PARVA Group Expo: ಇಂದು, ನಾಳೆ ಪರ್ವ ಗ್ರೂಪ್ ಎಕ್ಸ್ಪೋ
ವಿಶ್ವದ ಅತಿ ಸುರಕ್ಷಿತ ತಾಣ ಎನಿಸಿರುವ ದುಬೈನಲ್ಲಿ ಹೂಡಿಕೆ ಮಾಡಬೇಕು ಎನ್ನುವ ಅನೇಕರ ಕನಸನ್ನು ನನಸು ಮಾಡಿಸಲು ಪರ್ವ ಗ್ರೂಪ್ ಮುಂದಾಗಿದೆ. ಇದರ ಭಾಗವಾಗಿ ಅತ್ಯಾಕರ್ಷಕ ಆಫರ್ಗಳೊಂದಿಗೆ ಎರಡು ದಿನದ ಎಕ್ಸ್ಪೋ ಬೆಂಗಳೂರಿನ ತಾಜ್ವೆಸ್ಟ್ ಎಂಡ್ನಲ್ಲಿ ಜೂನ್ 28, 29ರಂದು ಹಮ್ಮಿಕೊಳ್ಳಲಾಗಿದೆ.


- ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ನಡೆಯಲಿರುವ ಎಕ್ಸ್ಪೋ
- ದುಬೈನಲ್ಲಿ ಮನೆ ಖರೀದಿಸುವ ಅವಕಾಶ
- 10 ಗ್ರಾಂ ಚಿನ್ನ, ದುಬೈ ಪ್ರವಾಸ ಸೇರಿದಂತೆ ಹಲವು ಆಫರ್
ಬೆಂಗಳೂರು ರೇಟಲ್ಲಿ ದುಬೈನಲ್ಲಿ ಮನೆ ಖರೀದಿಸುವ ಅವಕಾಶ
ವಿಶ್ವದ ಅತಿ ಸುರಕ್ಷಿತ ತಾಣ ಎನಿಸಿರುವ ದುಬೈನಲ್ಲಿ ಹೂಡಿಕೆ ಮಾಡಬೇಕು ಎನ್ನುವ ಅನೇಕರ ಕನಸನ್ನು ನನಸು ಮಾಡಿಸಲು ಪರ್ವ ಗ್ರೂಪ್ ಮುಂದಾಗಿದೆ. ಇದರ ಭಾಗವಾಗಿ ಅತ್ಯಾಕರ್ಷಕ ಆಫರ್ಗಳೊಂದಿಗೆ ಎರಡು ದಿನದ ಎಕ್ಸ್ಪೋ ಅನ್ನು ಜೂನ್ 28, 29ರಂದು ಬೆಂಗಳೂರಿನ ತಾಜ್ವೆಸ್ಟ್ ಎಂಡ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಶ್ವದ ಅತಿ ಸುರಕ್ಷಿತ ದೇಶ ಹಾಗೂ ವಿಶ್ವದ ಬಹುತೇಕ ರಾಷ್ಟ್ರದ ಜನರಿರುವ ದೇಶ ಎನಿಸಿರುವ ದುಬೈನಲ್ಲಿ ಹೂಡಿಕೆ ಮಾಡಲು ಉತ್ಸಾಹವಿದ್ದರೂ, ಸರಿಯಾದ ದಾರಿ ಕಾಣದೇ ಸುಮ್ಮನಿರುವ ರಾಜ್ಯದ ಜನರಿಗೆ ಇದೀಗ ದುಬೈನಲ್ಲಿನ ಹೂಡಿಕೆಗೆ ‘ಸುರಕ್ಷಿತ’ ಗೇಟ್ವೇ ಒಂದು ಸಿಕ್ಕಿದೆ. ಕರ್ನಾಟಕದ ಇಬ್ಬರು ಯುವ ಉತ್ಸಾಹಿ ಉದ್ದಿಮೆದಾರರು ಆರಂಭಿಸಿರುವ ಪರ್ವ ಗ್ರೂಪ್ ಇದೀಗ ಬೆಂಗಳೂರಿನ ತಾಜ್ವೆಸ್ಟ್ ಎಂಡ್ನಲ್ಲಿ ಎರಡು ದಿನಗಳ ಎಕ್ಸ್ಪೋವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೂಡಿಕೆ ಮಾಡುವವರಿಗೆ ಹತ್ತಾಾರು ಸೌಲಭ್ಯ ಹಾಗೂ ರಿಯಾಯಿತಿಯನ್ನು ನೀಡುವುದಾಗಿ ಪರ್ವ ಗ್ರೂಪ್ ಘೋಷಿಸಿದೆ. ದುಬೈನ ರೇರಾ ಏಜೆನ್ಸಿಯಿಂದ ಪರ್ವ ಗ್ರೂಪ್ಗೆ ಅಧಿಕೃತ ಮಾನ್ಯತೆ ಸಿಕ್ಕಿರುವುದರಿಂದ ಕಾನೂನಾತ್ಮಕವಾಗಿ ಯಾವುದೇ ಸಮಸ್ಯೆೆಯಿಲ್ಲ.
