ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Firebomb: ಅಮೆರಿಕನ್‌ ರಾಯಭಾರಿ ಕಚೇರಿ ಮೇಲೆ ಬಾಂಬ್‌ ದಾಳಿಗೆ ಯತ್ನ

Firebomb in American Embassy: ಇಸ್ರೇಲ್‌ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಲು ಕಿಡಿಗೇಡಿಯೊಬ್ಬ ಯತ್ನಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್‌ನ ಫೆಡರಲ್ ಪ್ರಾಸಿಕ್ಯೂಟರ್‌ಗಳು ಅಮೆರಿಕ ಮೂಲದ ಜರ್ಮನಿ ಯುವಕನನ್ನು ಅರೆಸ್ಟ್‌ ಮಾಡಿದ್ದಾರೆ. ಬಂಧಿತನನ್ನು ಜೋಸೆಫ್ ನ್ಯೂಮೆಯರ್ ಎಂದು ಗುರುತಿಸಲಾಗಿದೆ.

ಅಮೆರಿಕನ್‌ ರಾಯಭಾರಿ ಕಚೇರಿ ಮೇಲೆ ಬಾಂಬ್‌ ದಾಳಿಗೆ ಯತ್ನ

Profile Rakshita Karkera May 26, 2025 10:36 AM

ಟೆಲ್‌ಅವಿವ್‌: ಇಸ್ರೇಲ್‌ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮೇಲೆ ದಾಳಿ(Firebomb in American Embassy) ನಡೆಸಲು ಕಿಡಿಗೇಡಿಯೊಬ್ಬ ಯತ್ನಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್‌ನ ಫೆಡರಲ್ ಪ್ರಾಸಿಕ್ಯೂಟರ್‌ಗಳು ಯುವಕನೊಬ್ಬನನ್ನು ಅರೆಸ್ಟ್‌ ಮಾಡಿದ್ದಾರೆ. ಬಂಧಿತನನ್ನು ಜೋಸೆಫ್ ನ್ಯೂಮೆಯರ್ ಎಂದು ಗುರುತಿಸಲಾಗಿದ್ದು, ಅಧಿಕಾರಿಗಳ ಪ್ರಕಾರ, ಅವರು ಮೇ 19 ರಂದು ಈತ ಸ್ಫೋಟಕಗಳನ್ನು ಹೊಂದಿರುವ ಬ್ಯಾಗ್‌ ಹಿಡಿದು ರಾಯಭಾರ ಕಚೇರಿಯ ಕಟ್ಟಡಕ್ಕೆ ನಡೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ.

ಬ್ಯಾಗ್‌ ಹಿಡಿದು ಹೋಗುತ್ತಿದ್ದ ಜೋಸೆಫ್ ನ್ಯೂಮೆಯರ್‌ನನ್ನುಅಲ್ಲಿದ್ದ ಭದ್ರತಾ ಸಿಬ್ಬಂದಿ ತಡೆದು ವಿಚಾರಿಸಿದ್ದಾರೆ. ತಕ್ಷಣ ಆತ ಅವರ ಜೊತೆ ಗಲಾಟೆಗಿಳಿದಿದ್ದಾನೆ. ಕೊನೆಗೆ ಆತ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಹೀಗೆ ಓಡುತ್ತಾ ಆತ ತನ್ನ ಬ್ಯಾಗ್‌ ಅನ್ನು ಬೀಳಿಸಿದ್ದಾನೆ. ಅದನ್ನು ತೆರೆದು ನೋಡಿದಾಗ ಅದರಲ್ಲಿ ಸ್ಫೋಟಕ ತುಂಬಿತ್ತು. ನ್ಯೂಯಾರ್ಕ್‌ನ ಪೂರ್ವ ಜಿಲ್ಲೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ದೂರಿನ ಪ್ರಕಾರ, ಕಾನೂನು ಜಾರಿ ಅಧಿಕಾರಿಗಳು ರಾಯಭಾರ ಕಚೇರಿಯಿಂದ ಕೆಲವು ಬ್ಲಾಕ್‌ಗಳ ದೂರದಲ್ಲಿರುವ ಹೋಟೆಲ್‌ಗೆ ಹೋಗುತ್ತಿದ್ದ ವೇಳೆ ನ್ಯೂಮಿಯರ್‌ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Gaza Ceasefire : ಇಸ್ರೇಲ್-ಹಮಾಸ್ ಕದನ ವಿರಾಮ ; ಮೂವರು ಒತ್ತೆಯಾಳುಗಳು ತಾಯ್ನಾಡಿಗೆ

ನ್ಯಾಯಾಲಯದ ದಾಖಲೆಗಳ ಪ್ರಕಾರ, ಕೊಲೊರಾಡೋ ಮೂಲದ 28 ವರ್ಷದ ನ್ಯೂಮೇಯರ್, ಅಮೆರಿಕ ಮತ್ತು ಜರ್ಮನ್ ಎರಡೂ ಪೌರತ್ವಗಳನ್ನು ಹೊಂದಿದ್ದು, ಫೆಬ್ರವರಿ ಆರಂಭದಲ್ಲಿ ಅಮೆರಿಕದಿಂದ ಕೆನಡಾಕ್ಕೆ ಪ್ರಯಾಣಿಸಿ ನಂತರ ಏಪ್ರಿಲ್ ಅಂತ್ಯದಲ್ಲಿ ಇಸ್ರೇಲ್‌ಗೆ ಬಂದಿದ್ದ ಎನ್ನಲಾಗಿದೆ. ದಾಳಿಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‌ ಮಾಡಿದ್ದ ಎನ್ನಲಾಗಿದೆ. ಇನ್ನು ಇಂದು ಬೆಳಗ್ಗೆ ಈತನನ್ನು ಇಸ್ರೇಲ್‌, ಅಮೆರಿಕಕ್ಕೆ ಹಸ್ತಾಂತರಿಸಿದೆ.