ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Hubli News: ಪತ್ನಿ ಕಿರುಕುಳ; ಡಿವೋರ್ಸ್ ಅರ್ಜಿ ವಿಚಾರಣೆ ದಿನವೇ ಪತಿ ಆತ್ಮಹತ್ಯೆ!

Self Harming: ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ಘಟನೆ ನಡೆದಿದೆ. ಹೆಂಡತಿ ಟಾರ್ಚರ್‌ನಿಂದ ನಾನು ಸಾಯುತ್ತಿದ್ದೇನೆ ಎಂದು ಡೆತ್​ನೋಟ್ ಬರೆದಿಟ್ಟು ಪತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆಂಡತಿ ಅನೈತಿಕ ಸಂಬಂಧವೇ ಪತಿ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ.

ಪತ್ನಿ ಕಿರುಕುಳ; ಡಿವೋರ್ಸ್ ಅರ್ಜಿ ವಿಚಾರಣೆ ದಿನವೇ ಪತಿ ಆತ್ಮಹತ್ಯೆ!

Profile Prabhakara R Jan 27, 2025 6:14 PM

ಹುಬ್ಬಳ್ಳಿ: ಪತ್ನಿ ಕಿರುಕುಳ ತಾಳಲಾರದೆ ಡೆತ್​ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ (Hubli News) ನಡೆದಿದೆ. ಪೀಟರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕೆಲ ದಿನಗಳಿಂದ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು. ಇದರಿಂದ ಮನನೊಂದು ಪತಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.

ಕೆಲ ದಿನಗಳಿಂದ ಪತಿ ಪೀಟರ್​, ಪತ್ನಿ ಪಿಂಕಿ ನಡುವೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಪೀಟರ್​ ಪ್ರಾಣ ಕಳೆದುಕೊಂಡಿದ್ದಾರೆ. ವಿಚ್ಛೇದನ ಅರ್ಜಿ ವಿಚಾರಣೆ ಇಂದು ಕೋರ್ಟ್​ನಲ್ಲಿ ನಡೆಯಬೇಕಿತ್ತು. ಆದರೆ ಅರ್ಜಿ ವಿಚಾರಣೆ ದಿನವೇ ಪತಿ ಆತ್ಮಹತ್ಯೆಗೆ ಶರಣಾಗಿದ್ದು, ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ

ಹೆಂಡತಿ ಟಾರ್ಚರ್‌ನಿಂದ ನಾನು ಸಾಯುತ್ತಿದ್ದೇನೆ ಎಂದು ಡೆತ್​ನೋಟ್ ಬರೆದಿಟ್ಟು ಪತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡ್ಯಾಡಿ‌ ಐ ಆ್ಯಮ್ ಸಾರಿ, ಪಿಂಕಿ (ಪತ್ನಿ) ಇಸ್ ಕಿಲ್ಲಿಂಗ್ ಮೀ, ಶಿ ವಾಂಟ್ ಮೈ ಡೆತ್ ಎಂದು ಡೆತ್​‌ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಪೀಟರ್ ಸಂಬಂಧಿಕರು, ಶವ ಸಂಸ್ಕಾರ ಪೆಟ್ಟಿಗೆ ಮೇಲೆ ಹೆಂಡತಿ ಕಾಟ ತಾಳಲಾರದೆ ಸತ್ತನು ಎಂದು ಬರೆದಿದ್ದಾರೆ.

