Viral News: ಖಾಸಗಿ ಅಂಗಕ್ಕೆ ಬಾಟಲಿ ತುರುಕಿಸಿಕೊಂಡ ಯುವತಿ: ಎಕ್ಸ್ ರೇ ನೋಡಿ ವೈದ್ಯರಿಗೇ ಶಾಕ್!
ಯುವತಿಯೊಬ್ಬಳು ತನ್ನ ಖಾಸಗಿ ಅಂಗದೊಳಗೆ (Private part) ಬಾಟಲಿ (Moisturiser Bottle) ತೂರಿಕೊಂಡಿದ್ದರಿಂದ ಸಾಕಷ್ಟು ತೊಂದರೆ ಅನುಭವಿಸಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ನಡೆದಿದೆ. ಲೈಂಗಿಕ ಸುಖ ಅನುಭವಿಸಲು ಯುವತಿ ಹೀಗೆ ಮಾಡಿದ್ದು ಮಾತ್ರವಲ್ಲದೆ ಅದನ್ನು ಮುಚ್ಚಿಟ್ಟು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು (Health Issues) ಎದುರಿಸಬೇಕಾಯಿತು.


ನವದೆಹಲಿ: ಯುವತಿಯೊಬ್ಬಳು ತನ್ನ ಖಾಸಗಿ ಅಂಗದೊಳಗೆ (Private part) ಬಾಟಲಿ (Moisturiser Bottle) ತೂರಿಕೊಂಡಿದ್ದರಿಂದ ಸಾಕಷ್ಟು ತೊಂದರೆ ಅನುಭವಿಸಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ನಡೆದಿದೆ. ಲೈಂಗಿಕ ಸುಖ ಅನುಭವಿಸಲು ಯುವತಿ ಹೀಗೆ ಮಾಡಿದ್ದು ಮಾತ್ರವಲ್ಲದೆ ಅದನ್ನು ಮುಚ್ಚಿಟ್ಟು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು (Health Issues) ಎದುರಿಸಬೇಕಾಯಿತು. ಕೊನೆಗೆ ಅನಿವಾರ್ಯವಾದಾಗ ಆಸ್ಪತ್ರೆಗೆ ಹೋಗಿದ್ದಾಳೆ. ಅಲ್ಲಿ ಎಕ್ಸರೇ ತೆಗೆದ ವೈದ್ಯರು ಇದನ್ನು ನೋಡಿ ಶಾಕ್ ಆಗಿದ್ದಾರೆ. ಆಕೆಯ ಪ್ರಾಣಕ್ಕೆ ತೊಂದರೆಯಾಗುವ ಸಾಧ್ಯತೆ ಇದ್ದುದರಿಂದ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಬಾಟಲಿಯನ್ನು ಹೊರತೆಗಯಲಾಯಿತು.
ಲೈಂಗಿಕ ಸುಖ ಪಡೆಯುವ ಉದ್ದೇಶದಿಂದ ಯುವತಿಯೊಬ್ಬಳು ತನ್ನ ಖಾಸಗಿ ಅಂಗಕ್ಕೆ ಬಾಟಲಿ ತುರಿಸಿದ್ದಳು. ಇದನ್ನು ತೆಗೆಯಲಾಗದೆ ಸಾಕಷ್ಟು ಒದ್ದಾಡಿದ್ದಾಳೆ. ಕೆಲವೊಂದು ತೊಂದರೆಗಳು ಕಾಣಿಸಿಕೊಂಡಾಗ ಅನಿವಾರ್ಯವಾಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಮುಂದಾದಳು.
ಸುಮಾರು 27 ವರ್ಷದ ಯುವತಿ ಲೈಂಗಿಕ ಸುಖ ಪಡೆಯುವ ಸಲುವಾಗಿ ತನ್ನ ಗುಪ್ತಾಂಗಕ್ಕೆ ಬಾಟಲಿ ಹಾಕಿ ಸಾಕಷ್ಟು ತೊಂದರೆ ಅನುಭವಿಸಿದಳು. ಆಕೆಗೆ ಬಳಿಕ ಹೊಟ್ಟೆ ನೋವು ಮತ್ತು ಮಲವಿಸರ್ಜನೆ ಸಮಸ್ಯೆಗಳು ಕಾಣಿಸಿಕೊಂಡಿತ್ತು.
