Bansuri Swaraj: 'ನ್ಯಾಷನಲ್ ಹೆರಾಲ್ಡ್‌ನ ಲೂಟಿ'- ಜೆಪಿಸಿ ಸಭೆಯಲ್ಲಿ ಗಮನ ಸೆಳೆದ ಬನ್ಸುರಿ ಸ್ವರಾಜ್ ಬ್ಯಾಗ್
ಜಂಟಿ ಸಂಸದೀಯ ಸಮಿತಿ (JPC) ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಸಂಸದ (BJP MP) ಬನ್ಸುರಿ ಸ್ವರಾಜ್ (Bansuri Swaraj ) ಅವರ ಬ್ಯಾಗ್ ಮೇಲೆ "ನ್ಯಾಷನಲ್ ಹೆರಾಲ್ಡ್ ಕಿ ಲೂಟ್" ಎಂದು ಬರೆಯಲಾಗಿದ್ದು, ಇದು ಎಲ್ಲರ ಗಮನ ಸೆಳೆದಿದೆ. ಕಾಂಗ್ರೆಸ್ (Congress) ಅನ್ನು ಟೀಕಿಸಲು ಅವರು ಈ ಬ್ಯಾಗ್ ಅನ್ನು ಧೈರ್ಯದಿಂದ ಹಿಡಿದುಕೊಂಡು ಸಭೆಗೆ ಬಂದರುವುದು ಸ್ಪಷ್ಟವಾಗಿದೆ..


ನವದೆಹಲಿ: 'ಒಂದು ರಾಷ್ಟ್ರ, ಒಂದು ಚುನಾವಣೆ' ( One Nation, One Election) ಕುರಿತು ಪಾರ್ಲಿಮೆಂಟ್ ನ ಅನೆಕ್ಸ್ ಕಟ್ಟಡದಲ್ಲಿ ಸೋಮವಾರ ಆಯೋಜಿಸಲಾದ ಜಂಟಿ ಸಂಸದೀಯ ಸಮಿತಿ (JPC) ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಸಂಸದ (BJP MP) ಬನ್ಸುರಿ ಸ್ವರಾಜ್ (Bansuri Swaraj) ಅವರು ಹಿಡಿದುಕೊಂಡಿದ್ದ ಬ್ಯಾಗ್ ನ ಮೇಲಿದ್ದ ಬರಹವು ಎಲ್ಲರ ಗಮನ ಸೆಳೆದಿತ್ತು. ಇದರ ಚಿತ್ರ ಸಾಮಾಜಿಕ ಜಾಲತಾಣದಲ್ಲೂ ವೈರಲ್ (Viral Video) ಆಗಿದೆ. ಬನ್ಸುರಿ ಸ್ವರಾಜ್ ಅವರ ಬ್ಯಾಗ್ ಮೇಲೆ "ನ್ಯಾಷನಲ್ ಹೆರಾಲ್ಡ್ ಕಿ ಲೂಟ್" ಎಂದು ಬರೆಯಲಾಗಿತ್ತು. ಕಾಂಗ್ರೆಸ್ (Congress) ಅನ್ನು ಟೀಕಿಸಲು ಅವರು ಈ ಬ್ಯಾಗ್ ಅನ್ನು ಧೈರ್ಯದಿಂದ ಹಿಡಿದುಕೊಂಡರು.
ಬನ್ಸುರಿ ಸ್ವರಾಜ್ ಅವರ ಬ್ಯಾಗ್ ಮೇಲಿನ ಈ ಸಂದೇಶವು ಎಲ್ಲರ ದೃಷ್ಟಿಗೂ ಬೀಳುವಂತೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ಕಾಂಗ್ರೆಸ್ ಪಕ್ಷದ ಮೇಲಿನ ಬಿಜೆಪಿ ಮಾಡುತ್ತಿರುವ ದೀರ್ಘಕಾಲದ ದಾಳಿಯನ್ನು ಇದು ಮತ್ತೆ ಪ್ರಚೋದಿಸಿತು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಬನ್ಸುರಿ ಸ್ವರಾಜ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಭ್ರಷ್ಟಾಚಾರವು ಮೊದಲ ಬಾರಿಗೆ ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾದ ಮಾಧ್ಯಮವನ್ನು ಭೇದಿಸಿದೆ ಎಂದು ಹೇಳಿದರು. ಜಾರಿ ನಿರ್ದೇಶನಾಲಯದ ಚಾರ್ಜ್‌ಶೀಟ್ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಕಾರ್ಯವೈಖರಿ ಮತ್ತು ಸಿದ್ಧಾಂತವನ್ನು ಬಹಿರಂಗಪಡಿಸಿದೆ. ಅದು ಸಾರ್ವಜನಿಕ ಸೇವೆಯ ಉದ್ದೇಶ ಹೊಂದಿರುವ ಸಂಸ್ಥೆಗಳನ್ನು ವೈಯಕ್ತಿಕ ಲಾಭಕ್ಕಾಗಿ ಬಳಕೆ ಮಾಡಿದೆ. ಜನರಿಗೆ ಸೇವೆ ಸಲ್ಲಿಸುವ ನೆಪದಲ್ಲಿ ಸಾರ್ವಜನಿಕ ಟ್ರಸ್ಟ್‌ಗಳನ್ನು ಖಾಸಗಿ ಆಸ್ತಿಯನ್ನಾಗಿ ಪರಿವರ್ತಿಸಿರುವುದು ಅತ್ಯಂತ ವಿಷಯ. ಇದಕ್ಕೆ ಕಾಂಗ್ರೆಸ್ ಪಕ್ಷ ಮತ್ತು ಅದರ ಉನ್ನತ ನಾಯಕರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದರು.
