ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BK Hariprasad: ಮುಖ್ಯಮಂತ್ರಿ ಬದಲಾವಣೆ ಚರ್ಚೆ; ಕಾಂಗ್ರೆಸ್‌ ಮುಖಂಡ ಹರಿಪ್ರಸಾದ್‌ ಹೇಳಿದ್ದೇನು?

ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು, ʼʼಹೈಕಮಾಂಡ್ ಈಗ ಕಲಬುರಗಿಯಲ್ಲೇ ಇದ್ದಾರೆ. ಅವರು ಬಂದಾಗ ಕೇಳಿ. ಅವರೇ ಹೇಳ್ತಾರೆ. ಕೆಪಿಸಿಸಿ ಅಧ್ಯಕ್ಷರು, ಸಚಿವರ ಬದಲಾವಣೆ ಎಲ್ಲವು ಹೈಕಮಾಂಡ್ ತೀರ್ಮಾನ ಮಾಡುತ್ತೆʼʼ ಎಂದು ತಿಳಿಸಿದ್ದಾರೆ.

ಸಿಎಂ ಬದಲಾವಣೆ ಚರ್ಚೆಗೆ ಹರಿಪ್ರಸಾದ್‌ ಹೇಳಿದ್ದೇನು?

ಹರಿಪ್ರಸಾದ್‌.

Profile Ramesh B Feb 16, 2025 2:55 PM

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಕೆಲವು ದಿನಗಳಿಂದ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ (BK Hariprasad) ಅವರು, ʼʼಹೈಕಮಾಂಡ್ ಈಗ ಕಲಬುರಗಿಯಲ್ಲೇ ಇದ್ದಾರೆ. ಅವರು ಬಂದಾಗ ಕೇಳಿ. ಅವರೇ ಹೇಳ್ತಾರೆ. ಕೆಪಿಸಿಸಿ ಅಧ್ಯಕ್ಷರು, ಸಚಿವರ ಬದಲಾವಣೆ ಎಲ್ಲವು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಸರ್ಕಾರ ಬಂದಾಗಿನಿಂದಲು ಈ ರೀತಿಯ ಎಲ್ಲ ಚರ್ಚೆ ಆಗ್ತಿದೆ. ರಾಜಕೀಯದಲ್ಲಿ ಇಂತಹ ಚರ್ಚೆಗಳು ನಡೆಯುತ್ತಲೆ ಇರುತ್ತವೆʼʼ ಎಂದರು.

ʼʼನನ್ನ ವಿಚಾರದಲ್ಲಿ ಯಾವ ಶ್ರೀಗಳು ಮಾತಾಡಬಾರದು. ಅದರಲ್ಲೂ ರಾಜಕೀಯವಂತೂ ಸ್ವಾಮೀಜಿಗಳು ಮಾತಡಲೇಬಾರದುʼʼ ಎಂದು ಹರಿಪ್ರಸಾದ್‌ ತಿಳಿಸಿದರು.



ಯೋಜಿತ ಕೃತ್ಯ

ʼʼಇನ್ನು ಮೈಸೂರಿನ ಉದಯಗಿರಿಯಲ್ಲಿ ನಡೆದ ಗಲಾಟೆ ಬಿಜೆಪಿ, ಆರ್‌ಎಸ್‌ಎಸ್‌ ಕೃಪಾಪೋಷಿತ ಕೃತ್ಯ. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಅಂತ ಹೇಳಿದ್ದೇವೆ. ಆದರೆ ಅವರು ಶಾಂತಿ ಕದಡಲು ಬಹಳ ಪ್ರಯತ್ನ ಪಡ್ತಿದ್ದಾರೆ. ಬಿಜೆಪಿ ಅಧಿಕಾರ ಇದ್ದಾಗ ಸೃಷ್ಟಿಯಾದ ಅಶಾಂತಿಯ ವಾತಾವರಣದ ಶೇ. 90ರಷ್ಟು ಎರಡೇ ತಿಂಗಳಲ್ಲಿ ಕಡಿಮೆ ಆಗಿದೆ. ನಾನು ಗೃಹ ಸಚಿವರಿಗೆ ಹೇಳೋದು ಇಷ್ಟೇ. ಯಾರೇ ಆಗಲಿ ಯಾವ ಧರ್ಮ ಜಾತಿ ಭಾಷೆ ಹೆಸರಲ್ಲಿ ಶಾಂತಿ ಕದಡಿದ್ರೆ ಕಾನೂನಿನ ಮೂಲಕ ಕಠಿಣ ಕ್ರಮ ತೆಗೆದುಕೊಳ್ಳಬೇಕುʼʼ ಎಂದು ಹೇಳಿದರು.

ʼʼವಿಜಯಪುರದಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದವನು ಸಂಘ ಪರಿವಾರದವನು. ಸಂಘ ಪರಿವಾರದವರು ಕೆಲವು ಕಡೆ ಬುರ್ಖಾ ಹಾಕೊಂಡು ಹೋಗಿ ಗಲಾಟೆ ಮಾಡುತ್ತಾರೆ. ಇದೇನು ಹೊಸದಲ್ಲ. ಅವರ ಪಿತೃಪಕ್ಷ ಆರ್‌ಎಸ್‌ಎಸ್‌ಗೆ 100 ವರ್ಷ ತುಂಬುತ್ತಿದೆ. ಹಾಗಾಗಿ ಇದನ್ನೆಲ್ಲೆ ಅವರೇ ಮಾಡ್ತಾರೆ. ಅವರ ಎಲ್ಲ ಚಿಂತನೆಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗುತ್ತಿದ್ದಾರೆ. ಆದರೆ ಅದು ಕರ್ನಾಟಕದಲ್ಲಿ ಸಾಧ್ಯವಲ್ಲ. ಶಾಂತಿ ಕದಡುವ ಯತ್ನ ಇವರೇ ಮಾಡ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಇದೆʼʼ ಎಂದು ಹರಿಪ್ರಸಾದ್‌ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಸೇರಿದ ಶಿವರಾಮೇ ಗೌಡ, ಬ್ರಿಜೇಶ್ ಕಾಳಪ್ಪ

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹಾಗೂ ಆಪ್ ಮುಖಂಡ ಬ್ರಿಜೇಶ್ ಕಾಳಪ್ಪ ಅಧಿಕೃತವಾಗಿ ಭಾನುವಾರ (ಫೆ. 16) ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಮಾಜಿ ಸಂಸದ ಶಿವರಾಮೇಗೌಡ ಮತ್ತು ಪುತ್ರ ಮಂಜೇಗೌಡ, ಬ್ರಿಜೇಶ್ ಕಾಳಪ್ಪ ಮತ್ತು ಎಲ್.ಎಸ್.ಚೇತನ್ ಗೌಡ ಕಾಂಗ್ರೆಸ್ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸ್ವಾಗತಿಸಿದರು. ಎಲ್.ಆರ್. ಶಿವರಾಮೇಗೌಡ ಅವರ ಬೆಂಬಲಿಗರೂ ಕೂಡ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್​ ಸೇರಿದ್ದಾರೆ.

ಎಲ್.​ಆರ್​.ಶಿವರಾಮೇಗೌಡ ಅವರು ಇತ್ತೀಚಿಗೆ ಬಿಜೆಪಿ ಸೇರಿದ್ದರು. ಇದೀಗ ಮರಳಿ ಕಾಂಗ್ರೆಸ್​ ಸೇರಿಕೊಂಡಿದ್ದಾರೆ. ಕಾಂಗ್ರೆಸ್​ ತೊರೆದು ಆಮ್​ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದ ಬ್ರಿಜೇಶ್​ ಕಾಳಪ್ಪ ಕೂಡ ಮರಳಿ ಪಕ್ಷಕ್ಕೆ ವಾಪಸ್​ ಆಗಿದ್ದಾರೆ. ಮೊದಲು ಕಾಂಗ್ರೆಸ್‌ನಲ್ಲಿದ್ದ ಬ್ರಿಜೇಶ್ ಕಾಳಪ್ಪ ಬಳಿಕ ಆಮ್ ಆದ್ಮಿ ಪಕ್ಷವನ್ನು ಸೇರಿದ್ದರು. ಆಮ್ ಆದ್ಮಿ ಪಕ್ಷ ಅವರಿಗೆ ರಾಷ್ಟ್ರೀಯ ವಕ್ತಾರ ಸ್ಥಾನವನ್ನು ನೀಡಿತ್ತು. 2023ರ ಡಿಸೆಂಬರ್‌ನಲ್ಲಿ ಬ್ರಿಜೇಶ್ ಕಾಳಪ್ಪ ಆಪ್‌ಗೆ ರಾಜೀನಾಮೆ ನೀಡಿದ್ದರು.