ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Missing Case: ಕಾಲುವೆಯಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆ, ರಾತ್ರಿಯಿಡೀ ಟೆನ್ಷನ್‌ ಕೊಟ್ಟ 5 ಮಕ್ಕಳು!

ನಿನ್ನೆ ಸಂಜೆ ಕಾಲುವೆಯಲ್ಲಿ ಮೀನು ಹಿಡಿಯಲು ಹೋದ ಐವರು ಮಕ್ಕಳು ಮನೆಗೆ ಮರಳಿರಲಿಲ್ಲ. ಪಾಲಕರು ಗಾಬರಿಯಾಗಿ ಸುತ್ತಮುತ್ತ ಹುಡುಕಾಟ ನಡೆಸಿದ್ದು, ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸ್‌ ದೂರು ನೀಡಲಾಗಿದೆ. ಹೇಳದೆ ಕೇಳದೆ ಮೀನು ಹಿಡಿಯಲು ಹೋಗಿದ್ದಕ್ಕೆ ಮನೆಯವರು ಬೈಯುತ್ತಾರೆ ಎಂದು ಗಾಬರಿಯಾದ ಮಕ್ಕಳು ದೇಗುಲದಲ್ಲಿಯೇ ಉಳಿದುಕೊಂಡಿದ್ದರು.

ಮೀನು ಹಿಡಿಯಲು ಹೋಗಿ ನಾಪತ್ತೆ, ರಾತ್ರಿಯಿಡೀ ಟೆನ್ಷನ್‌ ಕೊಟ್ಟ 5 ಮಕ್ಕಳು!

ಹರೀಶ್‌ ಕೇರ ಹರೀಶ್‌ ಕೇರ Apr 7, 2025 9:27 AM

ಶಿವಮೊಗ್ಗ: ಶಿವಮೊಗ್ಗದಲ್ಲಿ ಘೋರವಾದ ದುರಂತ ಒಂದು ಭಾವಿಸಲಾದ ಘಟನೆ ಸಮಾಧಾನದ ನಿಟ್ಟುಸಿರಿನಲ್ಲಿ ಅಂತ್ಯವಾಗಿದೆ. ಆದರೆ, ಐವರು ಮಕ್ಕಳು ಮಾತ್ರ ತಮ್ಮ ಮನೆಯವರಿಗೆ ರಾತ್ರಿಯಿಡೀ ಟೆನ್ಷನ್‌ ಕೊಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕುಮಾರಿ ನಾರಾಯಣಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ ಕಾಲುವೆಯಲ್ಲಿ ಮೀನು ಹಿಡಿಯಲು ಹೋದ ಈ ಐವರು ಮಕ್ಕಳು ನಾಪತ್ತೆಯಾಗಿದ್ದರು. ರಾತ್ರಿ ಮನೆಗೆ ಹಿಂದಿರುಗದೆ ಹೆತ್ತವರ ಎದೆ ಧಸಕ್‌ ಎನ್ನುವಂತೆ ಮಾಡಿದ್ದ ಈ ಮಕ್ಕಳು ಇಂದು ಮುಂಜಾನೆ ಹಿಂದಿರುಗಿದ್ದಾರೆ.

ನಿನ್ನೆ ರಾತ್ರಿ ಕುಮಾರಿ ನಾರಾಯಣಪುರ ಗ್ರಾಮದ ಬಳಿಯ ದೇಗುಲದಲ್ಲಿ ಮಕ್ಕಳು ತಂಗಿದ್ದರು ಎನ್ನಲಾಗಿದೆ. ಹೇಳದೆ ಕೇಳದೆ ಮೀನು ಹಿಡಿಯಲು ಹೋಗಿದ್ದಕ್ಕೆ ಮನೆಯವರು ಬೈಯುತ್ತಾರೆ ಎಂದು ಗಾಬರಿಯಾದ ಐವರು ಮಕ್ಕಳು ದೇಗುಲದಲ್ಲಿಯೇ ಉಳಿದುಕೊಂಡಿದ್ದಾರೆ. ಇದು ತಿಳಿಯದೆ ಮಕ್ಕಳ ಪೋಷಕರು ಗಾಬರಿಯಾಗಿದ್ದರು. ಸುತ್ತಮುತ್ತ ಹುಡುಕಾಟ ನಡೆಸಿದ್ದರು. ಬಳಿಕ ದೂರು ದಾಖಲಿಸಿದ್ದರು. ಈಗ ಮಕ್ಕಳು ಮರಳಿ ಬಂದಿದ್ದರಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಧನುಷ್ (14 ಕಿರಣ್ (10) ಲೋಹಿತ್ (12) ಭುವನ್ (8) ಮತ್ತು ಲಕ್ಷ್ಮೀಶ (12) ಹೀಗೆ ನಾಪತ್ತೆಯಾಗಿ ಮರಳಿ ಬಂದವರು. ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ನಿನ್ನೆ ಪ್ರಕರಣ ದಾಖಲಾಗಿತ್ತು.

