ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ರೀಲ್ಸ್ ವಿಚಾರಕ್ಕೆ ಪ್ರೇಮಿಗಳ ಜಗಳ; ನೇಣಿಗೆ ಶರಣಾದ ಯುವತಿ!

Self Harming: ಇನ್‌ಸ್ಟಾಗ್ರಾಮ್ ರೀಲ್ಸ್‌ ವಿಚಾರ ಆರಂಭವಾದ ಪ್ರೇಮಿಗಳ ಜಗಳ ಯುವತಿಯ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ತುಮಕೂರಿನಲ್ಲಿ ಯುವತಿ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ‌ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಿಸಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರೀಲ್ಸ್ ವಿಚಾರಕ್ಕೆ ಪ್ರೇಮಿಗಳ ಜಗಳ; ನೇಣಿಗೆ ಶರಣಾದ ಯುವತಿ

Profile Prabhakara R Jun 24, 2025 7:53 PM

ತುಮಕೂರು: ರೀಲ್ಸ್‌ ವಿಚಾರಕ್ಕೆ ಪ್ರೇಮಿಗಳ ನಡುವೆ ಶುರುವಾದ ಜಗಳ ಯುವತಿಯ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ತುಮಕೂರು ಗ್ರಾಮಾಂತರ (Self Harming) ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಚೈತನ್ಯ (22) ಎಂಬ ಮೃತ ಯುವತಿ. ಪದವಿ ವ್ಯಾಸಂಗ ಮಾಡುತ್ತಾ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ರೀಲ್ಸ್ ಒಂದನ್ನು ಸ್ಟೇಟಸ್‌ನಲ್ಲಿ ಹಾಕಿದ ವಿಚಾರವಾಗಿ ಆಕೆಯನ್ನು ಪ್ರೀತಿಸುತ್ತಿದ್ದ ಯುವಕ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದು, ಯುವತಿ ನೇಣಿಗೆ ಶರಣಾಗಿದ್ದಾಳೆ.

ಪಕ್ಕದ ಊರಿನ ಕಾರು ಚಾಲಕ ವಿಜಯ್ ಕುಮಾರ್‌ ಎಂಬಾತನನ್ನು ಕಳೆದ ಹಲವು ವರ್ಷಗಳಿಂದ ಯುವತಿ ಚೈತನ್ಯ, ಮನೆಯವರಿಗೆ ಗೊತ್ತಾಗದಂತೆ ಕದ್ದು ಮುಚ್ಚಿ ಪ್ರೀತಿಸುತ್ತಿದ್ದಳು. ಇನ್ನು ವಿಜಯ್ ಕುಮಾರ್ ಮತ್ತು ಚೈತನ್ಯಳ ಪ್ರೀತಿ ವಿಚಾರವನ್ನು ತಿಳಿದ ಯುವತಿಯ ಮಾವ ಆಕೆಗೆ ಎಚ್ಚರಿಕೆ ನೀಡಿದ್ದರು. ನೀನು ಪ್ರೀತಿ-ಪ್ರೇಮ ಎಲ್ಲ ಬಿಟ್ಟುಬಿಡುವಂತೆ ಹೇಳಿದ್ದರು.

ಮಂಗಳವಾರ ಚೈತನ್ಯ ರೀಲ್ಸ್ ಒಂದನ್ನು ಸ್ಟೇಟಸ್‌ನಲ್ಲಿ ಹಾಕಿದ್ದಳು. ಇದೇ ವಿಚಾರವಾಗಿ ಪ್ರಶ್ನಿಸಲು ಚೈತನ್ಯ ಮನೆ ಬಳಿಗೆ ವಿಜಯ್ ಹೋಗಿದ್ದ. ಆಗ ಚೈತನ್ಯಳ ತಾಯಿ ಸೌಭಾಗ್ಯಮ್ಮ ರೂಮ್‌ನಲ್ಲಿದ್ದರು. ತಾಯಿ ಇದ್ದ ರೂಮಿನ ಬಾಗಿಲನ್ನು ಲಾಕ್ ಮಾಡಿ ಕಿಟಕಿಯ ಬಳಿ ಇಬ್ಬರೂ ಜಗಳ ಮಾಡಲಾರಂಭಿಸಿದ್ದಾರೆ. ವಿಜಯ್ ಕುಮಾರ್ ಜಗಳವಾಡಿ ಹೋದ ಬಳಿಕ ಚೈತನ್ಯ ಸಾಯುವುದಾಗಿ ಕರೆ ಮಾಡಿ ಹೇಳಿದ್ದಾಳೆ. ಈ ವಿಚಾರವನ್ನು ವಿಜಯ್ ಕೂಡಲೇ ಚೈತನ್ಯಳ ಸಂಬಂಧಿಕರಿಗೆ ತಿಳಿಸಿದ್ದಾನೆ. ಚೈತನ್ಯಾ ಸಾವಿಗೆ ಪ್ರಯತ್ನಿಸುವ ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಿಕರು ಬಂದು ನೋಡಿದಾಗ ಯುವತಿ ಮಂಗಳವಾರ ರಾತ್ರಿ ನೇಣಿಗೆ ಶರಣಾಗಿ ಮೃತಪಟ್ಟಿರುವುದು ಖಚಿತವಾಗಿದೆ.

ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬ ಮೇಡಂ ನೀವು ಚೆನ್ನಾಗಿ ಕಾಣಿಸ್ತೀರಿ, ನಿಮ್ಮ ಫೋಟೋ ತೆಗೆಯಬಹುದೇ ಎಂದು ಕೇಳಿ ಬರೋಬ್ಬರಿ 25 ಫೋಟೋಗಳನ್ನು ತನ್ನ ಕ್ಯಾಮೆರಾದಲ್ಲಿ ತೆಗೆದಿದ್ದಾನೆ. ಈ ಫೋಟೋಗಳನ್ನು ಹಾಗೂ ವಿಡಿಯೋವನ್ನು ಚೈತನ್ಯ ಕೂಡ ಇನ್‌ಸ್ಟಾಗ್ರಾಮ್‌ಗೆ ಹಾಕಿಕೊಂಡಿದ್ದಾಳೆ. ಆದರೆ, ಇದನ್ನು ನೋಡಿ ಸಹಿಸದ ಪ್ರೇಮಿ ವಿಜಯ್ ಪ್ರಶ್ನಿಸಲು ಗೆಳತಿಯ ಮನೆಗೆ ಬಂದು ಜಗಳ ಮಾಡಿದ್ದರಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಈ ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಚೈತನ್ಯಾಳ ಸಾವಿಗೆ ಆಕೆಯ ಪ್ರೇಮಿ ವಿಜಯ್ ಕುಮಾರ್ ಕಾರಣ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಆರೋಪಿ ವಿಜಯ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Rupesh Rajanna: ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ವಿರುದ್ಧ ಬ್ಲ್ಯಾಕ್‌ ಮೇಲ್‌ ಆರೋಪ; ಸಚಿವರ ನಿವಾಸಕ್ಕೆ ಮುತ್ತಿಗೆ ವೇಳೆ ವಶಕ್ಕೆ

11 ರಾಜ್ಯಗಳ ಶಾಲೆ, ಆಸ್ಪತ್ರೆ, ಏರ್‌ಪೋರ್ಟ್‌ಗಳಿಗೆ ಬಾಂಬ್‌ ಬೆದರಿಕೆ; ಯುವತಿ ಅರೆಸ್ಟ್!

bomb threat (1)

ಉಡುಪಿ: ಕರ್ನಾಟಕದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸೇರಿ ದೇಶದ 11 ರಾಜ್ಯಗಳ ಹಲವು ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಸಂದೇಶ (Bomb Threats) ಕಳುಹಿಸಿದ್ದ ಯುವತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚೈನ್ನೈ ಮೂಲದ ರೀನಾ ಜೊಶಿಲ್ಡಾ ಬಂಧಿತ ಅರೋಪಿ. ಈಕೆಯನ್ನು ಗುಜರಾತ್​ನ ಅಹಮದಾಬಾದ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಚೆನ್ನೈಯಲ್ಲಿ ಎಂಎನ್‌ಸಿ ಕಂಪನಿ ಡೆಲಾಯಿಟ್ ಉದ್ಯೋಗಿಯಾದ ರೀನಾ ಜೊಶಿಲ್ಡಾ, ಹುಸಿ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಳು.

