ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಈ ಕಾರು ಬಲು ಜೋರು! ಇಂತಹ ವಾಹನ ನೀವು ನೋಡಿರೋಕೆ ಸಾಧ್ಯನೇ ಇಲ್ಲ

ಸೋಶಿಯಲ್ ಮಿಡಿಯಾದಲ್ಲಿ ಈಗ ಕಾರೊಂದು ಸಖತ್‌ ಸದ್ದು ಮಾಡುತ್ತಿದೆ. ಹೌದು ಇದು ವಿಶ್ವದ ಅತ್ಯಂತ ತೆಳುವಾದ ಕಾರಂತೆ(Car). ಇದನ್ನು ಕಂಡು ಜನರು ಅಶ್ಚರ್ಯಚಕಿತರಾಗಿದ್ದಾರೆ. ಹೊಸ ಆವಿಷ್ಕಾರವು ಎಲ್ಲರ ಗಮನ ಸೆಳೆದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಕಾರ್‌..ಕಾರ್‌.. ಎಲ್ನೋಡಿ ಕಾರ್‌...  ಈ ಕಾರು ಬಲು ಜೋರು!

Profile pavithra Jun 28, 2025 10:17 AM

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಅಚ್ಚರಿ ಮೂಡಿಸುವಂತಹ ಹೊಸ ಹೊಸ ಆವಿಷ್ಕಾರಗಳು ಅನಾವರಣಗೊಳ್ಳುತ್ತಿರುತ್ತದೆ. ಈ ಹಿಂದೆ ಮಾಲ್‍ವೊಂದರಲ್ಲಿ ರೋಬೋಟಿಕ್ ಡಾಗ್ ಒಂದು ಓಡಾಡುವ ವಿಡಿಯೊ ಗ್ರಾಹಕರಲ್ಲಿ ಹಾಗೂ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿತ್ತು. ಇದೀಗ ಸೋಶಿಯಲ್ ಮಿಡಿಯಾದಲ್ಲಿ ವಿಶ್ವದ ಅತ್ಯಂತ ತೆಳುವಾದ ಕಾರನ್ನು(Car)ಪರಿಚಯಿಸಿದ್ದು, ಇದನ್ನು ಕಂಡು ಜನರು ಅಶ್ಚರ್ಯಚಕಿತರಾಗಿದ್ದಾರೆ. ಹೊಸ ಆವಿಷ್ಕಾರವು ಎಲ್ಲರ ಗಮನ ಸೆಳೆದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ, ಫಿಯೆಟ್ ಪಾಂಡಾವನ್ನು ವ್ಯಕ್ತಿಯೊಬ್ಬ ರಸ್ತೆಯಲ್ಲಿ ಡ್ರೈವ್ ಮಾಡುವುದನ್ನು ಸೆರೆಹಿಡಿಯಲಾಗಿದೆ. ಈ ವಿಚಿತ್ರ ಕಾರನ್ನು ಒಬ್ಬ ವ್ಯಕ್ತಿಗೆ ಮಾತ್ರ ಕುಳಿತುಕೊಳ್ಳುವಂತೆ ನಿರ್ಮಿಸಲಾಗಿದೆ. ಇದು ಸಾಮಾನ್ಯ ಕಾರುಗಳಂತೆ ನಾಲ್ಕು ಚಕ್ರಗಳನ್ನು ಹೊಂದಿರುತ್ತದೆ. ಆದರೆ ಇದು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಇದರಲ್ಲಿ ಒಬ್ಬ ವ್ಯಕ್ತಿ ಮಾತ್ರ ಕುಳಿತುಕೊಳ್ಳಬಹುದು.

ವಿಡಿಯೊ ಇಲ್ಲಿದೆ ನೋಡಿ...

ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. "ಈ ಕಾರು ಖಂಡಿತವಾಗಿಯೂ ಬಜೆಟ್‌ಗಿಂತ ಕಡಿಮೆ ಇರಬೇಕು" ಎಂದು ಒಬ್ಬರು ವ್ಯಂಗ್ಯವಾಗಿ ಬರೆದಿದ್ದಾರೆ. ಮತ್ತೊಬ್ಬರು, ಕಾರಿನ ಗಾತ್ರವನ್ನು ನ್ಯೂಯಾರ್ಕ್‌ನ ಅಪಾರ್ಟ್‌ಮೆಂಟ್‌ಗೆ ಹೋಲಿಸಿದ್ದಾರೆ. ಇನ್ನೊಬ್ಬರು "ಅದು ಟೂತ್‌ಪಿಕ್‌ನಂತೆ ಕಾಣುತ್ತಿದೆ," ಎಂದು ವ್ಯಂಗ್ಯವಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಬ್ರ್ಯಾಂಡೆಡ್‌ ಬ್ಯಾಗ್‌ ಬಿಟ್ಟು ಈ ವಿದೇಶಿ ಬೆಡಗಿಯರು ಮಾಡಿದ್ದೇನು ನೋಡಿ; ವಿಡಿಯೊ ವೈರಲ್

ಇತ್ತೀಚೆಗೆ ಗುಜರಾತ್‌ನ ಒಂದು ಕುಟುಂಬವು ಕಳೆದ ವರ್ಷ ತಮ್ಮ 12 ವರ್ಷದ ವ್ಯಾಗನ್ ಆರ್‌ಗೆ ಅಂತ್ಯಕ್ರಿಯೆ ಮಾಡಿದ ವಿಡಿಯೊವೊಂದು ವೈರಲ್ ಆಗಿತ್ತು. ವರದಿಯ ಪ್ರಕಾರ ಈ ಕಾರ್ಯಕ್ರಮಕ್ಕಾಗಿ ಅವರು ರೂ.4 ಲಕ್ಷ ಖರ್ಚು ಮಾಡಿದ್ದರು. ಸಾಂಪ್ರದಾಯಿಕ ಆಚರಣೆಗಳ ನಂತರ ಅಂತಿಮವಾಗಿ ಕಾರನ್ನು 15 ಅಡಿ ಆಳದ ಹೊಂಡದಲ್ಲಿ ಸಮಾಧಿ ಮಾಡಿದ್ದರು.ಈ ಸಮಾರಂಭದಲ್ಲಿ ಸುಮಾರು 1,500 ಜನರು ಭಾಗವಹಿಸಿದ್ದರು. ಈ ಹೃದಯಸ್ಪರ್ಶಿ ವಿಡಿಯೊವನ್ನು ನೋಡಿ ಸಾಕಷ್ಟು ಜನ ಮೆಚ್ಚಿಕೊಂಡಿದ್ದರು.

ಮಂಚದ ಕಾರು

ಇತ್ತೀಚೆಗೆ ವ್ಯಕ್ತಿಯೊಬ್ಬ ಮನೆಯಲ್ಲಿರುವ ಮಂಚಕ್ಕೆ ಕಾರಿನ ರೂಪ ನೀಡಿ ಅದನ್ನು ತೆಗೆದುಕೊಂಡು ರಸ್ತೆಯ ತುಂಬೆಲ್ಲ ಓಡಾಡಿದ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಮಂಚಕ್ಕೆ ಸ್ಟೇರಿಂಗ್‌ ಫಿಕ್ಸ್‌ ಮಾಡಿ ಹಾಗೇ ಕುಳಿತುಕೊಳ್ಳಲು ಸೀಟ್‌ ಹಾಗೇ ಅದರ ನಾಲ್ಕು ಬದಿಗೆ ಚಕ್ರಗಳನ್ನು ಅಳವಡಿಸಿದ್ದಾನೆ. ಈ ಮಂಚದ ಕಾರನ್ನು ಅವನು ರಸ್ತೆಯ ಮೇಲೆ ಓಡಿಸಿದ್ದಾನೆ. ಇದನನು ನೋಡಿ ಜನ ಹಾಗೂ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.