IND vs END: ರಿಷಭ್ ಪಂತ್‌ಗೆ ರೂಪಿಸಿರುವ ರಣತಂತ್ರ ರವೀಲ್ ಮಾಡಿದ ಕ್ರಿಸ್ ವೋಕ್ಸ್!
ಮೊದಲನೇ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕಗಳನ್ನು ಬಾರಿಸಿದ್ದ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಶೇಷ ಗೇಮ್ ಪ್ಲ್ಯಾನ್ ರೂಪಿಸಲಾಗಿದೆ ಎಂದು ಇಂಗ್ಲೆಂಡ್ ವೇಗದ ಬೌಲರ್ ಕ್ರಿಸ್ ವೋಕ್ಸ್ ಪ್ರವಾಸಿ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಉಭಯ ತಂಡಗಳ ನಡುವಣ ಎರಡನೇ ಟೆಸ್ಟ್ ಪಂದ್ಯ ಜುಲೈ 2 ರಂದು ಆರಂಭವಾಗಲಿದೆ.


ಬರ್ಮಿಂಗ್‌ಹ್ಯಾಮ್: ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯ(IND vs ENG) ಆರಂಭಿಕ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕಗಳನ್ನು ಬಾರಿಸಿದ್ದ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಅವರನ್ನು ಕಟ್ಟಿ ಹಾಕಲು ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಶೇಷ ಗೇಮ್ ಪ್ಲ್ಯಾನ್ ರೂಪಿಸಲಾಗಿದೆ ಎಂದು ಇಂಗ್ಲೆಂಡ್ ತಂಡದ ಹಿರಿಯ ವೇಗದ ಬೌಲರ್ ಕ್ರಿಸ್ ವೋಕ್ಸ್ (Chris Woaks) ತಿಳಿಸಿದ್ದಾರೆ. ರಿಷಭ್ ಪಂತ್ ಅವರ ಅವಳಿ ಶತಕಗಳ ಹೊರತಾಗಿಯೂ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಇದೀಗ ಉಭಯ ತಂಡಗಳು ಜುಲೈ 2 ರಂದು ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡಸಲಿವೆ.
ಲೀಡ್ಸ್‌ನಲ್ಲಿ ತಮ್ಮ ಶತಕಗಳ ಮೂಲಕ ರಿಷಭ್ ಪಂತ್, ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಸಿಡಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಬರೆದಿದ್ದರು. ಆ ಮೂಲಕ ಮಾಜಿ ನಾಯಕ ಎಂಎಸ್ ಧೋನಿ ದಾಖಲೆಯನ್ನು ಮುರಿದಿದ್ದರು. ಎರಡೂ ಇನಿಂಗ್ಸ್‌ಗಳಲ್ಲಿಯೂ ಕೂಡ ಪಂತ್ ಭಯಮುಕ್ತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅಲ್ಲದೆ ಆರಂಭದಲ್ಲಿ ತ್ವರಿತವಾಗಿ ವಿಕೆಟ್ ಕಳೆದುಕೊಂಡಿದ್ದ ವೇಳೆಯೂ ಅವರು ವಿಭಿನ್ನ ಶಾಟ್‌ಗಳಿಗೆ ಕೈ ಹಾಕಿದ್ದರು.
IND vs ENG: ಜೋಫ್ರಾ ಆರ್ಚರ್ ಇಲ್ಲ, ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್‌ನ ಪ್ಲೇಯಿಂಗ್ XI ಪ್ರಕಟ!
ರಿಷಭ್ ಪಂತ್‌ಗೆ ವಿಶೇಷ ಗೇಮ್ ಪ್ಲ್ಯಾನ್ ಇದೆ ಎಂದ ಕ್ರಿಸ್ ವೋಕ್ಸ್
ಎರಡನೇ ಟೆಸ್ಟ್ ಪಂದ್ಯದ ನಿಮಿತ್ತ ಮಾತನಾಡಿದ ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್, ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಅವರ ವೀರೋಚಿತ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿ, ಎಡಗೈ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿರುವಾಗ ಟೆಸ್ಟ್ ಕ್ರಿಕೆಟ್ ಹೆಚ್ಚು ರೋಮಾಂಚನಕಾರಿಯಾಗುತ್ತದೆ ಎಂದು ಹೇಳಿದ್ದಾರೆ. ರಿಷಭ್ ಪಂತ್‌ಗೆ ವಿಶೇಷ ಗೇಮ್ ಪ್ಲ್ಯಾನ್ ಬಗ್ಗೆ ತಂಡ ಮೀಟಿಂಗ್‌ನಲ್ಲಿ ಚರ್ಚೆ ನಡೆಸಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
"ರಿಷಭ್ ಪಂತ್ ಅವರಂಥ ಆಟಗಾರ ಕ್ರೀಸ್‌ನಲ್ಲಿದ್ದರೆ, ಮುಂದೆ ಏನಾಗುತ್ತದೆ ಎಂದು ನಿಮಗೆ ನಿಜವಾಗಿಯೂ ತಿಳಿಯುವುದಿಲ್ಲ. ಅವರು ನಿಮ್ಮನ್ನು ಯಾವಾಗಲೂ ಉತ್ಸಾಹದಿಂದ ಇರಿಸುವ ಆಟಗಾರ, ಕೆಲವೊಮ್ಮೆ ಅವರ ವಿರುದ್ಧ ಬೌಲ್ ಮಾಡಲು ಬೌಲರ್‌ಗಳು ಉತ್ಸುಕರಾಗುತ್ತಾರೆ, ಕೆಲವೊಮ್ಮೆ ಅವರು ಬೌಲರ್ ಆಗಿ ನಿಮ್ಮನ್ನು ಹಿನ್ನಡೆಯಾಗುವಂತೆ ಮಾಡುತ್ತಾರೆ," ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕ್ರಿಸ್ ವೋಕ್ಸ್ ತಿಳಿಸಿದ್ದಾರೆ.
IND vs ENG: ರಾಹುಲ್ ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ಜೋ ರೂಟ್!
"ಅವರು ಕ್ರೀಸ್‌ನಲ್ಲಿರುವಾಗ ಆಟದ ಭಾಗವಾಗುವುದು ಯಾವಾಗಲೂ ರೋಮಾಂಚನಕಾರಿಯಾಗಿದೆ. ಅವರು ಹೆಡಿಂಗ್ಲೆಯಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ನಾವು ಅವರನ್ನು ಆದಷ್ಟು ಬೇಗ ಔಟ್ ಮಾಡುತ್ತೇವೆ ಎಂದು ಭಾವಿಸುತ್ತೇವೆ. ಬೌಲಿಂಗ್ ಗುಂಪಾಗಿ ಆಗಿ ನಾವು ಇನ್ನೂ ಭೇಟಿಯಾಗಿಲ್ಲ, ಆದರೆ, ಕಳೆದ ವಾರ ನಮ್ಮ ವಿರುದ್ಧ ಯಾರೆಲ್ಲಾ ಚೆನ್ನಾಗಿ ಬ್ಯಾಟ್ ಮಾಡಿದ್ದರು. ಅವರ ವಿರುದ್ದ ನಾವು ಖಚಿತವಾಗಿಯೂ ಚರ್ಚೆ ನಡೆಸುತ್ತೇವೆ," ಎಂದು ಅವರು ಹೇಳಿದ್ದಾರೆ.
ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್ ಪ್ಲೇಯಿಂಗ್ XI
ಝ್ಯಾಕ್ ಕ್ರಾವ್ಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸ್, ಜಾಶ್ ಟಾಂಗ್, ಶೋಯೆಬ್ ಬಷೀರ್