ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jagdeep Dhankhar: ಮೇ 5 ಕ್ಕೆ ಶಿರಸಿಗೆ ಉಪರಾಷ್ಟ್ರಪತಿ ಭೇಟಿ; ವಿದ್ಯಾರ್ಥಿಗಳೊಂದಿಗೆ ಸಂವಾದ

ಉಪರಾಷ್ಟ್ರಪತಿ ಜಗದೀಪ ಧನಕರ್‌ ಅವರು ಮೇ 5 ರಂದು ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಆಗಮನದ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲಾ ಪೊಲೀಸರು ಬಿಗಿ ಭದ್ರತೆಯನ್ನು ಹಮ್ಮಿಕೊಂಡಿದ್ದಾರೆ. ದೆಹಲಿಯಿಂದ ಎಸ್‌ಪಿಜಿ ಹಾಗೂ ಎನ್‌ಎಸ್‌ಜಿ ಪಡೆಯು ಹೆಲಿಕ್ಯಾಪ್ಟರ್ ಮೂಲಕ ಸಿದ್ಧತೆ ನಡೆಸಿದೆ.

ಮೇ 5 ಕ್ಕೆ ಶಿರಸಿಗೆ ಉಪರಾಷ್ಟ್ರಪತಿ ಭೇಟಿ

Profile Vishakha Bhat May 4, 2025 5:53 PM

ಶಿರಸಿ: ಉಪರಾಷ್ಟ್ರಪತಿ ಜಗದೀಪ ಧನಕರ್‌ (Jagdeep Dhankhar) ಅವರು ಮೇ 5 ರಂದು ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಆಗಮನದ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲಾ ಪೊಲೀಸರು ಬಿಗಿ ಭದ್ರತೆಯನ್ನು ಹಮ್ಮಿಕೊಂಡಿದ್ದಾರೆ. ದೆಹಲಿಯಿಂದ ಎಸ್‌ಪಿಜಿ ಹಾಗೂ ಎನ್‌ಎಸ್‌ಜಿ ಪಡೆಯು ಹೆಲಿಕ್ಯಾಪ್ಟರ್ ಮೂಲಕ ಸಿದ್ಧತೆ ನಡೆಸಿದೆ. ಉಪರಾಷ್ಟ್ರಪತಿಗಳು ದೆಹಲಿಯಿಂದ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದಿಳಿದು ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೈದಾನಕ್ಕೆ ಬಂದಿಳಿಯಲಿದ್ದು, ಅಲ್ಲಿಂದ ರಸ್ತೆಯ ಮೂಲಕ ನಗರದ ಬನವಾಸಿ ರಸ್ತೆಯಲ್ಲಿರುವ ಅರಣ್ಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ.

ನಂತರ ಜಗದೀಪ್‌ ಧನಕರ್‌ ಅವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಕಾರ್ಯಕ್ರಮ ಮುಗಿಸಿ ನಂತರ ಸಿದ್ದಾಪುರಕ್ಕೆ ತೆರಳುತ್ತಾರೆ. ಉಪರಾಷ್ಟ್ರಪತಿಗಳ ಆಗಮದ ಹಿನ್ನಲೆಯಲ್ಲಿ ಎಸ್‌ಪಿಜಿ, ಎನ್‌ಎಸ್‌ಜಿ ಮತ್ತು ಪೊಲೀಸ್ ಇಲಾಖೆಯು ಭದ್ರತಾ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಕೈಗೊಳ್ಳುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ನೇತೃತ್ವದಲ್ಲಿ ಭದ್ರತೆ ಕೈಗೊಂಡಿರುವ ಪೊಲೀಸರು, ಎಲ್ಲಿಯೂ ಯಾವುದೇ ಅಡೆತಡೆ ಆಗದಂತೆ ಕ್ರಮ ಕೈಗೊಂಡಿದ್ದಾರೆ.