ಅವಮಾನದ ಭಯದಿಂದ ಯಾರಲ್ಲೂ ಇದನ್ನು ಹೇಳದೆ ಎರಡು ದಿನ ಸುಮ್ಮನಿದ್ದಳು. ಮನೆಯಲ್ಲೇ ಅದನ್ನು ತೆಗೆಯಲು ಸಾಕಷ್ಟು ಪ್ರಯತ್ನ ಪಟ್ಟಳು. ಆದರೆ ಸಾಧ್ಯವಾಗಿರಲಿಲ್ಲ. ಬಳಿಕ ಆರೋಗ್ಯ ತುಂಬಾ ಹದಗೆಟ್ಟಿದ್ದರಿಂದ ಯುವತಿ ಗಂಗಾ ರಾಮ್ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಅವಳ ಗುದದ್ವಾರದಲ್ಲಿ ಮಾಯಿಶ್ಚರೈಸರ್ ಬಾಟಲಿ ಸಿಲುಕಿಕೊಂಡಿರುವುದು ಪತ್ತೆಯಾಗಿದೆ.
ಎಕ್ಸ್-ರೇ ತೆಗೆದ ವೈದ್ಯರು ಗುದನಾಳದ ಮೇಲ್ಭಾಗದಲ್ಲಿ ಬಾಟಲಿ ಸಿಕ್ಕಿಕೊಂಡಿರುವುದನ್ನು ತಿಳಿಸಿದರು. ಬಳಿಕ ವೈದ್ಯರು ಇದನ್ನು ತೆಗೆಯುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಯುವತಿಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ವೈದ್ಯರು ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ. ಬಳಿಕ ಆಕೆಗೆ ತುರ್ತು ಶಸ್ತ್ರ ಚಿಕಿತ್ಸೆ ನಡೆಸಿ ಬಾಟಲಿಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಅರಿವಳಿಕೆ ತಜ್ಞ ಡಾ. ಪ್ರಶಾಂತ್ ಅಗರ್ವಾಲ್, ಡಾ. ತರುಣ್ ಮಿತ್ತಲ್, ಆಶಿಶ್ ಡೇ, ಅನ್ಮೋಲ್ ಅಹುಜಾ ಮತ್ತು ಶ್ರೇಯಸ್ ಮಾಂಗ್ಲಿಕ್ ಅವರನ್ನೊಳಗೊಂಡ ವೈದ್ಯಕೀಯ ತಂಡವು ಈ ಶಸ್ತ್ರಚಿಕಿತ್ಸೆಯನ್ನು ನಡೆಸಿತು.
ಇದನ್ನೂ ಓದಿ: Betting App Scam: ಮದ್ವೆ ಮಂಟಪಕ್ಕೆ ನುಗ್ಗಿದ ಇಡಿ ಅಧಿಕಾರಿಗಳು; ಸಪ್ತಪದಿ ತುಳಿಯುವ ಮುನ್ನ ವರ ಎಸ್ಕೇಪ್!
ಕರುಳು ಒಡೆದುಹೋಗುವ ಭಯವಿದ್ದುದರಿಂದ ತುರ್ತು ಶಸ್ತ್ರಚಿಕಿತ್ಸೆಗೆ ಆಕೆಯನ್ನು ಒಳಪಡಿಸಬೇಕಾಯಿತು. ಸಿಗ್ಮಾಯಿಡೋಸ್ಕೋಪಿ ವಿಧಾನದ ಮೂಲಕ ಬಾಟಲಿಯನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಕರುಳನ್ನು ಕತ್ತರಿಸುವ ಅಗತ್ಯವಿಲ್ಲದ ಈ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಚಿಕಿತ್ಸೆಯ ಬಳಿಕ ಯುವತಿಯ ನೋವು ಕಡಿಮೆಯಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಆಕೆಯ ಸ್ಥಿತಿ ಸುಧಾರಿಸಿದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.