ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Paris Diamond league 2025: ಇಂದು ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಸ್ಪರ್ಧೆ

ಚೋಪ್ರಾ ತಮ್ಮ 2025 ರ ಅಭಿಯಾನವನ್ನು ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಸಣ್ಣ ಆಹ್ವಾನಿತ ಸ್ಪರ್ಧೆಯಲ್ಲಿ ಗೆಲುವಿನೊಂದಿಗೆ ಪ್ರಾರಂಭಿಸಿದ್ದರು. 84.52 ಮೀಟರ್ ಎಸೆತವನ್ನು ದಾಖಲಿಸಿದ್ದರು. ನಂತರ ಅವರು ಮೇ 16 ರಂದು ದೋಹಾದಲ್ಲಿ(90.23 ಮೀಟರ್ ಎಸೆತ) ವೃತ್ತಿಜೀವನದ ಮೈಲಿಗಲ್ಲನ್ನು ತಲುಪಿದ್ದರು.

ಇಂದು ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಸ್ಪರ್ಧೆ

Profile Abhilash BC Jun 20, 2025 8:34 AM

ಪ್ಯಾರಿಸ್‌: ಎರಡು ಬಾರಿ ಒಲಿಂಪಿಕ್ಸ್‌ ಪದಕ ಗೆದ್ದಿರುವ ಭಾರತ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ(Neeraj Chopra) ಅವರು ಇಂದು(ಶುಕ್ರವಾರ) ತಡರಾತ್ರಿ 1.15ಕ್ಕೆ ಆರಂಭವಾಗುವ ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಎಂಟು ವರ್ಷಗಳ ನಂತರ ಅವರು ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ(Paris Diamond league 2025) ಸ್ಪರ್ಧಿಸುತ್ತಿದ್ದಾರೆ. ಜರ್ಮನಿಯ ಜೂಲಿಯನ್‌ ವೆಬರ್‌, ಎರಡು ಬಾರಿಯ ವಿಶ್ವ ಚಾಂಪಿಯನ್‌ ಗ್ರೇನಡದ ಆ್ಯಂಡರ್ಸನ್‌ ಪೀಟರ್(Anderson Peters) ಅವರಿಂದ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.

ಮೇ ತಿಂಗಳಲ್ಲಿ ಸತತ ಎರಡು ಸ್ಪರ್ಧೆಗಳಲ್ಲಿ ಎರಡನೇ ಸ್ಥಾನ ಪಡೆದಿದ್ದ ನೀರಜ್‌ ವರ್ಷದ ಮೊದಲ ಚಿನ್ನದ ಪದಕ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಜೂಲಿಯನ್ ವೆಬರ್ ಮತ್ತು ಆಂಡರ್ಸನ್ ಪೀಟರ್ಸ್ ಮಾತ್ರ ಚೋಪ್ರಾ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಮೀರಿಸಿದ್ದಾರೆ. ವೆಬರ್ 91.44 ಮೀಟರ್ ಎಸೆದ ಜೀವಮಾನದ ಶ್ರೇಷ್ಠ ಸಾಧನೆಯನ್ನು ಹೊಂದಿದ್ದರೆ, ಪೀಟರ್ಸ್ 93.07 ಮೀಟರ್ ಎಸೆದಿದ್ದಾರೆ. ಕಳೆದ ತಿಂಗಳು ದೋಹಾದಲ್ಲಿ ನಡೆದ ಪ್ರದರ್ಶನದೊಂದಿಗೆ ಚೋಪ್ರಾ ಇತ್ತೀಚೆಗೆ ವಿಶೇಷ 90 ಮೀಟರ್ ಕ್ಲಬ್‌ಗೆ ಸೇರಿದ್ದರು.

ಇದನ್ನೂ ಓದಿ Neeraj Chopra: ರಾಷ್ಟ್ರೀಯ ದಾಖಲೆ ಬರೆದ ನೀರಜ್‌ ಚೋಪ್ರಾಗೆ ಮೋದಿ ಅಭಿನಂದನೆ

ಚೋಪ್ರಾ ತಮ್ಮ 2025 ರ ಅಭಿಯಾನವನ್ನು ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಸಣ್ಣ ಆಹ್ವಾನಿತ ಸ್ಪರ್ಧೆಯಲ್ಲಿ ಗೆಲುವಿನೊಂದಿಗೆ ಪ್ರಾರಂಭಿಸಿದ್ದರು. 84.52 ಮೀಟರ್ ಎಸೆತವನ್ನು ದಾಖಲಿಸಿದ್ದರು. ನಂತರ ಅವರು ಮೇ 16 ರಂದು ದೋಹಾದಲ್ಲಿ(90.23 ಮೀಟರ್ ಎಸೆತ) ವೃತ್ತಿಜೀವನದ ಮೈಲಿಗಲ್ಲನ್ನು ತಲುಪಿದ್ದರು.

ಸ್ಫರ್ಧಿಗಳ ಪಟ್ಟಿ

ನೀರಜ್ ಚೋಪ್ರಾ (ಭಾರತ)

ಜೂಲಿಯನ್ ವೆಬರ್ (ಜರ್ಮನಿ)

ಆಂಡರ್ಸನ್ ಪೀಟರ್ಸ್ (ಗ್ರೆನಡಾ)

ಕೆಶಾರ್ನ್ ವಾಲ್ಕಾಟ್ (ಟ್ರಿನಿಡಾಡ್ ಮತ್ತು ಟೊಬಾಗೊ)

ಜೂಲಿಯಸ್ ಯೆಗೊ (ಕೀನ್ಯಾ)

ಆಂಡ್ರಿಯನ್ ಮಾರ್ಡೇರ್ (ಮೊಲ್ಡೊವಾ)

ಲೂಯಿಜ್ ಮೌರಿಸಿಯೊ ಡ ಸಿಲ್ವಾ (ಬ್ರೆಜಿಲ್)