ನೀಲೆಶ್ ಹಾಗೂ ಶಶಿಧರ ಅವರು ಸ್ಥಾಾಪಿಸಿರುವ ಪರ್ವ ಗ್ರೂಪ್ನ ಅಂಗಸಂಸ್ಥೆೆಯಾಗಿರುವ ಪರ್ವ ರಿಯಾಲಿಟಿಯಿಂದ ಈ ಅಭಿಯಾನವನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಆಯೋಜಿಸಿರುವ ‘ದುಬೈ ಪ್ರಾಪರ್ಟಿ ರೋಡ್ ಶೋ’ದಲ್ಲಿ ದುಬೈನಲ್ಲಿ ಹೂಡಿಕೆದಾರರಿಗೆ ಇರುವ ಅವಕಾಶ? ಎಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭಾಂಶ ಸಿಗಲಿದೆ? ಖರೀದಿಸಿದ ಫ್ಲಾಟ್ ಅಥವಾ ಪ್ರಾಪರ್ಟಿಗಳ ಬಾಡಿಗೆಯಿಂದ ಬರುವ ಲಾಭವೆಷ್ಟು? ವಾಪಸು ಮಾರಬೇಕೆಂದರೆ ಇರುವ ಅವಕಾಶಗಳೇನು ಎನ್ನುವ ವಿಷಯದ ಬಗ್ಗೆೆ ವಿಶೇಷ ಸಂವಾದವನ್ನು ಹಮ್ಮಿಿಕೊಳ್ಳಲಾಗಿದೆ.
ಪರ್ವ ಗ್ರೂಪ್ ದುಬೈನ ಸಂಸ್ಥಾಪಕರಾದ ನೀಲೆಶ್ ಎಚ್.ಪಿ ಹಾಗೂ ಸಹಸಂಸ್ಥಾಪಕರಾದ ಶಶಿಧರ್ ನಾಗರಾಜಪ್ಪ ಸೇರಿದಂತೆ ಸಂಸ್ಥೆೆಯ ತಜ್ಞರು ಸ್ಥಳದಲ್ಲಿ ಇರಲಿದ್ದಾರೆ. ಅವರಿಂದ ಹೂಡಿಕೆ ಸಂಬಂಧ ಮಾಹಿತಿ ಪಡೆಯಬೇಕು. ಹಲವರಿಗೆ ದುಬೈನಲ್ಲಿ ಗೃಹ ಅಥವಾ ವಾಣಿಜ್ಯ ಕಟ್ಟಡ ಖರೀದಿಸುವ ಆಸೆ ಇದೆ; ಅದನ್ನು ಕೆಲವು ಕಾಲದ ನಂತರ ಮಾರಾಟ ಮಾಡಿ, ಸೂಕ್ತ ಎನಿಸುವ ಲಾಭವನ್ನೂ ಪಡೆಯುವ ಅಭಿಲಾಷೆ ಇದೆ; ಆದರೆ ದುಬೈನಲ್ಲಿ ಬಂಡವಾಳ ಹೂಡಲು ಆಸಕ್ತಿ ಇದ್ದರೂ ಸೂಕ್ತ ಮಾರ್ಗದರ್ಶನದ ಕೊರತೆ ಇರಬಹುದು. ಇಂಥ ಕೊರತೆಯನ್ನು ತುಂಬಿಸಿಕೊಡುವುದೇ ನಮ್ಮ ಉದ್ದೇಶವಾಗಿದೆ ಎಂದು ಶಶಿಧರ್ ನಾಗರಾಜಪ್ಪ ಅಭಿಪ್ರಾಯಪಟ್ಟಿದ್ದಾರೆ.
