Viral Video: ರೀಲ್ಸ್‌ಗಾಗಿ ವಾಷಿಂಗ್ ಮೆಷಿನ್‍ನೊಳಗೆ ಕಲ್ಲು ಹಾಕಿದ ಭೂಪ! ಇದೆಂಥಾ ಹುಚ್ಚಾಟ ನೋಡಿ
ವ್ಯಕ್ತಿಯೊಬ್ಬ ವಾಷಿಂಗ್ ಮೆಷಿನ್‍ನೊಳಗೆ ಕಲ್ಲು ಹಾಕಿದ ವಿಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ. ಕೆಲವರಂತೂ ಇವನ ಕೆಲಸ ನೋಡಿ ಟೀಕೆಯ ಸುರಿಮಳೆ ಹರಿಸಿದ್ದಾರೆ.


ಇತ್ತೀಚಿನ ದಿನಗಳಲ್ಲಿ ಜನರು ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂವ್ಸ್‌ಗಾಗಿ ಯಾವ ಮಟ್ಟಕ್ಕಾದರೂ ಜನ ಹೋಗುತ್ತಾರೆ. ಅದೇ ರೀತಿ ಇತ್ತೀಚೆಗೆ ವ್ಯಕ್ತಿಯೊಬ್ಬ ಅಸಾಮಾನ್ಯವಾದ ಪ್ರಯೋಗಗಳನ್ನು ಮಾಡುವ ವಿಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್(Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ, ಒಬ್ಬ ವ್ಯಕ್ತಿಯು ಹೊಸ ವಾಷಿಂಗ್ ಮಷಿನ್ ಸಾಮರ್ಥ್ಯವನ್ನು ಪರೀಕ್ಷಿಸಲು ಬಟ್ಟೆ ಹಾಕುವ ಬದಲು ಕಲ್ಲುಗಳನ್ನು ಹಾಕಿದ್ದಾನೆ. ಇವನ ಈ ಕೃತ್ಯ ನೋಡಿ ನೆಟ್ಟಿಗರು ಕಿಡಿಕಾರಿದ್ದಾರೆ.
ವಾಷಿಂಗ್ ಮೆಷಿನ್ ಅನ್ನು ಬಟ್ಟೆಗಳಿಂದ ಲೋಡ್ ಮಾಡುವ ಬದಲು, ಅವನು ಅದರ ಒಳಗೆ ದೊಡ್ಡ ಕಲ್ಲನ್ನು ಇರಿಸಿ ಮೆಷಿನ್ ಆನ್ ಮಾಡಿದ್ದಾನೆ. ಮೆಷಿನ್ ಆನ್ ಆಗುತ್ತಿದ್ದಂತೆ ಅದು ಅಲುಗಾಡಲು ಶುರುಮಾಡಿದೆ. ಕಲ್ಲು ಒಳಗೆ ತಿರುಗುತ್ತಿದ್ದಂತೆ ವಾಷಿಂಗ್ ಮಷಿನ್ ಅನಿಯಮಿತವಾಗಿ ಚಲಿಸಿದೆ. ಇದರ ಪರಿಣಾಮವಾಗಿ ಯಂತ್ರದ ಭಾಗಗಳು ಒಂದೊಂದಾಗಿ ಒಡೆದು ಸಂಪೂರ್ಣವಾಗಿ ಹಾಳಾಗಿದೆ. ಯಂತ್ರದ ಡ್ರಮ್ ಕೂಡ ಬೇರ್ಪಟ್ಟಿದೆಯಂತೆ.
ವೈರಲ್ ವಿಡಿಯೊ ಇಲ್ಲಿದೆ ನೋಡಿ...
ಈ ವಿಚಿತ್ರ ದೃಶ್ಯವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಕೆಲವೇ ಗಂಟೆಗಳಲ್ಲಿ 76,000 ಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿದೆ. ಈ ವಿಡಿಯೊಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. "ನಿಮ್ಮ ಅಪ್ಪ ಮನೆಯಲ್ಲಿ ಬೆಲ್ಟ್ ಧರಿಸುವುದಿಲ್ಲವೇ?" ಎಂದು ಒಬ್ಬರು ತಮಾಷೆಯಾಗಿ ಕೇಳಿದ್ದಾರೆ, ಇನ್ನೊಬ್ಬರು "ಮೆಷಿನ್‌ನ ಆತ್ಮವು ದೇಹವನ್ನು ಬಿಟ್ಟು ಹೊರಟುಹೋಯಿತು" ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ವ್ಯಕ್ತಿಯ ಕೆಲಸದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ಒಂದು ಒಳ್ಳೆಯ ಉಪಕರಣವನ್ನು ಹಾಳುಮಾಡಿದ್ದಕ್ಕಾಗಿ ಟೀಕಿಸಿದ್ದಾರೆ.
ಒಟ್ಟಾರೆ ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮತ್ತು ಕೆಲವರು ಸೋಶಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಯಾವ ಮಟ್ಟಕ್ಕೆ ಇಳಿಯುತ್ತಾರೆ ಎಂಬುದನ್ನು ಇದು ತೋರಿಸುತ್ತದೆ.
ಈ ಸುದ್ದಿಯನ್ನೂ ಓದಿ:Viral Video: ಆಟೋದಲ್ಲಿ ಹೋಗುತ್ತಿದ್ದ ಮಹಿಳೆಗೆ ಬಟ್ಟೆ ಬಿಚ್ಚಿ ಕಿರುಕುಳ; ಶಾಕಿಂಗ್ ವಿಡಿಯೊ ಇಲ್ಲಿದೆ
ಈ ಹಿಂದೆ ಮಹಿಳೆಯೊಬ್ಬಳು ಆಲೂಗಡ್ಡೆಯ ಸಿಪ್ಪೆ ಸುಲಿಯಲು ವಾಷಿಂಗ್ ಮೆಷಿನ್ ಅನ್ನು ಬಳಸಿದ್ದಳು. ಬಟ್ಟೆ ಒಗೆಯುವ ಮೆಷಿನ್ ಅನ್ನು ಆಲೂಗಡ್ಡೆ ಸಿಪ್ಪೆ ಸುಲಿಯಲು ಮಹಿಳೆ ಬಳಸಿದ್ದಕ್ಕಾಗಿ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ವಿಡಿಯೊದಲ್ಲಿ ಮಹಿಳೆಯೊಬ್ಬಳು ಬಿಳಿ ವಾಷಿಂಗ್ ಮಷಿನ್ ಪಕ್ಕದಲ್ಲಿ ಕುಳಿತು ಆಲೂಗಡ್ಡೆ ತುಂಬಿದ ಬಟ್ಟಲನ್ನು ಹತ್ತಿರದ ನೆಲದ ಮೇಲೆ ಇರಿಸಿಕೊಂಡು ವಾಷಿಂಗ್ ಮಷಿನ್ ಒಳಗೆ ಆಲೂಗಡ್ಡೆಯನ್ನು ಹಾಕಿದ್ದಳು. ಆಲೂಗಡ್ಡೆಯ ಸಿಪ್ಪೆ ಸುಲಿಯಲು ವಾಷಿಂಗ್ ಮಷಿನ್ ಬಳಸುವ ಆಲೋಚನೆ ಕೆಲವರಿಗೆ ಹೊಸದಾಗಿ ತೋರಿದರೂ, ಅನೇಕ ಬಳಕೆದಾರರು ಸಂದೇಹ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದಾರೆ.