ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chit Fund Scam: ಚೀಟಿ ಹೆಸರಲ್ಲಿ ಬರೋಬ್ಬರಿ 10 ಕೋಟಿ ವಂಚಿಸಿದ ಮಹಿಳೆ; ಕೇಸ್‌ ಬೆನ್ನಲ್ಲೇ ಪರಾರಿ

Chit Fund Scam: ವಂಚನೆ ಸಂಬಂಧ ಬೆಂಗಳೂರಿನ ಜೆ.ಪಿ.ನಗರದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳ ವಿರುದ್ಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇನ್ನು ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವಂತೆ ಕೋರಲಾಗಿದೆ.

ಚೀಟಿ ಹೆಸರಲ್ಲಿ ಬರೋಬ್ಬರಿ 10 ಕೋಟಿ ವಂಚಿಸಿದ ಮಹಿಳೆ!

Profile Prabhakara R Jun 24, 2025 3:45 PM

ಬೆಂಗಳೂರು: ಚೀಟಿ ಹೆಸರಿನಲ್ಲಿ ಬರೋಬ್ಬರಿ 10 ಕೋಟಿ ರೂ. ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಚೀಟಿ ಹಾಕಿಸಿ ಕೊಂಡಿದ್ದ ಮಹಿಳೆ ತನ್ನ ಕುಟುಂಬ ಸಮೇತ ಪರಾರಿಯಾಗಿದ್ದು, ಇದಕ್ಕೆ ಸಂಬಂಧಿಸಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಪ್ರಕರಣವನ್ನು (Chit Fund Scam) ಸಿಐಡಿಗೆ ವರ್ಗಾವಣೆ ಮಾಡುವಂತೆ ದಕ್ಷಿಣ ವಿಭಾಗದ ಡಿಸಿಪಿ, ನಗರ ಪೊಲೀಸ್ ಆಯಕ್ತರಿಗೆ ಪತ್ರ ಬರೆದಿದ್ದಾರೆ.

ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳಾದ ಜೆ.ಪಿ.ನಗರದ 6ನೇ ಹಂತದಲ್ಲಿರುವ ಸುಧಾ, ಆಕೆಯ ಪತಿ ಸಿದ್ದಾಚಾರಿ, ಯಶವಂತ ಮತ್ತು ವರ್ಷಿಣಿ ಎಂಬುವವರು ಪರಾರಿಯಾಗಿದ್ದಾರೆ. ಆರೋಪಿಗಳು ನೂರಾರು ಮಂದಿಗೆ ಬರೋಬರಿ 10 ಕೋಟಿಗೂ ಅಧಿಕ ಹಣ ವಂಚಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವಂತೆ ಕೋರಲಾಗಿದೆ.

ಸದ್ಯ ವಂಚನೆ ಸಂಬಂಧ ಜೆ.ಪಿ.ನಗರದ ಪುಷ್ಪಲತಾ ಎಂಬುವವರು ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳ ವಿರುದ್ಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿ ಸುಧಾ, ತನ್ನ ಪತಿ ಹಾಗೂ ಮಕ್ಕಳ ಜತೆ ಸೇರಿ ಸುಮಾರು 20 ವರ್ಷಗಳಿಂದ ಚೀಟಿ ವ್ಯವಹಾರ ಮಾಡುತ್ತಿದ್ದಾರೆ. ಹೀಗಾಗಿ ಸುಧಾ ಬಳಿ 5 ಲಕ್ಷ ರೂ. ಮೌಲ್ಯದ 2 ಚೀಟಿ ಹಾಕಿದ್ದು, 25 ಸಾವಿರ ರೂ. ಕಟ್ಟುತ್ತಿದ್ದೆ.

ಈ ಚೀಟಿಗಳಲ್ಲಿ 40 ಮಂದಿ ಇದ್ದಾರೆ. ಹೀಗೆ 20 ತಿಂಗಳ ಚೀಟಿ ಹಣವನ್ನು ಪಾವತಿ ಮಾಡಿದ್ದೆ. ಈ ಮಧ್ಯೆ ಚೀಟಿ ಎತ್ತಿಕೊಡುವಂತೆ ಕೇಳಿದಾಗ, ಸುಧಾ ಇದೇ ಮೊದಲ ಬಾರಿಗೆ ಚೀಟಿ ಹಾಕಿದ್ದರಿಂದ ಕೊನೆಯಲ್ಲಿ ಚೀಟಿ ಎತ್ತಿಕೊಳ್ಳಿ ಎಂದರು. ಹೀಗಾಗಿ ಚೀಟಿ ಎತ್ತಿಕೊಂಡಿರಲಿಲ್ಲ. ಈ ಮಧ್ಯೆ ಸುಧಾ ತನ್ನ ಇಡೀ ಕುಟುಂಬದ ಜತೆ ಜೂ. 3 ರಂದು ರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದಾರೆ. ಹೀಗಾಗಿ ತನ್ನ 10 ಲಕ್ಷ ರೂ. ಚೀಟಿ ಹಣವನ್ನು ಪಡೆದು ಪರಾರಿಯಾಗಿರುವ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪುಷ್ಪಲತಾ ದೂರಿನಲ್ಲಿ ಕೋರಿದ್ದಾರೆ.

ದಿನೇದಿನೆ ಆರೋಪಿಗಳ ವಿರುದ್ಧ ದೂರು ನೀಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬ ದೂರುದಾರನಿಂದ ಹಣ ಪಾವತಿಸಿರುವ ಬಗ್ಗೆ ದಾಖಲೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಾಥಮಿಕವಾಗಿ ಆರೋಪಿಗಳು ಬರೋಬರಿ 10 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನೂ ಓದಿ | DK Suresh: ಐಶ್ವರ್ಯ ಗೌಡ ವಂಚನೆ: ಇಡಿ ತನಿಖೆಗೆ ಹಾಜರಾದ ಡಿಕೆ ಸುರೇಶ್‌, ʼಇಡಿ ನಡೆ ಪ್ರಜಾಪ್ರಭುತ್ವ ವಿರೋಧಿʼ

ಕೋಟ್ಯಂತರ ರೂ. ದೋಚಿದ ಸುಧಾ ತನ್ನ ಕುಟುಂಬದ ಜತೆ ರಾತ್ರೋರಾತ್ರಿ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ, ಪುಟ್ಟೇನಹಳ್ಳಿ ಪೊಲೀ ಸರು ನಾಲ್ವರು ಆರೋಪಿಗಳ ಫೋಟೋ ಸಹಿತ ಕಾಣೆಯಾದ ಕುರಿತು ಪೊಲೀಸ್ ಪ್ರಕಟಣೆ ಹೊರಡಿಸಿದ್ದು, ಆರೋಪಿಗಳು ಕಂಡು ಬಂದಲ್ಲಿ ಪೊಲೀಸ್ ಸಹಾಯವಾಣಿ 112 ಅಥವಾ ಪೊಲೀ ಸ್ ಠಾಣೆಯ 080-22942566ಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.