ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Language row: ತಮಿಳಿನಿಂದಲೇ ಕನ್ನಡ ಸೇರಿ 3 ಭಾಷೆಗಳ ಉಗಮ; ತಮಿಳುನಾಡಿನ 7ನೇ ಕ್ಲಾಸ್‌ ಪುಸ್ತಕದಲ್ಲಿ ವಿವಾದಾತ್ಮಕ ಪಠ್ಯ!

Language row: ತಮಿಳುನಾಡಿನ ಪಠ್ಯ ಪುಸ್ತಕದಲ್ಲಿ ಕನ್ನಡ, ತೆಲುಗು, ಮಲಯಾಳಂಗಳ ತಾಯಿ ತಮಿಳು ಎಂದು ಉಲ್ಲೇಖಿಸಿರುವುದನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ತಮಿಳು ಪಠ್ಯದಲ್ಲಿ ಇರುವ ಈ ಅಂಶವು ಭಾರಿ ವಿವಾದಕ್ಕೆ ಕಾರಣವಾಗಿದೆ.

ತಮಿಳಿನಿಂದಲೇ ಕನ್ನಡ ಉಗಮ; ತಮಿಳುನಾಡಿನಲ್ಲಿ ವಿವಾದಾತ್ಮಕ ಪಠ್ಯ!

Profile Prabhakara R Jun 7, 2025 4:54 PM

ಬೆಂಗಳೂರು: ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ನಟ ಕಮಲ್ ಹಾಸನ್ ಅವರು ವಿವಾದಾತ್ಮಕ ಹೇಳಿಕೆ ನೀಡಿರುವುದಕ್ಕೆ ತಮಿಳುನಾಡಿನಲ್ಲಿ ದಶಕಗಳಿಂದ ಹೇಳಿಕೊಂಡು ಬರುತ್ತಿರುವ ಸುಳ್ಳೊಂದು ಕಾರಣ ಎಂಬುವುದು ಬಹಿರಂಗವಾಗಿದೆ. ತಮಿಳುನಾಡಿನ ಪಠ್ಯ ಪುಸ್ತಕಗಳಲ್ಲಿಯೇ ತಮಿಳಿನಿಂದ ಕನ್ನಡ ಭಾಷೆ ಉಗಮವಾಗಿದೆ ಎಂದು ಹೇಳಲಾಗಿದೆ. ಹೌದು, ತಮಿಳು ಭಾಷೆಯಿಂದಲೇ ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಗಳು ಹುಟ್ಟಿವೆ ಎಂದು ಹೇಳಲಾಗಿದೆ. ತಮಿಳು ಪಠ್ಯದಲ್ಲಿ (Language row) ಇರುವ ಈ ಅಂಶವು ಭಾರಿ ವಿವಾದಕ್ಕೆ ಕಾರಣವಾಗಿದೆ.

ಕನ್ನಡ ಭಾಷೆಯ ಇತಿಹಾಸದ ಬಗ್ಗೆ ಮಾತನಾಡಲು ನಟ ಕಮಲ್ ಹಾಸನ್ ಇತಿಹಾಸಕಾರರಾ? ಭಾಷಾ ಪಂಡಿತರಾ? ಎಂದು ಸಾಕಷ್ಟು ಜನ ಕೇಳುತ್ತಿದ್ದಾರೆ. ಆದರೆ ತಮಿಳರು ಯಾವುದನ್ನು ಸತ್ಯ ಎಂದು ಭಾವಿಸಿದ್ದಾರೋ ಅದನ್ನೇ ಕಮಲ್ ಹಾಸನ್ ವೇದಿಕೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ತಮಿಳು, ಕನ್ನಡ ಸೋದರ ಭಾಷೆಗಳು. ಮೂಲದಲ್ಲಿ ಒಂದೇ ಭಾಷೆಯಾಗಿದ್ದು ಕಾಲಾನುಕ್ರಮದಲ್ಲಿ ಬೇರೆ ಕವಲುಗಳಾಗಿ ಬೆಳೆದು ಬಂದಿವೆ. ಆದರೆ ಈ ಬಗ್ಗೆ ಯಾಕೆ ಕನ್ನಡಿಗರ ಪ್ರಶ್ನೆ ಮಾಡುತ್ತಿಲ್ಲ. ಕಮಲ್ ಹಾಸನ್ ಹೇಳಿಕೆ ಆಧಾರ ಯಾಕೆ ಕೇಳುತ್ತಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ತಮಿಳುನಾಡಿನ ಪಠ್ಯದಲ್ಲಿ ಕನ್ನಡ, ತೆಲುಗು, ಮಲಯಾಳಂಗಳ ತಾಯಿ ತಮಿಳು ಎಂದು ಉಲ್ಲೇಖಿಸಿರುವುದನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ನೀವೆಲ್ಲರೂ ತಮಿಳುನಾಡಿನಲ್ಲಿ 7 ನೇ ತರಗತಿ ಪುಸ್ತಕ ನೋಡಿದ್ದೀರಾ? ಪಠ್ಯಪುಸ್ತಕದಲ್ಲಿಯೇ ಈ ಬಗ್ಗೆ ಹೇಳಿದ್ದಾರೆ ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕನ್ನಡಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.