ಪಿಂಕಿ ಖಾಸಗಿ ಶಾಲೆ‌‌ ಶಿಕ್ಷಕಿಯಾಗಿದ್ದಳು. ಇತ್ತೀಚಿಗೆ ಬೇರೆ ವ್ಯಕ್ತಿ ‌ಜತೆಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇದನ್ನು ಪೀಟರ್ ಮತ್ತು ಕುಟುಂಬಸ್ಥರು ಪ್ರಶ್ನೆ ಮಾಡಿದ್ದರು. ಆದರೆ ಇದಕ್ಕೆ ಪಿಂಕಿ, ನನ್ನ ಜೀವನ ನನ್ನಿಷ್ಟ ಎಂದಿದ್ದಳು. ಅಲ್ಲದೆ ಇತ್ತೀಚೆಗೆ ಪಿಂಕಿ ಹಲವಾರು ತಿಂಗಳು ಗಂಡನಿಂದ ದೂರುವಾಗಿ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಳು. ಇಂದು ಕೋರ್ಟ್ ನಲ್ಲಿ ವಿಚಾರಣೆ ಇತ್ತು. ಆದರೆ ವಿಚ್ಚೇದನಕ್ಕೆ 20 ಲಕ್ಷ ರೂ. ಬೇಡಿಕೆ ಇಟ್ಟಿರುವ ಆರೋಪ ಪತ್ನಿ ವಿರುದ್ಧ ಕೇಳಿಬಂದಿದ್ದು, ಇದರಿಂದ ಪೀಟರ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಸಾವಿಗೂ ಮುನ್ನ ಡೆತ್ ನೋಟ್‌ನಲ್ಲಿ ತನ್ನ ಶವದ ಪೆಟ್ಟಿಗೆ ಮೇಲೆ ಹೆಂಡತಿಯ ಕಿರುಕುಳವೇ ಸಾವಿಗೆ ಕಾರಣ ಎಂದು ಬರೆಯುವಂತೆ ಪತಿ ಮನವಿ ಮಾಡಿದ್ದ. ಹೀಗಾಗಿ ಪತ್ನಿ ಕಿರುಕುಳದಿಂದ ಮೃತಪಟ್ಟ ಪೀಟರ್ ಸಾವಿಗೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Delhi Horror: ಲಿವಿಂಗ್‌ ಟು ಗೆದರ್-ಡೆಡ್ಲಿ ಮರ್ಡರ್! ಸೂಟ್‌ಕೇಸ್‌ನಲ್ಲಿ ಪತ್ತೆಯಾಯಿತು ಯುವತಿಯ ಸುಟ್ಟದೇಹ;

15 ವರ್ಷದ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಲು ಪ್ರಿಯಕರನಿಗೆ ಸಹಕರಿಸಿದ ತಾಯಿ!

ಥಾಣೆ: ತನ್ನ 15 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಿಯಕರನಿಗೆ ತಾಯಿಯೇ ಸಹಕರಿಸಿದ ಘಟನೆ (Physical abuse) ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದ್ದು, ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

2023ರ ನ.9ರಂದು ಸಂತ್ರಸ್ತ ಬಾಲಕಿಗೆ ತನ್ನ 38 ವರ್ಷದ ತಾಯಿ ಮತ್ತು 30 ವರ್ಷದ ಪ್ರಿಯಕರನ ನಡುವಿನ ಅನೈತಿಕ ಸಂಬಂಧದ ಬಗ್ಗೆ ತಿಳಿದಿತ್ತು. ಖಾಸಗಿ ಕ್ಷಣದಲ್ಲಿ ತೊಡಗಿದ್ದಾಗ ಬಾಲಕಿ ನೋಡಿದ್ದರಿಂದ ಆಕೆಯನ್ನು ಆರೋಪಿಗಳು ಬೆದರಿಸಿ ಥಳಿಸಿದ್ದರು. ಮಹಿಳೆಯ ನೆರವಿನಿಂದ 15 ವರ್ಷದ ಬಾಲಕಿಯ ಮೇಲೆ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ ಎಂದು ಕಾಸರವಾಡವಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಬಾಲಕಿ ದೂರಿನ ಮೇರೆಗೆ ಪೋಕ್ಸೊ ಕಾಯ್ದೆಯಡಿ ಅತ್ಯಾಚಾರ, ಬೆದರಿಕೆ, ಹಲ್ಲೆ ಮತ್ತು ಇತರ ಅಪರಾಧಗಳಡಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ ಎಂದು ಬಾಲಕಿಯ ತಂದೆ ಮಾಹಿತಿ ನೀಡಿದ್ದಾರೆ. ಇನ್ನು ಇಷ್ಟು ವಿಳಂಬವಾಗಿ ಪ್ರಕರಣವನ್ನು ಏಕೆ ದಾಖಲಿಸಲಾಗಿದೆ ಎಂಬುದರ ಕುರಿತು ಪೊಲೀಸರು ಯಾವುದೇ ವಿವರಣೆ ನೀಡಿಲ್ಲ. ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Gaza Ceasefire Deal: ಗಾಜಾ ಕದನ ವಿರಾಮ; 200 ಪ್ಯಾಲಸ್ತೀನ್‌ ಖೈದಿಗಳನ್ನು ಬಿಡುಗಡೆಗೊಳಿಸಿದ ಇಸ್ರೇಲ್‌