#WATCH | Delhi: BJP MP Bansuri Swaraj arrives at Parliament Annexe building to attend JPC meeting on 'One Nation One Election' carrying a bag with 'National Herald Ki Loot' written on it pic.twitter.com/i4zhdkdF0m
— ANI (@ANI) April 22, 2025
ಜಾರಿ ನಿರ್ದೇಶನಾಲಯ (ಇಡಿ)ವು ಇತ್ತೀಚೆಗೆ 988 ಕೋಟಿ ರೂ. ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇನ್ನು ಹಲವರ ವಿರುದ್ಧ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಇದರಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮೊದಲ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಅವರ ಮಗ ರಾಹುಲ್ ಗಾಂಧಿ ಅವರನ್ನು ಎರಡನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಇದನ್ನೂ ಓದಿ: Terror Attack: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ; ಆರು ಮಂದಿ ಪ್ರವಾಸಿಗರಿಗೆ ಗಾಯ
ನ್ಯಾಷನಲ್ ಹೆರಾಲ್ಡ್ ಪ್ರಕರಣ
ಜವಾಹರಲಾಲ್ ನೆಹರು ಮತ್ತು ಅವರೊಂದಿಗೆ ಇದ್ದ ಕೆಲವು ಸ್ವಾತಂತ್ರ್ಯ ಹೋರಾಟಗಾರರು 1938 ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಾರಂಭಿಸಿದರು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಪ್ರಕಟಿಸಿದ ಈ ಪತ್ರಿಕೆ ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖವಾಣಿಯಾಗಿತ್ತು. ಇಂಗ್ಲಿಷ್ ಜೊತೆಗೆ, ಹಿಂದಿ ಮತ್ತು ಉರ್ದು ಭಾಷೆಗಳಲ್ಲೂ ಇದನ್ನು ಪ್ರಕಟಿಸಲಾಗುತ್ತಿತ್ತು. ಆದರೂ 2008ರಲ್ಲಿ 90 ಕೋಟಿ ರೂ. ಗಳಿಗೂ ಹೆಚ್ಚಿನ ಸಾಲದ ಹೊರೆಯಿಂದ ನ್ಯಾಷನಲ್ ಹೆರಾಲ್ಡ್ ಕಚೇರಿಯು ಬಾಗಿಲು ಹಾಕಿತು.
ಬಿಜೆಪಿ ನಾಯಕ ಮತ್ತು ವಕೀಲ ಸುಬ್ರಮಣಿಯನ್ ಸ್ವಾಮಿ 2012 ರಲ್ಲಿ ಈ ಕುರಿತು ವಿಚಾರಣಾ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದಾಗ ಅದರ ಆಸ್ತಿಗಳ ಕುರಿತು ವಿವಾದ ಹುಟ್ಟುಕೊಂಡಿತ್ತು. ಇದರಲ್ಲಿ ಕೆಲವು ಕಾಂಗ್ರೆಸ್ ನಾಯಕರು ವಂಚನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಯಂಗ್ ಇಂಡಿಯನ್ ಲಿಮಿಟೆಡ್ ಸಂಸ್ಥೆಯು ನ್ಯಾಷನಲ್ ಹೆರಾಲ್ಡ್‌ನ ಆಸ್ತಿಗಳ ಮೇಲೆ ನಿಯಂತ್ರಣ ಪಡೆದುಕೊಂಡಿದೆ. ಇದು ದುರುದ್ದೇಶಪೂರಿತ ಸ್ವಾಧೀನವಾಗಿದೆ ಎಂದು ಸ್ವಾಮಿ ಆರೋಪಿಸಿದ್ದರು.