Puneeth Rajkumar Birthday: ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ಹಿರಿಯ ನಾಗರಿಕರಿಗೆ ವಾಕರ್ ವಿತರಿಸಿದ ನಟ ವಿನೋದ್ ರಾಜ್
Puneeth Rajkumar Birthday: ನೆಲಮಂಗಲದ ಮಂಚೇನಹಳ್ಳಿ ಗ್ರಾಮದಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಯುವಕರ ಸಂಘದಿಂದ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಸೋಮವಾರ ಆಚರಣೆ ಮಾಡಲಾಗಿತ್ತು. ಈ ವೇಳೆ ವಿನೋದ್ ರಾಜ್ ಅವರು, ಹಿರಿಯ ನಾಗರಿಕರಿಗೆ ವಾಕರ್‌ಗಳನ್ನು ವಿತರಿಸಿದ್ದಾರೆ.


ನೆಲಮಂಗಲ: ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ (Puneeth Rajkumar Birthday) ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ನಟ ವಿನೋದ್ ರಾಜ್ ಅವರು ವಾಕರ್‌ಗಳನ್ನು ವಿತರಿಸಿದ್ದಾರೆ. ನೆಲಮಂಗಲದ ಮಂಚೇನಹಳ್ಳಿ ಗ್ರಾಮದಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಯುವಕರ ಸಂಘದಿಂದ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಸೋಮವಾರ ಆಚರಣೆ ಮಾಡಲಾಗಿದ್ದು, ಈ ವೇಳೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿನೋದ್ ರಾಜ್ (Vinod Raj) ಅವರು, ಹಿರಿಯ ನಾಗರಿಕರಿಗೆ ವಾಕರ್‌ಗಳನ್ನು ವಿತರಿಸಿದ್ದಾರೆ.
ಈ ವೇಳೆ ನಟ ವಿನೋದ್ ರಾಜ್ ಅವರು ಮಾತನಾಡಿ, ಮಾಯಾ ರೀತಿಯಲ್ಲಿ ಬಂದು ಮಾಯಾ ರೀತಿಯಾಗಿ ಪುನೀತ್ ರಾಜ್ ಕುಮಾರ್ ಹೋಗಿದ್ದಾರೆ. ಬದುಕಿದ್ದಾಗ ಏನಾದರೂ ಸಾಧನೆ ಮಾಡಬೇಕೆಂದು ತೋರಿಸಿಕೊಟ್ಟವರು ನಟ ಪುನೀತ್ ಎಂದು ಭಾವುಕರಾಗಿದ್ದಾರೆ.
ಅಪ್ಪು ಸಮಾಧಿ ದರ್ಶನಕ್ಕೆ ಅಭಿಮಾನಿಗಳ ಸಾಗರ
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದ ಹಿಂಭಾಗದಲ್ಲಿರುವ ಅಪ್ಪು ಅವರ ಸಮಾಧಿಯ ದರ್ಶನಕ್ಕಾಗಿ ಸಾವಿರಾರು ಮಂದಿ ಆಗಮಿಸಿದ್ದಾರೆ. ಅಪ್ಪು ಜನ್ಮದಿನದ ಹಿನ್ನೆಲೆ ಸಾವಿರಾರು ಅಭಿಮಾನಿಗಳು ಮಾ. 16ರ ರಾತ್ರಿಯಿಂದಲೇ ಕಂಠೀರವ ಸ್ಟುಡಿಯೋ ಗೇಟ್ ಮುಂದೆ ಜಮಾಯಿಸಿದ್ದರು. ಬೆಳಗ್ಗೆ 6 ಗಂಟೆಗೆ ಸ್ಟುಡಿಯೋ ಆವರಣದ ಗೇಟ್ ತೆರೆಯಲಾಗಿತ್ತು. ಕೂಡಲೇ ಸರದಿ ಸಾಲಿನಲ್ಲಿ ನಿಂತ ಅಭಿಮಾನಿಗಳು, ಸಾಲು ಸಾಲಾಗಿ ಅಪ್ಪು ಸಮಾಧಿಯ ದರ್ಶನ ಮಾಡಿದರು.
ಬೆಳಗ್ಗೆ ಸುಮಾರು 8 ಗಂಟೆ ಸುಮಾರಿಗೆ ಸಮಾಧಿ ಸ್ಥಳಕ್ಕೆ ಅಪ್ಪು ಕುಟುಂಬಸ್ಥರು ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅರಜಾರಮರ ಎಂಬ ಘೋಷಣೆಗಳನ್ನು ಕೂಗಿದರು.