ಶಿಕ್ಷಕರ ಎಡವಟ್ಟಿಗೆ ಕಣ್ಣು ಕಳೆದುಕೊಂಡ ಬಾಲಕ

ಚಿಕ್ಕಬಳ್ಳಾಪುರ: ಶಿಕ್ಷಕರೊಬ್ಬರ ಎಡವಟ್ಟಿಗೆ ಒಂದನೇ ತರಗತಿ ವಿದ್ಯಾರ್ಥಿಯೊಬ್ಬ ಕಣ್ಣು ಕಳೆದುಕೊಂಡಿರುವ ಘಟನೆ (Eyesight loss) ಚಿಂತಾಮಣಿ ತಾಲೂಕಿನ ಯಗವಕೋಟೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಡೆದಿದೆ. ಶಾಲೆಯ ಶಿಕ್ಷಕಿ ಕೋಲಿನಿಂದ ಹೊಡೆದಿದ್ದರಿಂದಲೇ ತಮ್ಮ ಮಗನ ಕಣ್ಣಿಗೆ ಹಾನಿಯಾಗಿದೆ. ಹೀಗಾಗಿ ಶಿಕ್ಷಕಿ ವಿರುದ್ಧ ಕ್ರಮ ಕೈಗೊಂಡು, ತಮಗೆ ನ್ಯಾಯ ಕೊಡಿಸಬೇಕು ಎಂದು ಬಾಲಕನ ಪೋಷಕರು ಆಗ್ರಹಿಸಿದ್ದಾರೆ. ಕಣ್ಣು ಕಳೆದುಕೊಂಡ ಬಾಲಕನ ತಂದೆ-ತಾಯಿ ನ್ಯಾಯಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ.

ಯಗವಕೋಟೆ ಸರ್ಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಟರಾಜ್ - ಅಂಜಲಿ ದಂಪತಿ ಪುತ್ರನಾದ ಯಶ್ವಂತ್ (8) ಒಂದನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಶಿಕ್ಷಕಿ ಸರಸ್ವತಿ ಕೋಲಿನಿಂದ ಬೇರೆ ಬಾಲಕನಿಗೆ ಹೊಡೆಯಲು ಹೋದಾಗ ಯಶ್ವಂತ್ ಕಣ್ಣಿಗೆ ಪೆಟ್ಟು ಬಿದ್ದಿದೆ. ಇದರಿಂದ ಬಲಗಣ್ಣಿಗೆ ಹಾನಿಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪೋಷಕರು ಬಾಲಕನಿಗೆ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ವೈದ್ಯರು ಬಾಲಕನ ಕಣ್ಣು ಕಾಣುವುದಿಲ್ಲ ಎಂದು ದೃಢಕರಿಸಿದ್ದರಿಂದ ಪೋಷಕರು ಶಿಕ್ಷಕಿಯ ವಿರುದ್ಧ ಪೊಲೀಸ್‌ ಠಾಣೆಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಯಾವುದೇ ರೀತಿಯ ಕ್ರಮ ಜರುಗಿಸದ ಕಾರಣಕ್ಕೆ ನ್ಯಾಯಕ್ಕಾಗಿ ಬಾಲಕ ಹಾಗೂ ಅವರ ತಂದೆ-ತಾಯಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ನಡೆಸಿದ್ದಾರೆ. ಶಿಕ್ಷಕಿಯ ಮೇಲೆ ಕ್ರಮ ಜರುಗಿಸುವವರೆಗೂ ಕಾನೂನು ಹೋರಾಟ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Vinay Somaiah death: ಆತ್ಮಹತ್ಯೆಗೆ ಮುನ್ನ ಪತ್ನಿಗೆ ಪತ್ರ ಬರೆದಿದ್ದ ವಿನಯ್, ಲೆಟರ್​ನಲ್ಲಿ ಏನಿದೆ?