Priyank Panchal: ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಪ್ರಿಯಾಂಕ್ ಪಾಂಚಾಲ್
2021ರಲ್ಲಿ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಸೀನಿಯರ್ ತಂಡಕ್ಕೂ ಆಯ್ಕೆಯಾಗಿದ್ದರು. ಒಮ್ಮೆ ರೋಹಿತ್ ಶರ್ಮಾ ಸ್ಥಾನಕ್ಕೆ ಬದಲಿಯಾಗಿ ತಂಡ ಸೇರಿಕೊಂಡಿದ್ದರು. ಮೀಸಲು ಆಟಗಾರರ ಪಟ್ಟಿಯಲ್ಲಿಯೂ ಕಾಣಿಸಿಕೊಂಡಿದ್ದರು. ಆದರೆ ಅವರಿಗೆ ಭಾರತ ಪರ ಅವಕಾಶ ಮಾತ್ರ ಸಿಕ್ಕಿರಲಿಲ್ಲ.


ಅಹಮದಾಬಾದ್: ಗುಜರಾತ್‌ನ ಬ್ಯಾಟರ್ ಪ್ರಿಯಾಂಕ್ ಪಾಂಚಾಲ್(Priyank Panchal) ಅವರು ತಕ್ಷಣಕ್ಕೆ ಜಾರಿಗೆ ಬರುವಂತೆ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ(Priyank Panchal announces retirement) ಹೇಳಿದ್ದಾರೆ. ಈ ಹಿಂದೆ ಭಾರತ ‘ಎ’ ತಂಡವನ್ನು ಕೂಡ ಅವರು ಮುನ್ನಡೆಸಿದ್ದರು. ಆರಂಭಿಕ ಆಟಗಾರರಾಗಿದ್ದ ಪಾಂಚಾಲ್, ಗುಜರಾತ್ ರಣಜಿ ತಂಡದ ನಾಯಕನಾಗಿದ್ದರು. 17 ವರ್ಷ ಅವರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ ದೇಶೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆ ಬರೆದಿದ್ದಾರೆ. 2016-17ರಲ್ಲಿ ಒಮ್ಮೆ ರಣಜಿ ಟ್ರೋಫಿಯನ್ನು ಗೆದ್ದಿದ್ದರು.
35 ವರ್ಷದ ಪಾಂಚಾಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಅವರು ಕೊನೆಯ ಬಾರಿಗೆ ಕೇರಳ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ 148 ರನ್ ಗಳಿಸಿದ್ದರು.
2016-17ರಲ್ಲಿ ಗುಜರಾತ್ ತನ್ನ ಚೊಚ್ಚಲ (ಮತ್ತು ಏಕೈಕ) ರಣಜಿ ಪ್ರಶಸ್ತಿಯನ್ನು ಗೆದ್ದ ಋತುವಿನಲ್ಲಿ, ಪಾಂಚಾಲ್ 1300 ರನ್ ಗಳಿಸಿದ್ದರು. ಇದು ಟೂರ್ನಮೆಂಟ್ ಇತಿಹಾಸದಲ್ಲಿ ಒಬ್ಬ ಬ್ಯಾಟರ್‌ನ ಅತ್ಯುತ್ತಮ ಗಳಿಕೆಗಳಲ್ಲಿ ಒಂದಾಗಿದೆ. ಹಿಂದಿನ ಋತುವಿನಲ್ಲಿ, ಅವರು ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದ ತಂಡದ ಭಾಗವಾಗಿದ್ದರು.
ಪಾಂಚಾಲ್ 127 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 45.18ರ ಸರಾಸರಿಯಲ್ಲಿ 8,856 ರನ್ ಗಳಿಸಿದ್ದಾರೆ. ಇದರಲ್ಲಿ 29 ಶತಕಗಳು ಮತ್ತು 34 ಅರ್ಧ ಶತಕಗಳು ಒಳಗೊಂಡಿವೆ. 9 ಸಾವಿರ ರನ್ ಪೂರೈಸುವ ಅವಕಾಶವಿದ್ದರೂ ಪಾಂಚಾಲ್ ಇದನ್ನು ಸಾಧಿಸದೆ ನಿವೃತ್ತಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ IPL 2025: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಸೂರ್ಯಕುಮಾರ್
2021ರಲ್ಲಿ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಸೀನಿಯರ್ ತಂಡಕ್ಕೂ ಆಯ್ಕೆಯಾಗಿದ್ದರು. ಒಮ್ಮೆ ರೋಹಿತ್ ಶರ್ಮಾ ಸ್ಥಾನಕ್ಕೆ ಬದಲಿಯಾಗಿ ತಂಡ ಸೇರಿಕೊಂಡಿದ್ದರು. ಮೀಸಲು ಆಟಗಾರರ ಪಟ್ಟಿಯಲ್ಲಿಯೂ ಕಾಣಿಸಿಕೊಂಡಿದ್ದರು. ಆದರೆ ಅವರಿಗೆ ಭಾರತ ಪರ ಅವಕಾಶ ಮಾತ್ರ ಸಿಕ್ಕಿರಲಿಲ್ಲ.