಿಂಪಲ್ ಹೇರ್ ಬನ್ ಸ್ಟೈಲನ್ನು ನೀವು ಹೆಚ್ಚು ತಾಪತ್ರಯವಿಲ್ಲದೇ ಸಿಂಗರಿಸಬಹುದು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಂಪಲ್ ಆಕ್ಸೆಸರೀಸ್‌ನಿಂದಿಡಿದು ಗ್ರ್ಯಾಂಡ್ ಹೇರ್ ಜ್ಯುವೆಲರಿಗಳು ಲಭ್ಯ. ನಿಮ್ಮ ಕೂದಲಿನ ವಿನ್ಯಾಸಕ್ಕೆ ತಕ್ಕಂತೆ ಆಯ್ಕೆ ಮಾಡಿ. ಯಾವ ಬಗೆಯ ಹೇರ್ ಬನ್ ವಿನ್ಯಾಸ ಮಾಡುತ್ತಿದ್ದೀರಾ ಎಂಬುದರ ಆಧಾರದ ಮೇಲೆ ಜ್ಯುವೆಲರಿಯನ್ನು ಸೆಲೆಕ್ಟ್ ಮಾಡಿ. ಎಲ್ಲಾ ವಿನ್ಯಾಸ ಆದ ನಂತರ ಧರಿಸಿ. ಇದಕ್ಕಾಗಿ ಮತ್ತೊಬ್ಬರ ಸಹಾಯವೂ ಬೇಕಾಗಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್.

ಟ್ರೆಡಿಷನಲ್ ಲುಕ್‌ಗಾದಲ್ಲಿ ಹೀಗೆ ಮಾಡಿ
ವೆಡ್ಡಿಂಗ್ ಅಥವಾ ಎಥ್ನಿಕ್ ಉಡುಗೆಗಾದಲ್ಲಿ ಮೊದಲು ಬನ್ ಹೇರ್‌ಸ್ಟೈಲ್ ಮಾಡಿಕೊಳ್ಳಿ. ಮಾರುಕಟ್ಟೆಯಲ್ಲಿ ದೊರಕುವ ರೆಡಿಮೇಡ್ ಡಿಸೈನರ್ ಹೇರ್‌ಬನ್ ಬಳಸಿ. ಅದನ್ನು ಫಿಕ್ಸ್ ಮಾಡಿ. ಸ್ಟೋನ್ಸ್, ಕುಂದನ್, ಕ್ರಿಸ್ಟಲ್ ಹೀಗೆ ನಾನಾ ಬಗೆಯಲ್ಲಿ ಸಿಂಗರಿಸಿರುವ ಹೇರ್ ಬನ್‌ಗಳನ್ನು ನಿಮ್ಮ ಕೂದಲ ವಿನ್ಯಾಸಕ್ಕೆ ಬಳಸಬಹುದು.

ಜಡೆ ಬಿಲ್ಲೆಯ ಕಂಟೆಂಪರರಿ ಡಿಸೈನ್
ಹಳೆಯ ರಾಯಲ್ ಫ್ಯಾಮಿಲಿಗಳಲ್ಲಿ ಧರಿಸುತ್ತಿದ್ದ ಜಡೆ ಬಿಲ್ಲೆಗಳು ಇದೀಗ ಕಂಟೆಂಪರರಿ ಡಿಸೈನ್‌ನಲ್ಲಿ ಬಂದಿವೆ. ಇವು ಇಂಡೋ-ವೆಸ್ಟರ್ನ್ ಲುಕ್ ನೀಡುತ್ತವೆ. ಇವನ್ನು ಮೆಸ್ಸಿ ಹೇರ್ ಬನ್ ಅಥವಾ ಹಾಫ್ ಹೇರ್‌ಬನ್‌ಗೆ ಧರಿಸಬಹುದು.

ಹೇರ್ ಪಿನ್ ಶೈಲಿಯ ಜ್ಯುವೆಲರಿ
ತೀರಾ ಗ್ರ್ಯಾಂಡ್ ಬೇಡ, ವೆಸ್ಟರ್ನ್ ಲುಕ್ ಬೇಕು ಎನ್ನುವವರು ಆದಷ್ಟೂ ಸಿಂಪಲ್ ಹೇರ್ ಬನ್‌ಗೆ ಹೇರ್‌ಪಿನ್ ಮಾದರಿಯಲ್ಲಿ ದೊರಕುವ ಡಿಸೈನರ್ ದೊಡ್ಡ ಹೇರ್ ಜ್ಯುವೆಲರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವುಗಳಲ್ಲಿ ಇದೀಗ ಎಲೆ, ಬಳ್ಳಿ, ಹೂಗಳ ಗೋಲ್ಡ್ ಪ್ಲೇಟೆಡ್ ಗೊಂಚಲು, ಆರ್ಟಿಫಿಷಿಯಲ್ ಹೂವುಗಳ ಕ್ಲಿಪ್ ದೊರೆಯುತ್ತವೆ ಅವನ್ನು ಬಳಸಬಹುದು.

ನಿಮ್ಮ ಆಭರಣವನ್ನು ಹೇರ್ ಜ್ಯುವೆಲರಿಯಾಗಿಸಿ
ನಿಮ್ಮ ಬಳಿ ಇರುವ ಆರ್ಟಿಫಿಷಿಯಲ್ ಜ್ಯುವೆಲರಿಗಳನ್ನು ಹೇರ್ ಜ್ಯುವೆಲರಿಯಾಗಿಸಬಹುದು. ಉದಾಹರಣೆಗೆ ಯಾವುದಾದರೂ ಲೇಯರ್ ನೆಕ್ಲೇಸನ್ನು ಹೇರ್ ಬನ್‌ಗೆ ಸಿಕ್ಕಿಸಿ ಅಲಂಕರಿಸಬಹುದು. ಇದಕ್ಕೆ ಕ್ರಿಯಾತ್ಮಕ ಐಡಿಯಾಗಳು ಬೇಕಷ್ಟೇ! ಎನ್ನುತ್ತಾರೆ ಹೇರ್ ಡಿಸೈನರ್‌ಗಳು.
ಈ ಸುದ್ದಿಯನ್ನೂ ಓದಿ | Celebrities Ugadi Fashion: ಟ್ರೆಡಿಷನಲ್‌ವೇರ್‌ನಲ್ಲಿ ಯುಗಾದಿ ಹಬ್ಬ ಆಚರಿಸಿದ ಸೆಲೆಬ್ರೆಟಿಗಳಿವರು
ಹೇರ್ ಬನ್ ಸ್ಟೈಲಿಂಗ್‌ಗೆ 3 ಟಿಪ್ಸ್
- ಟ್ರೆಡಿಷನಲ್ ಲುಕ್‌ಗಾದಲ್ಲಿ ಹೇರ್‌ಬನ್ ಕೆಳಗೆ ವಿನ್ಯಾಸ ಮಾಡಿ.
- ವೆಸ್ಟರ್ನ್ ಸ್ಟೈಲ್‌ಗಾದಲ್ಲಿ ನೆತ್ತಿಯ ಮೇಲೆ ವಿನ್ಯಾಸ ಮಾಡಿ.
- ಆಯಾ ಉಡುಗೆಗೆ ತಕ್ಕಂತೆ ಹೇರ್ ಜ್ಯುವೆಲರಿ ಧರಿಸಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)