ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

POCSO Case: ಐಸ್‌ ಕ್ರೀಂ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ನೀಚ

ಚಿತ್ರದುರ್ಗ ನಗರದ ಅಗಸನಹಳ್ಳಿ ಬಡಾವಣೆಯ ಸಾಧಿಕ್ (56) ಎಂಬಾತ ಬಾಲಕಿ ಮೇಲೆ ಹೇಯ ಕೃತ್ಯ ಎಸಗಿದ ಆರೋಪಿಯಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಬಾಲಕಿ 3ನೇ ತರಗತಿಯಲ್ಲಿ ಓದುತ್ತಿದ್ದಳು. ಸಂತ್ರಸ್ತ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಐಸ್‌ ಕ್ರೀಂ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ನೀಚ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Mar 15, 2025 6:50 AM

ಚಿತ್ರದುರ್ಗ: ರಾಜ್ಯದಲ್ಲಿ ಅಪ್ರಾಪ್ತೆಯ ಮೇಲಿನ ಅತ್ಯಾಚಾರ (Physical Abuse) ಘಟನೆಗಳು ಮುಂದುವರಿಯುತ್ತಿದ್ದು, ಮತ್ತೊಂದುಘಟನೆ ವರದಿಯಾಗಿದೆ. ಐಸ್ ಕ್ರೀಂ ಆಸೆ ತೋರಿಸಿ 9 ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ (Pocso case) ಎಸಗಿರುವ ಘಟನೆ ನಡೆದಿದೆ. ಚಿತ್ರದುರ್ಗದ (chitradurga news) ಅಗಸನಹಳ್ಳಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮನೆ ಬಳಿ ಆಟವಾಡುತ್ತಿದ್ದ 9 ವರ್ಷದ ಬಾಲಕಿಗೆ ವೃದ್ಧನೊಬ್ಬ ಐಸ್‌ಕ್ರೀಂ ಕೊಡಿಸುತ್ತೇನೆಂದು ಹೇಳಿ ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.

ಅಗಸನಹಳ್ಳಿ ಬಡಾವಣೆಯ ಸಾಧಿಕ್ (56) ಎಂಬಾತ ಬಾಲಕಿ ಮೇಲೆ ಅತ್ಯಚಾರ ಎಸಗಿದ ಆರೋಪಿಯಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಬಾಲಕಿ 3ನೇ ತರಗತಿಯಲ್ಲಿ ಓದುತ್ತಿದ್ದಳು. ಸಂತ್ರಸ್ತ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.

ನೀರು ಕುಡಿಯಲು ಹೋಗಿ ಬಾವಿಗೆ ಬಿದ್ದ ಬಾಲಕ, ರಕ್ಷಿಸಲು ಹೋದ ಅಜ್ಜಿಯೂ ನೀರುಪಾಲು!

ವಿಜಯಪುರ: ನೀರು ಕುಡಿಯಲು ಬಾವಿಗೆ ಇಳಿದಿದ್ದ ಬಾಲಕ ಕಾಲು ಜಾರಿ ಮುಳುಗಿದ್ದು, ಬಾಲಕನ ರಕ್ಷಿಸಲು ಹೋದ ಅಜ್ಜಿಯೂ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ತೋಟದಲ್ಲಿ ನಡೆದಿದೆ.

ಅಸಾದ್‌ ಮುಲ್ಲಾ (12) ಮೃತ ಬಾಲಕ, ಸಲೀಮಾ‌ ಮುಲ್ಲಾ (55) ಮೃತ ಅಜ್ಜಿ‌ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿರುವ ಹೊರ್ತಿ ಪೊಲೀಸರು ಬಾವಿಯೊಳಗಿದ್ದ ಇಬ್ಬರ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯ ಬಗ್ಗೆ ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Physical Abuse: ಕೋಲಾರದಲ್ಲಿ ಹೀನ ಕೃತ್ಯ; ಮಗಳ ಮೇಲೆಯೇ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ತಂದೆ!