IND vs ENG: ಇಂಗ್ಲೆಂಡ್ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ? ಕನ್ನಡಿಗನಿಗೆ ಅವಕಾಶ!
Rohit sharma set to England Tour: ಇಂಗ್ಲೆಂಡ್ ಪ್ರವಾಸದ ಐದು ಪಂದ್ಯಗಳ ಟೆಸ್ಟ್ ಸರಣಿಯ ಭಾರತ ತಂಡವನ್ನು ರೋಹಿತ್ ಶರ್ಮಾ ಅವರೇ ಮುನ್ನಡೆಸಲಿದ್ದಾರೆಂದು ವರದಿಯಾಗಿದೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಸರಣಿಗಳಲ್ಲಿನ ವೈಫಲ್ಯದ ಹೊರತಾಗಿಯೂ ಬಲಗೈ ಬ್ಯಾಟ್ಸ್‌ಮನ್ ಅನ್ನು ಇಂಗ್ಲೆಂಡ್ ಪ್ರವಾಸಕ್ಕೆ ಪರಿಗಣಿಸಲಾಗಿದೆ.

ಭಾರತ ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾ.

ನವದೆಹಲಿ: ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಸರಣಿಗಳಲ್ಲಿ ಬ್ಯಾಟಿಂಗ್ ಹಾಗೂ ನಾಯಕತ್ವದಲ್ಲಿ ವಿಫಲವಾಗಿದ್ದರ ಹೊರತಾಗಿಯೂ ಮುಂಬರುವ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ(IND vs ENG) ರೋಹಿತ್ ಶರ್ಮಾ(Rohit Sharma) ಅವರೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆಂದು ವರದಿಯಾಗಿದೆ. ಜೂನ್ ತಿಂಗಳಲ್ಲಿ ಆರಂಭವಾಗುವ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇಂಗ್ಲೆಂಡ್ ಟೆಸ್ಟ್ ಸರಣಿಯ ಭಾರತ ತಂಡವನ್ನು ಮೇ ಎರಡನೇ ವಾರದಲ್ಲಿ ಬಿಸಿಸಿಐ (BCCI) ಪ್ರಕಟಿಸುವ ಸಾಧ್ಯತೆ ಇದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಎರಡು ಸ್ಥಾನಗಳಿಗೆ ಆರು ಮಂದಿ ಆಟಗಾರರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಕೂಡ ವರದಿ ತಿಳಿಸಿದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ 17 ಸದಸ್ಯರ ಭಾರತ ತಂಡವನ್ನು ಕಳುಹಿಸಲಾಗಿದೆ. ಆದರೆ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ 15 ಅಥವಾ 16 ಸದಸ್ಯರನ್ನು ಆಯ್ಕೆ ಮಾಡಬಹುದು. ಈ ಅವಧಿಯಲ್ಲಿ ಭಾರತ ಎ ತಂಡ ಕೂಡ ಇಂಗ್ಲೆಂಡ್‌ನಲ್ಲಿ ಇರಲಿದೆ. ಹಾಗಾಗಿ ಹೆಚ್ಚುವರಿ ಆಟಗಾರರ ಅಗತ್ಯವಿದ್ದರೆ, ಭಾರತ ಎ ತಂಡದಿಂದ ಪಡೆಯಬಹುದಾಗಿದೆ.
ʻಶ್ರೇಯಸ್ ಅಯ್ಯರ್, ಇಶಾನ್ ಕಿಶಾನ್‌ಗೆ ಸ್ಥಾನʼ:2024-25ರ ಸಾಲಿನ ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟಿಸಿದ ಬಿಸಿಸಿಐ!
ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯ ಭಾರತ ತಂಡದಲ್ಲಿ ಹಲವು ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು. ಕಳೆದ ದೇಶಿ ಆವೃತ್ತಿಯಲ್ಲಿ ರಣಜಿ ಹಾಗೂ ವೈಟ್‌ಬಾಲ್ ಎರಡೂ ಟೂರ್ನಿಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ್ದ ವಿದರ್ಭ ಪರ ಆಡುವ ಕನ್ನಡಿಗ ಕರುಣ್ ನಾಯರ್ ಅವರಿಗೆ ಭಾರತ ʻಎʼ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಅಲ್ಲದೆ, ಭಾರತ ಟೆಸ್ಟ್ ತಂಡಕ್ಕೂ ಇವರನ್ನು ಆಯ್ಕೆ ಮಾಡಬಹುದು.
ಐವರು ಸ್ಟಾರ್‌ಗಳಿಗೆ ನೇರವಾಗಿ ಆಯ್ಕೆ
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಫಿಟ್ ಇದ್ದರೆ, ಇವರೆಲ್ಲರೂ ನೇರವಾಗಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆಯಲಿದ್ದಾರೆ. ತಂಡದ ಆಲ್‌ರೌಂಡರ್ ಸ್ಥಾನಕ್ಕೆ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಪರಿಗಣಿಸಲಾಗುತ್ತದೆ. ಅವರು, ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ನಿತೀಶ್ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದರು. ಅವರು ಇಲ್ಲಿ ಶತಕವನ್ನು ಕೂಡ ಬಾರಿಸಿದ್ದರು.
BCCI BCCI sacks coaching staff: ಕೋಚಿಂಗ್ ಸಿಬ್ಬಂದಿಗಳ ಕಡಿತ; ಅಭಿಷೇಕ್ ನಾಯರ್, ದಿಲೀಪ್‌ಗೆ ಗೇಟ್ ಪಾಸ್
ಭಾರತ ಟೆಸ್ಟ್ ತಂಡದ ಆಯ್ಕೆಯ ರೇಸ್‌ನಲ್ಲಿ 6 ಮಂದಿ
ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ರೇಸ್‌ನಲ್ಲಿ ಒಟ್ಟು ಆರು ಮಂದಿ ಆಟಗಾರರು ಇದ್ದಾರೆ. ಇವರ ಪೈಕಿ ಇಬ್ಬರು ಆಟಗಾರರನ್ನು ಟೆಸ್ಟ್ ತಂಡಕ್ಕೆ ಪರಿಗಣಿಸಬಹುದು. ಇನ್ನುಳಿದ ಆಟಗಾರರು ಭಾರತ ʻಎʼ ತಂಡದ ಪರ ಆಡಬಹುದು. ಇಂಗ್ಲೆಂಡ್ ಲಯನ್ಸ್ ವಿರುದ್ದ ಭಾರತ ಎ ತಂಡ ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ಟೆಸ್ಟ್ ತಂಡಕ್ಕೆ ಪರಿಗಣಿಸಬಹುದು.
ತಮಿಳುನಾಡಿನ ಸಾಯಿ ಸುದರ್ಶನ್, ಶ್ರೇಯಸ್ ಅಯ್ಯರ್, ಕರುಣ್ ನಾಯರ್, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್ ಹಾಗೂ ಸರ್ಫರಾಝ್ ಖಾನ್ ಅವರು ಭಾರತ ಟೆಸ್ಟ್ ತಂಡದ ರೇಸ್‌ನಲ್ಲಿದ್ದಾರೆ. ಇವರ ಪೈಕಿ ಶ್ರೇಯಸ್ ಅಯ್ಯರ್, ಕರುಣ್ ನಾಯರ್ ಹಾಗೂ ಸಾಯಿ ಸುದರ್ಶನ್ ಅವರನ್ನು ಆಯ್ಕೆ ಮಾಡಬಹುದು.