ಎರಡು ದಿನ ಆಪ್ತ ಸಮಾಲೋಚನೆ
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ 28 ಹಾಗೂ 29ರಂದು ಪರ್ವ ರಿಯಾಲ್ಟಿಯ ತಜ್ಞರ ತಂಡ ಲಭ್ಯವಿರಲಿದೆ. ಈ ತಂಡ ದುಬೈನಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಇರುವ ಹಲವು ಅನುಮಾನಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆಯನ್ನು ನೀಡಲಿದೆ. ಎರಡು ದಿನದ ಎಕ್ಸ್ಪೋದಲ್ಲಿ ದುಬೈನಲ್ಲಿ ಹೂಡಿಕೆ ಮಾಡಿದರೆ ಅಥವಾ ಆಸಕ್ತಿ ತೋರಿದರೆ, ಅಂತವರಿಗೆ ದುಬೈಗೆ ಕಪಲ್ ರಿಟರ್ನ್ ಏರ್ ಟಿಕೆಟ್, ದುಬೈ ವೀಸಾ ಮತ್ತು 3 ರಾತ್ರಿಗಳ ವಾಸ್ತವ್ಯ. 10 ಗ್ರಾಾಂ ಚಿನ್ನ, ಗೋಲ್ಡನ್ ವೀಸಾ, ಗ್ಯಾರಂಟೀಡ್ ಬೈಬ್ಯಾಕ್ ಸೇರಿದಂತೆ ಹಲವು ಆಫರ್ಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 9742117707 ಅಥವಾ +971 502568857 ಸಂಪರ್ಕಿಸಿ.
10 ವರ್ಷ ಉಚಿತ ದುಬೈ ಗೋಲ್ಡ್ ವೀಸಾ ಸೌಲಭ್ಯ
ಪರ್ವ ಗ್ರೂಪ್ ಆಯೋಜಿಸಿರುವ ಈ ಎಕ್ಸ್ಪೋದಲ್ಲಿ ಭಾಗವಹಿಸಿ, ಮನೆ ಅಥವಾ ಭೂಮಿ ಖರೀದಿ ಮಾಡಿದರೆ 10 ವರ್ಷದ ಅವಧಿಗೆ ದುಬೈನ ಗೋಲ್ಡ್ ವೀಸಾವನ್ನು ನೀಡಲಾಗುತ್ತಿದೆ. ಈ ವೀಸಾವನ್ನು ಪಡೆದರೆ ಇತರೆ ವೀಸಾಗಳಿಗೆ ಇರುವ ಹಲವು ನಿರ್ಬಂಧಗಳಿರುವುದಿಲ್ಲ. ದುಬೈನಲ್ಲಿ ಹೂಡಿಕೆ ಮಾಡಲು, ಕುಟುಂಬ ಸದಸ್ಯರಿಗೆ ವೀಸಾ ಪಡೆಯಲು, ಸೌದಿ ರಾಷ್ಟ್ರಗಳಿಗೆ ಹೋಗಲು ಸೇರಿದಂತೆ ಹಲವು ಲಾಭಗಳಿವೆ. ದುಬೈ ಗೋಲ್ಡ್ ವೀಸಾದೊಂದಿಗೆ 10 ಗ್ರಾಮ್ ಬಂಗಾರ, ದುಬೈಗೆ ಮೂರು ದಿನ ಪ್ರವಾಸ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಗ್ರಾಹಕರಿಗೆ ಸಿಗುವ ಸೌಲಭ್ಯಗಳೇನು?
* 10 ವರ್ಷದ ಅವಧಿಗೆ ಶೇ.10ರಷ್ಟು ಬಾಡಿಗೆ ಆದಾಯ ನಿಶ್ಚಿತ
* ವಾಪಾಸು ಖರೀದಿಗೆ ಶೇ.100ರಷ್ಟು ಖರೀದಿಯ ಗ್ಯಾರಂಟಿ
* ಪಾವತಿಯ ವಿಶೇಷ ಯೋಜನೆಗಳು ಲಭ್ಯ
* ಶೂನ್ಯ ಆದಾಯ ತೆರಿಗೆ
ಯಾವೆಲ್ಲ ಸಂಸ್ಥೆಗಳು ಭಾಗಿ
* ಡಮ್ಯಾಕ್
* ಆಝೀಜಿ
* ಶೋಭಾ ರಿಯಾಲಿಟಿ
* ಡನ್ಯೂಬ್ ಪ್ರಾಪರ್ಟಿಸ್
* ಸಮನ ಡೆವಲಪರ್ಸ್
* ಎಮ್ಮಾರ್