Shreyas Iyer Creates history: ಐಪಿಎಲ್ ಇತಿಹಾಸದಲ್ಲಿ ನೂತನ ದಾಖಲೆ ಬರೆದ ಶ್ರೇಯಸ್ ಅಯ್ಯರ್
IPL 2025: ಸೋಮವಾರ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸುತ್ತಿದ್ದರೆ, ಕ್ವಾಲಿಫೈಯರ್ -1ರಲ್ಲಿ ಆಡುವ ಅವಕಾಶ ಸಿಗುತ್ತಿತ್ತು. ಸೋಲಿನಿಂದ 4ನೇ ಸ್ಥಾನದಲ್ಲೇ ಉಳಿಯಿತು. ಇದೀಗ ದ್ವಿತೀಯ ಕ್ವಾಲಿಫೈಯರ್ ಪ್ರವೇಶಿಸಬೇಕಿದ್ದರೆ ಎಲಿಮೀನೆಟ್ ಪಂದ್ಯ ಗೆಲ್ಲಬೇಕು.


ಜೈಪುರ: ಶ್ರೇಯಸ್ ಅಯ್ಯರ್(Shreyas Iyer) ನೇತೃತ್ವದ ಪಂಜಾಬ್ ಕಿಂಗ್ಸ್ (PBKS) ತಂಡವು ಐಪಿಎಲ್ 2025ರ(IPL 2025) ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವನ್ನು ಸೋಲಿಸಿ ಮೊದಲ ಕ್ವಾಲಿಫೈಯರ್ಗೆ ಅರ್ಹತೆ ಗಳಿಸಿತು. ಈ ಮೂಲಕ 11 ವರ್ಷಗಳ ಬಳಿಕ ಕ್ವಾಲಿಫೈಯರ್ ಪ್ರವೇಶಿಸಿದ ಸಾಧನೆ ಮಾಡಿತು. ಇದೇ ವೇಳೆ ನಾಯಕ ಶ್ರೇಯಸ್ ಅಯ್ಯರ್(Shreyas Iyer Creates history) ಐಪಿಎಲ್ನಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದರು.
ಶ್ರೇಯಸ್ ಅಯ್ಯರ್ ಐಪಿಎಲ್ ಇತಿಹಾಸದಲ್ಲಿ 3 ತಂಡಗಳನ್ನು ಮುನ್ನಡೆಸಿ ಕ್ವಾಲಿಫೈಯರ್ಗೆ ಮುನ್ನಡೆಸಿದ ಏಕೈಕ ನಾಯಕ ಎಂಬ ಮೈಲುಗಲ್ಲು ನೆಟ್ಟರು. 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜತೆ ಐಪಿಎಲ್ ವೃತ್ತಿಜೀವನ ಆರಂಭಿಸಿದ ಶ್ರೇಯಸ್, ತಂಡವನ್ನು 2020 ರ ಋತುವಿನಲ್ಲಿ ಫೈನಲ್ ತಲುಪಿಸಿದ್ದರು. ಇದಾದ ಬಳಿಕ 2024 ರಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಿ ತಂಡವನ್ನು ಚಾಂಪಿಯನ್ ಮಾಡಿದ್ದರು. ಇದೀಗ ಪಂಜಾಬ್ಗೂ ಚೊಚ್ಚಲ ಪ್ರವಶಸ್ತಿ ಗೆಲ್ಲಿಸಿಕೊಡಲು ಇನ್ನೆಡರು ಹೆಜ್ಜೆ ದಾಟಬೇಕಿದೆ.
ಮೊದಲ ಕ್ವಾಲಿಫೈಯರ್ ಪ್ರವೇಶಿಸಿರುವ ಪಂಜಾಬ್ ಕಿಂಗ್ಸ್ ತಂಡ ಆರ್ಸಿಬಿ ಅಥವಾ ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯವನ್ನಾಡಲಿದೆ. ಈ ಪಂದ್ಯ ಮೇ 29ರಂದು ಚಂಡಿಗಢದಲ್ಲಿ ನಡೆಯಲಿದೆ.
ಸೋಮವಾರ ನಡೆದಿದ್ದ ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸುತ್ತಿದ್ದರೆ, ಕ್ವಾಲಿಫೈಯರ್ -1ರಲ್ಲಿ ಆಡುವ ಅವಕಾಶ ಸಿಗುತ್ತಿತ್ತು. ಸೋಲಿನಿಂದ 4ನೇ ಸ್ಥಾನದಲ್ಲೇ ಉಳಿಯಿತು. ಇದೀಗ ದ್ವಿತೀಯ ಕ್ವಾಲಿಫೈಯರ್ ಪ್ರವೇಶಿಸಬೇಕಿದ್ದರೆ ಎಲಿಮೀನೆಟ್ ಪಂದ್ಯ ಗೆಲ್ಲಬೇಕು.
ಇದನ್ನೂ ಓದಿ IPL 2025: ಲಖನೌ ಎದುರು ಆರ್ಸಿಬಿ ಸೋತರೆ ಏನು ಕಥೆ? 4 ತಂಡಗಳ ಅಗ್ರ 2ರ ಲೆಕ್ಕಾಚಾರ!
ಸೋಮವಾರದ ಪಂದ್ಯದಲ್ಲಿ ಪಂಜಾಬ್ ಪರ ಪ್ರಿಯಾನ್ಸ್ ಆರ್ಯ ಕೇವಲ 35 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಆಕರ್ಷಕ 62 ರನ್ ಸಿಡಿಸಿದರೆ, ಆಸೀಸ್ ಮೂಲದ ಬ್ಯಾಟರ್ ಜೋಶ್ ಇಂಗ್ಲಿಶ್ 42 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಸ್ಪೋಟಕ 73 ರನ್ ಬಾರಿಸಿ ಪಂದ್ಯದ ಗೆಲುವಿನ ರೂವಾರಿಗಳೆನಿಸಿದರು.