ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರ್‌ಟಿಒ ಕಚೇರಿಯಲ್ಲಿ ಸರ್ಕಾರಿ ವಹಿಗೆ ಖಾಸಗಿ ವ್ಯಕ್ತಿ ಸಹಿ; ಬಂಧನಕ್ಕೆ ಉಪ ಲೋಕಾಯುಕ್ತ ಆದೇಶ

ಹೊಸಪೇಟೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಅನಿರೀಕ್ಷಿತ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ವಾಹನ ನೋಂದಣಿ ನವೀಕರಣ ಸ್ವೀಕೃತಿ ವಹಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬ ನಿರಂತರವಾಗಿ ಸಹಿ ಮಾಡಿರುವುದನ್ನು ಪತ್ತೆಹಚ್ಚಿ, ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.

ಸರ್ಕಾರಿ ವಹಿಗೆ ಖಾಸಗಿ ವ್ಯಕ್ತಿ ಸಹಿ; ಬಂಧನಕ್ಕೆ ಆದೇಶ

Profile Prabhakara R Mar 15, 2025 4:36 PM

ಹೊಸಪೇಟೆ: ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (RTO) ವಾಹನ ನೋಂದಣಿ ನವೀಕರಣದ ಸ್ವೀಕೃತಿ ವಹಿಗೆ ಖಾಸಗಿ ವ್ಯಕ್ತಿ ಸಹಿ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು, ಕಾರ್ತಿಕ್ ಎಂಬ ವ್ಯಕ್ತಿಯನ್ನು ಅರೆಸ್ಟ್ ಮಾಡುವಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಆದೇಶಿಸಿದರು. ನಗರದ ಪ್ರಾದೇಶಿಕ ಸಾರಿಗೆ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಕಾರ್ತಿಕ್ ಸಾರಿಗೆ ಕಚೇರಿಯಲ್ಲಿ 2024ರ ಜುಲೈನಿಂದ 2025 ರ ಫೆಬ್ರವರಿವರೆಗೆ ವಾಹನ ನೋಂದಣಿ ನವೀಕರಣ ಸ್ವೀಕೃತಿ ವಹಿಯಲ್ಲಿ ನಿರಂತರವಾಗಿ ಸಹಿ ಮಾಡಿರುವುದನ್ನು ಪತ್ತೆಹಚ್ಚಿದರು.

ಈ ಖಾಸಗಿ ವ್ಯಕ್ತಿ ಯಾರೆಂದು ಸಾರಿಗೆ ಅಧಿಕಾರಿಗಳಿಂದ ಹಾಗೂ ವಾಹನ ನಿರೀಕ್ಷಕರನ್ನು ಪ್ರಶ್ನಿಸಿದಾಗ ಯಾರೊಬ್ಬರೂ ಸಹ ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಇದಕ್ಕೆ ಕೋಪಗೊಂಡ ಉಪ ಲೋಕಾಯುಕ್ತರು ನಿಮಗೆಲ್ಲಾ ನಾಚಿಕೆಯಾಗಬೇಕು. ಖಾಸಗಿ ವ್ಯಕ್ತಿ ಸರ್ಕಾರಿ ಕಚೇರಿಗೆ ಬಂದು ನಿರಂತರವಾಗಿ ಸಹಿ ಮಾಡುತ್ತಾನೆ ಎಂದರೆ ಏನು ಎಂದು ತಿಳಿಸಿ, ಇದರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಮುಂದಿನ ತನಿಖೆ ಎದುರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸುದ್ದಿಯನ್ನೂ ಓದಿ | Ranya Rao: ರನ್ಯಾ ರಾವ್‌ ಪ್ರಕರಣಕ್ಕೆ ಇಡಿ, ಸಿಬಿಐ ಎಂಟ್ರಿ; ಇಡಿ ದಾಳಿ, ಸಿಬಿಐ ಎಫ್‌ಐಆರ್

ಸರ್ಕಾರಿ ಕಚೇರಿಗಳಲ್ಲಿ ನಿಯಮಬಾಹಿರವಾಗಿ ಕ್ಯಾಶ್‌ಲೆಸ್ ವಹಿವಾಟು ನಡೆಯುತ್ತಿದೆ. ಸೇವಾ ನಡತೆ ನಿಯಮಗಳನ್ವಯ ಯಾವುದೇ ಸರ್ಕಾರಿ ಅಧಿಕಾರಿ, ನೌಕರ 5 ಸಾವಿರಕ್ಕಿಂತ ಹೆಚ್ಚು ಬೇರೊಬ್ಬರಿಗೆ ವರ್ಗಾವಣೆ ಹಾಗೂ ಪಡೆದುಕೊಳ್ಳಲು ಅನುಮತಿ ಪಡೆದಿರಬೇಕು. ಆದರೆ ಬಹುತೇಕ ಸರ್ಕಾರಿ ಸೇವಾ ಸಿಬ್ಬಂದಿ ಇದನ್ನು ಪಾಲನೆ ಮಾಡದಿರುವುದು ಕಂಡು ಬಂದಿದೆ. ಆರ್.ಟಿ.ಒ ಕಚೇರಿಯಲ್ಲಿ ಗ್ರೂಪ್ ಸಿ ಮಹಿಳಾ ಸಿಬ್ಬಂದಿ 12 ಲಕ್ಷ ರೂ. ಬ್ಯಾಂಕ್‌ನಿಂದ ಸಾಲ ಪಡೆದು ಅದನ್ನು ತನ್ನ ಸಂಬಂಧಿಕರಿಗೆ ವರ್ಗಾವಣೆ ಮಾಡಿ ನಗದು ಪಡೆದುಕೊಳ್ಳಲಾಗಿದೆ ಎಂಬ ಉತ್ತರಕ್ಕೆ ಅವರ ಒಂದು ವರ್ಷದ ಬ್ಯಾಂಕ್ ಸ್ಟೇಟ್‌ಮೆಂಟ್ ಕಳುಹಿಸಲು ಸೂಚನೆ ನೀಡಿದರು.