ಆರೋಪಿ ರೀನಾ ಉಡುಪಿ ನಗರದ ವಿದ್ಯೋದಯ ಪಬ್ಲಿಕ್ ಸ್ಕೂಲ್​ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯೊಡ್ಡಿದ್ದಳು. ಹೀಗಾಗಿ ತನಿಖೆಗಾಗಿ ಆರೋಪಿಯನ್ನು ಅಹಮದಾಬಾದ್ ಪೊಲೀಸರಿಂದ ಉಡುಪಿ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಜೂನ್ 16ರಂದು ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.

ಏರ್‌ ಇಂಡಿಯಾ ವಿಮಾನ ದುರಂತದ ಹೊಣೆ ಹೊತ್ತ ಯುವತಿ!

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ, ಶಾಲೆಗಳು, ಆಸ್ಪತ್ರೆಗಳು ಸೇರಿ 11 ರಾಜ್ಯಗಳ ವಿವಿಧ ಸಂಸ್ಥೆಗಳಿಗೆ ಆರೋಪಿ‌ ಯುವತಿ ಒಟ್ಟು 21 ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದಳು. ಚೆನ್ನೈನ ಡೆಲಾಯಿಟ್ ಕಂಪನಿಯ ಸೀನಿಯರ್ ಕನ್ಸಲ್ಟಂಟ್ ಆಗಿರುವ ರೀನಾ ಜೊಶಿಲ್ಡಾ, ಸಹೋದ್ಯೋಗಿಯನ್ನು ಪ್ರೀತಿಸುತ್ತಿದ್ದಳು. ಆತ ಮದುವೆಯಾಗಲು ನಿರಾಕರಿಸಿದ್ದಕ್ಕೆ ಬಾಂಬ್‌ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾಳೆ. ಅಲ್ಲದೇ ಆಕೆಯ ಸಂದೇಶಗಳ ಪೈಕಿ ಒಂದರಲ್ಲಿ ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ದುರಂತದ ಹೊಣೆಯನ್ನು ಹೊತ್ತಿರುವುದಾಗಿ ಯುವತಿ ತಿಳಿಸಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ.

ಬಾಂಬ್ ಬೆದರಿಕೆ ಸಂದೇಶದಲ್ಲೇನಿತ್ತು?

‘ನಿಮ್ಮ ಶಾಲೆಯಲ್ಲಿ ಬಾಂಬ್ ಸ್ಫೋಟಿಸಿದರೆ ಮಕ್ಕಳು ಸಾಯುತ್ತಾರೆ. ಮಕ್ಕಳು ಸತ್ತರೆ ಮಾತ್ರ ಪೋಷಕರು ಪ್ರತಿಭಟನೆ ಮಾಡುತ್ತಾರೆ. ಪೊಲೀಸರು ಸರಿಯಾದ ತನಿಖೆ ನಡೆಸಿ ಹೈದರಾಬಾದಿನ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸುತ್ತಾರೆ’ ಎಂದು ಇ-ಮೇಲ್ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಆರೋಪಿ ಇದೇ ರೀತಿಯ ಇ-ಮೇಲ್ ಸಂದೇಶ ಕಳುಹಿಸಿದ್ದಳು. ಶಾಲೆಗಳು, ಆಸ್ಪತ್ರೆಗಳು ಮತ್ತು ಕ್ರೀಡಾಂಗಣಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಳು.

ಸದ್ಯ, ಗುಜರಾತಿನ ಅಹಮದಾಬಾದ್ ಪೊಲೀಸರಿಂದ ಆರೋಪಿ ರೀನಾ ಜೋಶಿಲ್ಡ ವಿಚಾರಣೆ ನಡೆಯುತ್ತಿದೆ. ಆಕೆಯನ್ನು ಉಡುಪಿಯ ಶಾಲೆಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಕಸ್ಟಡಿ ನೀಡಲು ಉಡುಪಿ ಪೊಲೀಸರು ಮನವಿ ಮಾಡಿದ್ದಾರೆ. ಅಹಮದಾಬಾದ್ ಪೊಲೀಸರಿಗೆ ಪತ್ರ ಬರೆದಿದ್ದಾರೆ.

ಅಹಮದಾಬಾದ್ ಪೊಲೀಸರ ತನಿಖೆ ಮುಗಿದ ನಂತರ ಆರೋಪಿಯನ್ನು ನಮ್ಮ ವಶಕ್ಕೆ ನೀಡುವ ಸಾಧ್ಯತೆ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕ‌ರ್ ಮಾಹಿತಿ ನೀಡಿದ್ದಾರೆ.