ಟಿ20 ಪವರ್ಪ್ಲೇ ನಿಯಮಗಳಲ್ಲಿ ಮಹತ್ವದ ಬದಲಾವಣೆ ಘೋಷಿಸಿದ ಐಸಿಸಿ
New Powerplay T20 matches: ಹೊಸ ನಿಯಮಗಳ ಪ್ರಕಾರ ಪ್ರತಿ ಇನಿಂಗ್ಸ್ 5 ಓವರ್ಗಳಿಗೆ ಕಡಿತಗೊಂಡರೆ ಇನ್ನು ಮುಂದೆ 1.3 ಓವರ್ ಪವರ್ಪ್ಲೇ ಇರಲಿದೆ. ಅದೇ ರೀತಿ ಪ್ರತಿ ಇನಿಂಗ್ಸ್ 8 ಓವರ್ಗಳಿಗೆ ಇಳಿದರೆ, ಕೇವಲ 2.2 ಓವರ್ ಮಾತ್ರವೇ ಪವರ್ಪ್ಲೇ ನಡೆಯಲಿದೆ. ಪವರ್ಪ್ಲೇ ವೇಳೆ, ಇಬ್ಬರು ಆಟಗಾರರು ಮಾತ್ರವೇ 30 ಯಾರ್ಡ್ ವೃತ್ತದಿಂದ ಹೊರಗೆ ಕ್ಷೇತ್ರರಕ್ಷಣೆ ಮಾಡಬೇಕಾಗುತ್ತದೆ.


ದುಬೈ: ಕಳೆದ ಕೆಲ ದಿನಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ICC), ಕ್ರಿಕೆಟ್ನಲ್ಲಿ ಹಲವು ನಿಯಮಗಳಲ್ಲಿ ಪರಿಷ್ಕರಣೆ ಮತ್ತು ಕೆಲ ನೂತನ ನಿಯಮಗಳನ್ನು ಜಾರಿಗೆ ತರುತ್ತಿದೆ. ಇದೀಗ ಓವರ್ಗಳು ಕಡಿತಗೊಳ್ಳುವ ಟಿ20 ಪಂದ್ಯಗಳಿಗೆ(New Powerplay T20 matches) ಹೊಸದಾಗಿ ಪವರ್ಪ್ಲೇ ನಿಯಮಗಳನ್ನು ಪರಿಚಯಿಸಿದೆ. ಮಳೆ ಮತ್ತಿತರ ಕಾರಣಗಳಿಂದ ಯಾವುದೇ ಪಂದ್ಯದಲ್ಲಿ ಓವರ್ಗಳು ಕಡಿತಗೊಂಡರೆ ಅದಕ್ಕೆ ತಕ್ಕಂತೆ ಎಷ್ಟು ಓವರ್ ವರೆಗೆ ಪವರ್ಪ್ಲೇ ಜಾರಿಯಲ್ಲಿರಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಈ ನಿಯಮ ಜುಲೈ 10 ರಿಂದ ನಡೆಯುವ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡೂವಿನ ಟಿ20 ಸರಣಿಯಿಂದ ಜಾರಿಯಾಗಲಿದೆ.
ಈ ಹಿಂದಿನಂತೆ ಟಿ20 ಪಂದ್ಯಗಳಲ್ಲಿ ಮೊದಲ 6 ಓವರ್ ಪವರ್ಪ್ಲೇ ಇರಲಿದ್ದು, 30 ಯಾರ್ಡ್ ಸರ್ಕಲ್ ಹೊರಗೆ ಇಬ್ಬರು ಫೀಲ್ಡರ್ಗಳಷ್ಟೇ ಇರಬಹುದಾಗಿರುತ್ತದೆ. ಆದರೆ ಮಳೆ ಮತ್ತು ಬೇರೆ ಕಾರಣಗಳಿಂದ ಪಂದ್ಯದ ಓವರ್ ಕಡಿತಗೊಂಡರೆ ಮಾತ್ರ ಪರಿಷ್ಕೃತ ಪವರ್ಪ್ಲೇ ನಿಮಯದ ಅನ್ವಯವಾಗಲಿದೆ ಇಲ್ಲವಾದಲ್ಲಿ ಹಿಂದಿನಂತೆ ಪಂದ್ಯ ಆಡಲಾಗುತ್ತದೆ.
ಹೊಸ ನಿಯಮಗಳ ಪ್ರಕಾರ ಪ್ರತಿ ಇನಿಂಗ್ಸ್ 5 ಓವರ್ಗಳಿಗೆ ಕಡಿತಗೊಂಡರೆ ಇನ್ನು ಮುಂದೆ 1.3 ಓವರ್ ಪವರ್ಪ್ಲೇ ಇರಲಿದೆ. ಅದೇ ರೀತಿ ಪ್ರತಿ ಇನಿಂಗ್ಸ್ 8 ಓವರ್ಗಳಿಗೆ ಇಳಿದರೆ, ಕೇವಲ 2.2 ಓವರ್ ಮಾತ್ರವೇ ಪವರ್ಪ್ಲೇ ನಡೆಯಲಿದೆ. ಪವರ್ಪ್ಲೇ ವೇಳೆ, ಇಬ್ಬರು ಆಟಗಾರರು ಮಾತ್ರವೇ 30 ಯಾರ್ಡ್ ವೃತ್ತದಿಂದ ಹೊರಗೆ ಕ್ಷೇತ್ರರಕ್ಷಣೆ ಮಾಡಬೇಕಾಗುತ್ತದೆ.
ಇದನ್ನೂ ಓದಿ ಕ್ರಿಕೆಟ್ನಲ್ಲಿ ಡಿಆರ್ಎಸ್, ನೋ ಬಾಲ್ ಸೇರಿ ಹಲವು ನಿಯಮ ತಿದ್ದುಪಡಿ ಮಾಡಿದ ಐಸಿಸಿ
11 ಓವರ್ಗಳ ಇನಿಂಗ್ಸ್ನಲ್ಲಿ 3.2 ಓವರ್, 12 ಓವರ್ಗಳ ಇನಿಂಗ್ಸ್ನಲ್ಲಿ 3.4 ಓವರ್, 13 ಓವರ್ಗಳ ಇನಿಂಗ್ಸ್ನಲ್ಲಿ 3.5 ಓವರ್, 14 ಓವರ್ಗಳ ಇನಿಂಗ್ಸ್ನಲ್ಲಿ 4.1 ಓವರ್, 15 ಓವರ್ಗಳ ಇನಿಂಗ್ಸ್ನಲ್ಲಿ 4.3 ಓವರ್, 16 ಓವರ್ಗಳ ಇನಿಂಗ್ಸ್ನಲ್ಲಿ 4.5 ಓವರ್, 17 ಓವರ್ಗಳ ಇನಿಂಗ್ಸ್ನಲ್ಲಿ 5.1 ಓವರ್, 18 ಓವರ್ಗಳ ಇನಿಂಗ್ಸ್ನಲ್ಲಿ 5.2 ಓವರ್ ಮತ್ತು 19 ಓವರ್ಗಳ ಇನಿಂಗ್ಸ್ನಲ್ಲಿ 5.4 ಓವರ್ ಪವರ್ ಪ್ಲೇ ಇರಲಿದೆ.