ತಮಿಳು ಪಠ್ಯ ಪುಸ್ತಕದಲ್ಲಿ ಏನಿದೆ?

ತಮಿಳುನಾಡಿನ 7ನೇ ತರಗತಿ ತಮಿಳು ಭಾಷೆ ಪುಸ್ತಕದಲ್ಲಿ 10ನೇ ಪುಟದಲ್ಲಿ ಈ ರೀತಿ ಬರೆಯಲಾಗಿದೆ. "ಒಂದೇ ಭಾಷೆಯನ್ನು ಮಾತನಾಡುವ ಜನರು ವಿಭಿನ್ನ ಸ್ಥಳಗಳಲ್ಲಿ ವಾಸಿಸುತ್ತಾರೆ. ಅವರು ವಾಸಿಸುವ ಸ್ಥಳದ ಸ್ಥಳಾಕೃತಿ, ನೈಸರ್ಗಿಕ ಅಡೆತಡೆಗಳು ಇತ್ಯಾದಿಗಳಿಂದಾಗಿ, ಅವರು ಮಾತನಾಡುವ ಭಾಷೆಯಲ್ಲಿ ಸ್ವಲ್ಪ ಬದಲಾವಣೆಗಳಿವೆ. ಅವುಗಳ ನಡುವಿನ ಸಂಪರ್ಕ ಕಡಿಮೆಯಾದಾಗ, ಈ ಬದಲಾವಣೆಗಳು ಹೆಚ್ಚಾಗುತ್ತವೆ ಮತ್ತು ಅವು ಹೊಸ ಭಾಷೆಯಾಗಿ ವಿಭಜನೆಯಾಗುತ್ತವೆ. ಈ ರೀತಿಯಲ್ಲಿ ರೂಪುಗೊಂಡ ಹೊಸ ಭಾಷೆಯನ್ನು ಉಪಭಾಷೆ ಎಂದು ಕರೆಯಲಾಗುತ್ತದೆ. ಕನ್ನಡ, ತೆಲುಗು, ಮಲಯಾಳಂ ಮುಂತಾದ ದ್ರಾವಿಡ ಭಾಷೆಗಳು ತಮಿಳಿನಿಂದ ಬೇರ್ಪಟ್ಟ ಉಪಭಾಷೆಗಳಾಗಿವೆ" ಎಂದು ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Thug Life Movie: ಕಮಲ್‌ ಹಾಸನ್‌ ನಟನೆಯ ʻಥಗ್‌ ಲೈಫ್‌ʼ ಫ್ಲಾಪ್‌? ಮಣಿರತ್ನಂ ಮ್ಯಾಜಿಕ್‌ ಮಾಯ ಆಗಿದ್ಯಾ?

ತಮಿಳರು ತಾವು ಸತ್ಯ ಎಂದು ನಂಬಿರುವುದನ್ನೇ ಕಮಲ್ ಹಾಸನ್ ಹೇಳಿದ್ದಾರೆ ಎನ್ನುವುದು ಕೆಲವರ ಅಭಿಪ್ರಾಯ. ಕಮಲ್ ಕೂಡ ತಮ್ಮ ಹೇಳಿಕೆ ಹಿಂಪಡೆಯಲ್ಲ, ಕ್ಷಮೆ ಕೇಳುವ ಮಾತೇಯಿಲ್ಲ ಎಂದು ವಾದಿಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ, ಅಲ್ಲದೇ ʼಥಗ್‌ ಲೈಫ್‌ʼ ಚಿತ್ರ ಬಿಡುಗಡೆಗೂ ಅಡಚಣೆಯಾಗಿದೆ.