ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Urfi Javed: ಎಂಗೇಜ್‌ ಆಗೋದ್ರಾ ಉರ್ಫಿ ಜಾವೇದ್? ನಿಶ್ಚಿತಾರ್ಥದ ಫೊಟೋ ಲೀಕ್‌; ಭಾರೀ ವೈರಲ್‌

ಇತ್ತೀಚೆಗಷ್ಟೇ ತಾನು ಮುಸ್ಲಿಂ ಯುವತಿಯಾಗಿದ್ದರೂ ಮುಸ್ಲಿಂ ಯುವಕನನ್ನು ಮದುವೆ ಆಗೊಲ್ಲ ಎಂಬ ಹೇಳಿಕೆ ನೀಡಿ ಸಾಕಷ್ಟು ವಿವಾದಕ್ಕೆ ಒಳಗಾಗಿದ್ದ ಉರ್ಫಿ ಇದೀಗ ಯಾವುದೆ ಸುದ್ದಿ ಇಲ್ಲದೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೇ ಫೋಟೋ ಕೂಡ ವೈರಲ್‌ ಆಗಿದೆ.

ಉರ್ಫಿ ಜಾವೇದ್‌ ಎಂಗೇಜ್ಮೆಂಟ್ ಹಿಂದಿನ ಅಸಲಿಯತ್ತು ಏನು?

urfi

Profile Pushpa Kumari Feb 14, 2025 3:48 PM

ನವದೆಹಲಿ: ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ (Urfi Javed) ವಿಚಿತ್ರ ಉಡುಗೆಗಳಿಂದಲೇ ಖ್ಯಾತಿ ಗಳಿಸುವ ಜೊತೆಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕವು‌ ಸಖತ್‌ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ತಾನು ಮುಸ್ಲಿಂ ಯುವತಿ ಯಾಗಿದ್ದರೂ ಮುಸ್ಲಿಂ ಯುವಕನನ್ನು ಮದುವೆ ಆಗೊಲ್ಲ ಎಂಬ ಹೇಳಿಕೆ ನೀಡಿ ಸಾಕಷ್ಟು ವಿವಾದಕ್ಕೆ ಒಳಗಾಗಿದ್ದ ಉರ್ಫಿ ಇದೀಗ ಯಾವುದೆ ಸುದ್ದಿ ಇಲ್ಲದೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೇ ಫೋಟೋ ಕೂಡ ವೈರಲ್‌ ಆಗಿದ್ದು ನಟಿ ಉರ್ಫಿ ಇಷ್ಟು ಬೇಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರಾ? ಎಂಬ ಅನುಮಾನ ಉರ್ಫಿ ಅಭಿಮಾನಿಗಳಿಗೆ ಕಾಡಿದ್ದು ಸದ್ಯ ಈ ಎಲ್ಲ ಗಾಸಿಪ್ ಗಳಿಗೂ ಇದೀಗ ತೆರೆ ಬಿದ್ದಿದೆ.

ಉರ್ಫಿ ಜಾವೇದ್ ಅವರಿಗೆ ಮಂಡಿ ಊರಿ ಹುಡುಗ ರಿಂಗ್ ಹಾಕುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇವರ ಅಭಿ ಮಾನಿ ಗಳು ಶಾಕ್ ಆಗಿದ್ದಾರೆ. ಆದರೆ ಇದು ನಿಜವಾದ ನಿಶ್ಚಿತಾರ್ಥವಲ್ಲ ಬದಲಿಗೆ ರಿಯಾಲಿಟಿ ಶೋ ಒಂದರ ಪ್ರಚಾರಕ್ಕಾಗಿ ಈ ಶೂಟ್ ಮಾಡಿಸಿದ್ದು ಎಂಬ ವಿಚಾರ ಸದ್ಯ ತಿಳಿದು ಬಂದಿದೆ.

ಸದಾ ಕಾಲ ಟ್ರೆಂಡ್ ಲಿಸ್ಟ್‌ನಲ್ಲಿ ತನ್ನನ್ನು ಗುರುತಿಸಿಕೊಳ್ಳಲು ಇಷ್ಟ ಪಡುವ ಉರ್ಫಿ ಜಾವೇದ್ ರಿಯಾಲಿಟಿ ಶೋನಲ್ಲಿ ಕೂಡ ಬಹಳ ಸಕ್ರಿಯವಾಗಿದ್ದಾರೆ. ವೈರಲ್ ಆದ ‌ ಫೋಟೋ ಹೊಸ ರಿಯಾಲಿಟಿ ಶೋಗೆ ಸಂಬಂಧ ಪಟ್ಟ ಪ್ರೋಮೊ ಎಂದು ತಿಳಿದು ಬಂದಿದೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಶೀಘ್ರವೇ ಎಂಗೇಜ್ಡ್ ರೋಕಾ ಯಾ ದೋಖಾ ಹೆಸರಿನ ರಿಯಾಲಿಟಿ ಶೋ ಪ್ರಸಾರವಾಗಲಿದ್ದು ಇದೇ ಶೋನಲ್ಲಿ ಉರ್ಫಿ ಕೂಡ ಇದ್ದಾರೆ. ಇದೇ ಪ್ರಮೋಶನ್ ವೇಳೆ ತೆಗೆದ ಫೋಟೋ ಶೂಟ್ ಹಾಗೂ ವಿಡಿಯೋಗಳೇ ಉರ್ಫಿ ಅವರ ನಿಶ್ಚಿತಾರ್ಥ ಎಂದು ಬಿಂಬಿಸಲಾಗುತ್ತಿದ್ದು ಇದೆಲ್ಲ ಸುಳ್ಳು ಇದು ರಿಯಾಲಿಟಿ ಶೋನ ಪ್ರಚಾರವಷ್ಟೇ ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.

ಜಿಯೋ ಹಾಟ್ ಸ್ಟಾರ್ ನಲ್ಲಿ ಎಂಗೇಜ್ಡ್ ರೋಕಾ ