ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yadagiri News: ಲವ್‌, ಸೆಕ್ಸ್‌ & ದೋಖಾ; ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಿಧವೆಗೆ ವಂಚನೆ

ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ವಿಧವೆಯ ಜತೆ ದೈಹಿಕ ಸಂಪರ್ಕ ಬೆಳೆಸಿ, ಆಕೆಯ ಲಕ್ಷಾಂತರ ರೂ. ಬೆಲೆ ಬಾಳುವ ಜಮೀನು ಮಾರಿ ಹಣ ಪಡೆದು ವಂಚಿಸಿದ ಪ್ರಕರಣ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ಯಾದಗಿರಿ ತಾಲೂಕಿನ ಬಸಂತಪುರ ಗ್ರಾಮದ ಸುವರ್ಣಾ ವಂಚನೆಗೊಳಗಾದ ವಿಧವೆ ಮಹಿಳೆ. ತಡಿಬಿಡಿ ಗ್ರಾಮದ ಮಾಳಪ್ಪ ಹತ್ತಕುಣಿ ಎಂಬುವನು ಸುವರ್ಣಾಗೆ ವಂಚಿಸಿದಾತ.

ಮದುವೆಯಾಗುವುದಾಗಿ ನಂಬಿಸಿ ವಿಧವೆಗೆ ವಂಚನೆ

ಸಾಂದರ್ಭಿಕ ಚಿತ್ರ.

Profile Ramesh B Mar 20, 2025 3:44 PM

ಯಾದಗಿರಿ: ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ವಿಧವೆಯ ಜತೆ ದೈಹಿಕ ಸಂಪರ್ಕ ಬೆಳೆಸಿ, ಆಕೆಯ ಲಕ್ಷಾಂತರ ರೂ. ಬೆಲೆ ಬಾಳುವ ಜಮೀನು ಮಾರಿ ಹಣ ಪಡೆದು ವಂಚಿಸಿದ ಪ್ರಕರಣ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ವಂಚನೆಗೊಳಗಾದ ಮಹಿಳೆ ಕಣ್ಣೀರಿಡುತ್ತ ಬಾಟಲ್‌ನಲ್ಲಿ ಡಿಸೇಲ್ ತೆಗೆದುಕೊಂಡು ಯಾದಗಿರಿ ಎಸ್‌ಪಿ ಕಚೇರಿಗೆ ಆಗಮಿಸಿ, ನ್ಯಾಯ ಸಿಗದಿದ್ದರೆ ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಣ್ಣೀರಿಟ್ಟಿದ್ದಾಳೆ (Yadagiri News). ಸದ್ಯ ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾದಗಿರಿ ತಾಲೂಕಿನ ಬಸಂತಪುರ ಗ್ರಾಮದ ಸುವರ್ಣಾ ವಂಚನೆಗೊಳಗಾದ ವಿಧವೆ ಮಹಿಳೆ. ತಡಿಬಿಡಿ ಗ್ರಾಮದ ಮಾಳಪ್ಪ ಹತ್ತಕುಣಿ ಎಂಬುವನು ಸುವರ್ಣಾಗೆ ವಂಚಿಸಿದಾತ.

ಹತ್ತು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡ ಸುವರ್ಣಾ ತನಗಿರುವ ಕಷ್ಟದ ಬಗ್ಗೆ ಅಬ್ಬೆತುಮಕೂರಿನ ಸ್ವಾಮೀಜಿ ಬಳಿ ಅಳಲು ತೊಂಡಿಕೊಂಡಿದ್ದಳು. ಆಗ ವಂಚಕ ಮಾಳಪ್ಪ ಹತ್ತಿಕುಣಿಯ ಪರಿಚಯವಾಗಿತ್ತು.

ಈ ಸುದ್ದಿಯನ್ನೂ ಓದಿ: Electric shock: ಹೈಟೆನ್ಷನ್ ವಿದ್ಯುತ್ ಟವರ್ ಏರಿ, ತಾಯಿಯ ಎದುರೇ ಪ್ರಾಣ ಬಿಟ್ಟ ಮಗ!

ಅಬ್ಬೆತುಮಕೂರು ಮಠದಲ್ಲಿ ಪರಿಚಯವಾದ ಇಬ್ಬರ ಮಧ್ಯೆ ಗೆಳೆತನ ಮೂಡಿತ್ತು. ನಂತರ ಮಾಳಪ್ಪ ಹಾಗೂ ಸುವರ್ಣಾ ಆಪ್ತರಾಗಿದ್ದಾರೆ. ಸುವರ್ಣಾಗೆ ಬಾಳು ಕೊಡುತ್ತೇನೆಂದು‌ ಮಾಳಪ್ಪ ಬಳಸಿಕೊಂಡಿದ್ದ ಎನ್ನಲಾಗಿದೆ. ಸುವರ್ಣಾ ತೇಲಂಗಾಣದ ನಾರಾಯಣಪೇಟದಲ್ಲಿ 4 ಎಕರೆ ಜಮೀನು ಹೊಂದಿದ್ದಳು. ನಂತರ ಕೂಡಿ ಬಾಳೋಣ ಅಂತ ನಂಬಿಸಿ ಲಕ್ಷಾಂತರ ರೂ. ಬೆಲೆ ಬಾಳುವ ಜಮೀನನ್ನು ಮಾರಿ ಹಣ ತೆಗೆದುಕೊಂಡು ಮಾಳಪ್ಪ ಪರಾರಿಯಾಗಿದ್ದ.

ತನ್ನ ಹೆಸರಿನಲ್ಲಿದ್ದ ಆಸ್ತಿ, ದುಡ್ಡು, ಬಂಗಾರ ಮಾರಿಕೊಂಡು ಅದನ್ನು ಖರ್ಚು ಮಾಡಿದ್ದಾನೆ ಎಂದು ಸುವರ್ಣಾ ದೂರಿದ್ದಾಳೆ. ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಸಿದ್ದಾಳೆ.

ಮಗಳನ್ನೇ ಹುರಿದು ಮುಕ್ಕಿದ ಕಾಮಪಿಶಾಚಿ ತಂದೆ ಬಂಧನ

ದೇವನಹಳ್ಳಿ: ತಂದೆಯೇ ಮಗಳ ಮೇಲೆ ಕಾಮಪಿಶಾಚಿಯಂತೆ ಅತ್ಯಾಚಾರ ಎಸಗಿದ ಘಟನೆ ಹೊಸಕೋಟೆ ನಗರದಲ್ಲಿ ನಡೆದಿದೆ. ತಂದೆಯಿಂದ ಅತ್ಯಾಚಾರಕ್ಕೊಳಗಾದ ಮತ್ತು ಬೆದರಿಕೆ ಹಾಕಲ್ಪಟ್ಟ ಯುವತಿ ಮನೆ ಬಿಟ್ಟು ಪಿಜಿಯಲ್ಲಿ ಆಶ್ರಯ ಪಡೆದ ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಂದೆಯೇ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಹೊಸಕೋಟೆ ಮಹಿಳಾ ಠಾಣೆ ಪೊಲೀಸರು ಆರೋಪಿ ಮಂಜುನಾಥ್​ನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.

19 ವರ್ಷ ವಯಸ್ಸಿನ ಮಗಳ‌ ಮೇಲೆ ತಂದೆ ಮಂಜುನಾಥ ಅತ್ಯಾಚಾರ ಮಾಡಿದ್ದರ ಜತೆಗೆ ಈ ವಿಷಯವನ್ನು ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಆಕೆಗೆ ಬೆದರಿಕೆಯನ್ನೂ ಹಾಕಿದ್ದಾನೆ ಎನ್ನಲಾಗಿದೆ. ಕಾರು ಚಾಲಕನಾಗಿರುವ ಮಂಜುನಾಥ್​​​ಗೆ ಮೂವರು ಮಕ್ಕಳು. ಇಬ್ಬರು ಹೆಣ್ಣು, ಒಂದು ಗಂಡು ಮಗು. ಹಿರಿಯ ಮಗಳ ಮೇಲೆ‌ ಅತ್ಯಾಚಾರ ಮಾಡಿರುವ ಆರೋಪ ಹಾಗೂ ದೂರು ದಾಖಲಾಗಿದೆ. ತಂದೆಯ ಕಾಟ ತಾಳಲಾರದೆ ಯುವತಿ ಪಿಜಿಯಲ್ಲಿ ವಾಸ ಮಾಡುತ್ತಿದ್ದಳು ಎನ್ನಲಾಗಿದೆ. ವಿಷಯ ತಿಳಿಸಿದರೆ ಕೊಲೆ ಮಾಡುವ ಬೆದರಿಕೆಯನ್ನೂ ಈತ ಹಾಕಿದ್ದ. ಹೀಗಾಗಿ ಜೀವ ಭಯದಿಂದ ಯುವತಿ ಮನೆಯಿಂದ ದೂರ ಉಳಿದಿದ್ದಳು.

ತಂದೆಯಿಂದಾದ ಅತ್ಯಾಚಾರಕ್ಕೆ ನ್ಯಾಯ ಒದಗಿಸುವಂತೆ ಯುವತಿ ಆಗ್ರಹಿಸಿದ್ದು, ಸದ್ಯ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಮಂಜುನಾಥನನ್ನು ಬಂಧಿಸಲಾಗಿದ್ದು, ಬಾಯಿ ಬಿಡಿಸಲಾಗುತ್ತಿದೆ.