ಶಿರಸಿ ಮತ್ತು ಸಿದ್ದಾಪುರದಲ್ಲಿ ಭದ್ರತೆಯ ವ್ಯೂಹ ಏರ್ಪಡಿಸಿರುವ ಪೊಲೀಸರು ಒಂದು ಎಸ್.ಪಿ, ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು,5 ಡಿ.ಎಸ್.ಪಿ, 12 ಸಿಪಿಐ, 30 ಪಿ.ಎಸ್.ಐ, 67 ಎ.ಎಸ್.ಐ, 517 ಪೊಲೀಸ್ ಸಿಬ್ಬಂದಿಗಳು, 41 ಮಹಿಳಾ ಪೊಲೀಸ್ ಸಿಬ್ಬಂದಿಗಳು, 6 ಜಿಲ್ಲಾ ಮೀಸಲು ಶಸಸ್ತ್ರಪಡೆ, 2 ರಾಜ್ಯ ಶಸಸ್ತ್ರ ಮೀಸಲು ಪಡೆ, 2 ಶ್ವಾನದಳ, 2 ಅಂಬ್ಯುಲೆನ್ಸ್, ಅಗ್ನಿಶಾಮಕದಳ, 1 ಮೊಬೈಲ್ ಜಾಮರ್, 2 ಬಾಂಬ್ ನಿಷ್ಕ್ರೀಯದಳ ಹಾಗೂ ಎಸ್.ಪಿ.ಜಿ ಕಮಾಂಡೋಗಳು ಕಾರ್ಯನಿರ್ವಹಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ: Jagdeep Dhankhar: "ಸಂಸತ್ತೇ ಸರ್ವೋಚ್ಛ"; ಸುಪ್ರೀಂ ಕೋರ್ಟ್‌ಗೆ ಟಾಂಗ್‌ ಕೊಟ್ಟ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌

ಮೂರು ಹೆಲಿಕ್ಯಾಪ್ಟರ್ ಗಳ ಮೂಲಕ 11.20 ಕ್ಕೆ ನಗರಕ್ಕೆ ಆಗಮಿಸುವ ಉಪ ರಾಷ್ಟ್ರಪತಿ, 11.40 ಕ್ಕೆ ನಗರದ ಅರಣ್ಯ ಮಹಾವಿದ್ಯಾಲಯಕ್ಕೆ ಆಗಮಿಸಿ, ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ. ಈಗಾಗಲೇ ಪೊಲೀಸ್ ಇಲಾಖೆ ಉಪ ರಾಷ್ಟ್ರಪತಿ ತೆರಳು ಮಾರ್ಗವನ್ನು ಜಿರೋ ಟ್ರಾಫಿಕ್ ವ್ಯವಸ್ಥೆಯನ್ನು ಕಲ್ಪಿಸಿದ್ದು, ಸೋಮವಾರ ಶಿರಸಿ ನಗರದಾದ್ಯಂತ ಇನ್ನಷ್ಟು ಕಟ್ಟೆಚ್ಚರ ವಹಿಸಲಾಗುತ್ತದೆ. ಡಿ.ಎಸ್.ಪಿ ಕೆ.ಎಲ್.ಗಣೇಶ, ಸಿಪಿಐ ಶಶಿಕಾಂತ ವರ್ಮಾ, ಸಿದ್ದಾಪುರದ ಪಿಐ ಜೆ.ಬಿ.ಸೀತಾರಾಮ ಸೇರಿದಂತೆ ಹಲವು ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಬಂದೋಬಸ್ತ ಕೈಗೊಂಡಿದ್ದಾರೆ. ಉಪ ರಾಷ್ಟ್ರಪತಿ ಆಗಮಿಸುವ ಹಿನ್ನೆಲೆಯಲ್ಲಿ ನಗರದ ಮುಖ್ಯ ರಸ್ತೆಯ ಹೊಂಡ-ಗುಂಡಿಗಳನ್ನು ಮುಚ್ಚುವ ಕಾರ್ಯವೂ ನಡೆದಿದೆ.