INDW vs ENGW: ಇಂದಿನಿಂದ ಭಾರತ-ಇಂಗ್ಲೆಂಡ್ ಮಹಿಳಾ ಟಿ20 ಸರಣಿ ಆರಂಭ
ಕ್ರಾಂತಿ ಗೌಡ, ಶ್ರೀಚರಣಿ ಮತ್ತು ಸಯಾಲಿ ಸತಘರೆ ಅವರು ತಂಡದಲ್ಲಿರುವ ಹೊಸಪ್ರತಿಭೆಗಳು. ಇವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಬೇಕಿದೆ. ಅನುಭವಿಗಳಾ ಬೌಲರ್ ರೇಣುಕಾ ಸಿಂಗ್ ಮತ್ತು ಪೂಜಾ ವಸ್ತ್ರಕರ್ ಈ ಸರಣಿ ಆಡುತ್ತಿಲ್ಲ. ಗಾಯದಿಂದಾಗಿ ಅವರು ವಿಶ್ರಾಂತಿಯಲ್ಲಿದ್ದಾರೆ. ಆದ್ದರಿಂದ ಅವರ ಗೈರಿನಲ್ಲಿ ಮಿಂಚುವ ಅವಕಾಶ ಹೊಸಬರಿಗೆ ಇದೆ.


ನಾಟಿಂಗ್ಹ್ಯಾಮ್: ಪ್ರವಾಸಿ ಭಾರತ ಮತ್ತು ಇಂಗ್ಲೆಂಡ್(INDW vs ENGW) ನಡುವಣ ಮಹಿಳೆಯರ ಟಿ20 ಕ್ರಿಕೆಟ್ ಸರಣಿಯ(ENG-W vs IND-W 1st T20I) ಮೊದಲ ಹಣಾಹಣಿಯು ಇಂದು ನಡೆಯಲಿದೆ. ಮುಂದಿನ ವರ್ಷ ಇಲ್ಲಿಯೇ ನಡೆಯುವ ಟಿ20 ವಿಶ್ವಕಪ್ ತಯಾರಿಗೆ ಉಭಯ ತಂಡಗಳಿಗೂ ಈ ಸರಣಿ ಮಹತ್ವದಾಗಿದೆ. ಟೂರ್ನಿಗೆ ಇನ್ನೂ ಸುಮಾರು ಒಂದು ವರ್ಷ ಬಾಕಿಯಿದ್ದಾಗಲೇ ತಯಾರಿ ಆರಂಭಿಸಲಾಗುತ್ತಿದೆ. ಭಾರತ ಈ ಸರಣಿಯಲ್ಲಿ ಅನುಭವಿ ಮತ್ತು ಯುವ ಆಟಗಾರ್ತಿಯರನ್ನು ಕಣಕ್ಕಿಳಿಸುತ್ತಿದೆ. ಸಿಕ್ಕ ಅವಕಾಶವನ್ನು ಸದುಪಯೀಗಪಡಿಸಿಕೊಂಡ ಆಟಗಾರ್ತಿಯರು ಮುಂದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬಹುದು.
ಕಳೆದ ವರ್ಷ ಫಾರ್ಮ್ ಕಳೆದುಕೊಂಡು ಭಾರತ ತಂಡದಿಂದ ಹೊರಬಿದ್ದಿದ್ದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಈ ಸರಣಿಯಲ್ಲಿ ಆಡುತ್ತಿದ್ದು, ಉಪನಾಯಕಿ ಸ್ಮೃತಿ ಮಂಧಾನ ಜತೆ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ. ನಾಯಕಿ ಹರ್ಮನ್ಪ್ರೀತ್ ಕೌರ್, ವಿಕೆಟ್ಕೀಪರ್ ಯಷ್ತಿಕಾ ಭಾಟಿಯಾ, ಆಲ್ರೌಂಡರ್ ದೀಪ್ತಿ ಗೌಡ ,ಸ್ನೇಹಾ ರಾಣಾ, ರಿಚಾ ಘೋಷ್ ತಂಡದಲ್ಲಿರುವ ಅನುಭವಿ ಆಟಗಾರ್ತಿರು. ಈಗಾಗಲೇ ಏಕದಿನ ಹಾಗೂ ಟಿ20 ಅಭ್ಯಾಸ ಪಂದ್ಯವನ್ನು ಆಡಿರುವ ಭಾರತ, ಎರಡರಲ್ಲೂ ಸೋತಿದೆ. ಹೀಗಾಗಿ ಟಿ20 ಯಲ್ಲಿ ಉತ್ತಮ ಪ್ರದರ್ಶನ ತೋರಲೇ ಬೇಕಾದ ಒತ್ತಡ ತಂಡದ ಮುಂದಿದೆ. ಸರಣಿ ಸೋತರೆ ಹರ್ಮನ್ಪ್ರೀತ್ ಕೌರ್ ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆಯೂ ಅಧಿಕವಾಗಿದೆ.
