ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಚೀನಾ ವ್ಯಕ್ತಿಯ ಹೊಟ್ಟೆಯಲ್ಲಿ 52 ವರ್ಷಗಳ ಹಿಂದೆ ನುಂಗಿದ ಟೂತ್ ಬ್ರಶ್‌ ಪತ್ತೆ; ಬೆಚ್ಚಿಬಿದ್ದ ವೈದ್ಯರು

ವ್ಯಕ್ತಿಯೊಬ್ಬರ ಹೊಟ್ಟೆಯೊಳಗೆ ಟೂತ್ ಬ್ರಷ್ ಪತ್ತೆಯಾಗಿದ್ದು, ಇಡೀ ವೈದ್ಯ ಲೋಕವೆ ಇದನ್ನು ಅಚ್ಚರಿಯಿಂದ ನೋಡಿದೆ. ಕಳೆದ ಕೆಲವು ದಿನಗಳಿಂದ ಚೀನಾದ ವ್ಯಕ್ತಿಯೊಬ್ಬರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಟ್ಯಾಬ್ಲೆಟ್‌ ತೆಗೆದುಕೊಂಡರೂ ಹೊಟ್ಟೆ ನೋವು ವಾಸಿಯಾಗದ ಕಾರಣ ವೈದ್ಯರು ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಆಗ ಹೊಟ್ಟೆಯಲ್ಲಿ ಬ್ರಷ್ ಇರುವುದು ಗೊತ್ತಾಗಿದೆ.

52 ವರ್ಷಗಳಿಂದ ಹೊಟ್ಟೆಯಲ್ಲಿದ್ದ ಬ್ರಷ್; ವ್ಯಕ್ತಿ ಅಪಾಯದಿಂದ ಪಾರು

Man Finds Toothbrush Inside His Gut

Profile Pushpa Kumari Jun 27, 2025 9:52 PM

ಬೀಜಿಂಗ್‌: ಸಣ್ಣವರಿದ್ದಾಗ ತಮಗೆ ಅರಿವಿಲ್ಲದೆ ನಾಣ್ಯ, ಮುಚ್ಚಳ, ಪಿನ್ ಇತ್ಯಾದಿ ವಸ್ತುಗಳನ್ನು ನುಂಗಿರುವುದನ್ನು ನಾವು ಕೇಳಿದ್ದೇವೆ. ಇದೀಗ ವ್ಯಕ್ತಿಯೊಬ್ಬರ ಹೊಟ್ಟೆಯೊಳಗೆ ಟೂತ್ ಬ್ರಶ್‌ (Toothbrush) ಪತ್ತೆಯಾಗಿದ್ದು ಇಡೀ ವೈದ್ಯ ಲೋಕವೆ ಬೆಚ್ಚಿಬಿದ್ದಿದೆ. ಈ ಅಪರೂಪದ ಘಟನೆ ಚೀನಾದಲ್ಲಿ ನಡೆದಿದೆ. ಕಳೆದ ಕೆಲವು ದಿನಗಳಿಂದಲೂ ವ್ಯಕ್ತಿಯೊಬ್ಬರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಅವರು ವೈದ್ಯರ ಬಳಿ ತೆರಳಿದ್ದರು. ವೈದ್ಯರು ಪರೀಕ್ಷಿಸಿ ಟ್ಯಾಬ್ಲೆಟ್‌ ನೀಡಿದ್ದರು. ಆದರೆ ಹೊಟ್ಟೆ ನೋವು ವಾಸಿಯಾಗದ ಕಾರಣ ಸ್ಕ್ಯಾನಿಂಗ್ ಮಾಡಿಸಿದಾಗ ಹೊಟ್ಟೆಯಲ್ಲಿ ಬ್ರಷ್ ಇರುವುದನ್ನು ಕಂಡು ಬಂದಿತ್ತು.

ಪೂರ್ವ ಚೀನಾದ ಅನ್ಹುಯಿ ಪ್ರಾಂತ್ಯದ ಯಾಂಗ್ ಎಂಬ ವ್ಯಕ್ತಿಯು ತನ್ನ 12ನೇ ವಯಸ್ಸಿನಲ್ಲಿ ಹಲ್ಲುಜ್ಜುವ ಬ್ರಷ್ ಅನ್ನು ಆಕಸ್ಮಿಕವಾಗಿ ನುಂಗಿದ್ದರಂತೆ. ಪೋಷಕರಿಗೆ ತಿಳಿಸಿದರೆ ಬೈಯಬಹುದು ಎಂಬ ಕಾರಣಕ್ಕೆ ಈ ವಿಚಾರ ಮುಚ್ಚಿಟ್ಟಿದ್ದರು. ಬಳಿಕ ಅದು ಹೊಟ್ಟೆಯಲ್ಲಿ ಕರಗುತ್ತದೆ ಎಂದು ಭಾವಿಸಿ ನಿರ್ಲಕ್ಷಿಸಿದ್ದರು. ಆದರೆ ಅದೇ ಬ್ರಶ್ ಕಳೆದ 52 ವರ್ಷದಿಂದ ಸಣ್ಣ ಕರುಳಿನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಈಗ ಅವರಿಗೆ 64 ವರ್ಷವಾಗಿದ್ದು ಇತ್ತೀಚೆಗೆ ತೀವ್ರ ಹೊಟ್ಟೆ ನೋವಿನಿಂದ ಬಳಲಿದ್ದರು.



ಇದನ್ನು ಓದಿ:Viral Video: ವಿಮಾನ ವಿಳಂಬ; ಸಿಬ್ಬಂದಿ, ಪ್ರಯಾಣಿಕನ ಸಂಭಾಷಣೆ ಕೇಳಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು

ವೈದ್ಯರು ತಪಾಸಣೆ ಮಾಡಿದಾಗ ಅವರ ಸಣ್ಣ ಕರುಳಿನ ಒಂದು ಭಾಗದಲ್ಲಿ 17 ಸೆಂ.ಮೀ. ಉದ್ದದ ಬ್ರಶ್‌ ಪತ್ತೆಯಾಗಿದೆ. ವೈದ್ಯರು ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಸಲಹೆ ನೀಡಿದರು. ಬಳಿಕ 80 ನಿಮಿಷಗಳ ಎಂಡೋಸ್ಕೋಪಿಕ್ ವಿಧಾನದ ಮೂಲಕ ಅದನ್ನು ವೈದ್ಯರು ಹೊರ ತೆಗೆದಿದ್ದಾರೆ.

ಸಾಮಾನ್ಯವಾಗಿ ಇಂತಹ ವಸ್ತುಗಳು ದೇಹದೊಳಗೆ ಇದ್ದರೆ ಗಂಭೀರ ಹಾನಿಯನ್ನುಂಟು ಮಾಡ ಬಹುದು ಅಥವಾ ಮಾರಣಾಂತಿಕವೂ ಆಗಬಹುದು. ಆದರೆ ಈ ಪ್ರಕರಣದಲ್ಲಿ ಟೂತ್‌ ಬ್ರಶ್‌ ಒಂದು ನಿರ್ದಿಷ್ಟ ಜಾಗದಲ್ಲಿ ಸ್ಥಿರವಾಗಿ ಇದ್ದ ಕಾರಣ ಯಾವುದೇ ದೊಡ್ಡ ತೊಂದರೆ ಆಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ರೋಗಿಯ ಜೀರ್ಣಾಂಗ ವ್ಯವಸ್ಥೆಯಿಂದ ಹೊರ ತೆಗೆಯಲಾದ ಅತಿ ಉದ್ದವಾದ ವಸ್ತುಗಳಲ್ಲಿ ಇದೂ ಒಂದು ಎಂದು ಚಿಕಿತ್ಸೆ ನೀಡಿದ ಅವರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಚಿಕಿತ್ಸೆ ಪಡೆದ ಯಾಂಗ್ ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅಷ್ಟೂದ್ದ ಬ್ರಷ್ ಹೊಟ್ಟೆಗೆ ಸೇರಿದ್ದಾದರೂ ಹೇಗೆ ಎಂದು ನೆಟ್ಟಿಗರು ಆಶ್ಚರ್ಯಗೊಂಡು ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಆ ವ್ಯಕ್ತಿ ಇಷ್ಟು ವರ್ಷ ತನಗರಿವಿಲ್ಲದೆ ಹೊಟ್ಟೆಯಲ್ಲಿ ಬ್ರಷ್ ಇಟ್ಟುಕೊಂಡಿದ್ದು ಆಶ್ಚರ್ಯಕರ ಸಂಗತಿ ಎಂದು ಬರೆದುಕೊಂಡಿದ್ದಾರೆ.