Basavaraj Bommai: ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಪುಸ್ತಕ ಪ್ರಶಸ್ತಿ ಪ್ರಕಟ
Basavaraj Bommai: ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ 2023-24ನೇ ಸಾಲಿನಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಅತ್ಯುತ್ತಮ ಪುಸ್ತಕಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ಹುಬ್ಬಳ್ಳಿ: ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ 2023-24ನೇ ಸಾಲಿನಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಅತ್ಯುತ್ತಮ ಪುಸ್ತಕಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಕಳೆದ ಹಲವಾರು ವರ್ಷಗಳಿಂದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಅತ್ಯುತ್ತಮ ಪುಸ್ತಕಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತ ಬಂದಿದೆ. ಅದರಂತೆ 2023-24 ನೇ ಸಾಲಿಗೆ ಲೇಖಕಿಯರಿಗೆ ಮೀಸಲಾದ ‘ಅಕ್ಕ ಪ್ರಶಸ್ತಿ’ ಡಾ. ಸೀತಾ ರಾಮನ್ ಅವರು ರಚಿಸಿದ ‘ಅಹಲ್ಯಾಬಾಯಿ ಹೋಳ್ಳರ’ ಕೃತಿಗೆ, ಹದಿನೆಂಟು ವರ್ಷದ ವಯೋಮಾನದೊಳಗಿನ ಮಕ್ಕಳಿಗೆ ಮೀಸಲಾದ ‘ಅರಳು ಮೊಗ್ಗು’ ಪ್ರಶಸ್ತಿಯು ಕುಮಾರಿ ನವ್ಯ ಆರ್. ಕತ್ತಿ ಅವರು ರಚಿಸಿದ ‘ಮಾಯಾ ಗುಹೆ ಮತ್ತು ಇತರ ಮಕ್ಕಳ ಕತೆಗಳು’ ಕೃತಿಗೆ ಜಾನಪದ ಸಾಹಿತ್ಯಕ್ಕೆ ಮೀಸಲಾದ ‘ಜಾನಪದ ಸಿರಿ’ ಪ್ರಶಸ್ತಿಯು ಶರೀಫ ಮಾಕಪ್ಪನವರ ಅವರ ‘ಜನಪದ ಕಲಾವಿದರು ಸುಧಾರಿಸಿಕೊಳ್ಳಬಹುದಾದ ಮಾರ್ಗೋಪಾಯಗಳು’ ಕೃತಿಗೆ ಲಭಿಸಿದೆ.
ಪ್ರಶಸ್ತಿಯು ತಲಾ ರೂ. 25,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ಟ್ರಸ್ಟ್ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | HPCL Recruitment 2025: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ನಲ್ಲಿದೆ 411 ಹುದ್ದೆ; ದ್ವಿತೀಯ ಪಿಯು ಪಾಸಾದವರು ಅಪ್ಲೈ ಮಾಡಿ