ಕ್ರಾಂತಿ ಗೌಡ, ಶ್ರೀಚರಣಿ ಮತ್ತು ಸಯಾಲಿ ಸತಘರೆ ಅವರು ತಂಡದಲ್ಲಿರುವ ಹೊಸಪ್ರತಿಭೆಗಳು. ಇವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಬೇಕಿದೆ. ಅನುಭವಿಗಳಾ ಬೌಲರ್ ರೇಣುಕಾ ಸಿಂಗ್ ಮತ್ತು ಪೂಜಾ ವಸ್ತ್ರಕರ್ ಈ ಸರಣಿ ಆಡುತ್ತಿಲ್ಲ. ಗಾಯದಿಂದಾಗಿ ಅವರು ವಿಶ್ರಾಂತಿಯಲ್ಲಿದ್ದಾರೆ. ಆದ್ದರಿಂದ ಅವರ ಗೈರಿನಲ್ಲಿ ಮಿಂಚುವ ಅವಕಾಶ ಹೊಸಬರಿಗೆ ಇದೆ.
ಇದನ್ನೂ ಓದಿ IND vs ENG 2nd Test: ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ; ಮೊದಲ ದಿನ ಬುಮ್ರಾ, ಪ್ರಸಿದ್ಧ್ ಗೈರು
ಇಂಗ್ಲೆಂಡ್ ಅಪಾಯಕಾರಿ ತಂಡವಾಗಿ ಗೋಚರಿಸಿದೆ. ತವರಿನ ಲಾಭದ ಜತೆಗೆ ತಂಡದಲ್ಲಿ ಸಾಕಷ್ಟು ಮಂದಿ ಅನುಭವಿಗಳನ್ನು ಹೊಂದಿದೆ. ನಾಯಕಿ ನ್ಯಾಟ್ ಸ್ಕಿವರ್ ಬ್ರಂಟ್ ಬ್ಯಾಟಿಂಗ್ ಜತೆಗೆ ಬೌಲಿಂಗ್ನಲ್ಲಿಯೂ ಅಪಾಯಕಾರಿ. ಇವರ ಜತೆಗೆ ಎಮಿ ಜೋನ್ಸ್, ಟ್ಯಾಮಿ ಬೆಮೌಂಟ್, ಡ್ಯಾನಿ ವೈಡ್ ಹಾಜ್ ಮತ್ತು ಸೋಫಿ ಎಕ್ಸೆಲೆಸ್ಟೋನ್, ಯುವ ಆಟಗಾರ್ತಿಯರಾದ ಐಸಿ ವಾಂಗ್, ಅಲೈಸ್ ಕ್ಯಾಪ್ಸಿ ಮತ್ತು ಸೋಫಿ ಡಂಕ್ಲಿ ಉತ್ತಮ ಲಯದಲ್ಲಿದ್ದಾರೆ.
ಪಂದ್ಯ ಆರಂಭ: ರಾತ್ರಿ 7
ನೇರಪ್ರಸಾರ: ಸೋನಿ ಎಲ್ಐವಿ, ಫ್ಯಾನ್ಕೋಡ್ ಆ್ಯಪ್
ತಂಡಗಳು
ಭಾರತ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧನಾ, ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ಹಲೀìನ್ ದೇವಲ್, ದೀಪ್ತಿ ಶರ್ಮ, ಸ್ನೇಹ್ ರಾಣಾ, ಶ್ರೀಚರಣಿ, ಶುಚಿ ಉಪಾಧ್ಯಾಯ, ಅಮನ್ಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ಸಯಾಲಿ ಸತಘರೆ.
ಇಂಗ್ಲೆಂಡ್: ನ್ಯಾಟ್ ಸ್ಕಿವರ್ ಬ್ರಂಟ್ (ನಾಯಕಿ), ಎಮ್ ಅರ್ಲಾಟ್, ಟಾಮಿ ಬ್ಯೂಮಂಟ್, ಲಾರೆನ್ ಬೆಲ್, ಅಲೈಸ್ ಕ್ಯಾಪ್ಸಿ, ಚಾರ್ಲಿ ಡೀನ್, ಸೋಫಿಯಾ ಡಂಕ್ಲಿ, ಸೋಫಿ ಎಕ್ಲ್ ಸ್ಟೋನ್, ಲಾರೆನ್ ಫಿಲರ್, ಆ್ಯಮಿ ಜೋನ್ಸ್, ಪೇಜ್ ಸ್ಕೋಲ್ಫೀಲ್ಡ್, ಲಿನ್ಸಿ ಸ್ಮಿತ್, ಡೇನ್ ವ್ಯಾಟ್ ಹಾಜ್, ಐಸಿ ವೋಂಗ್.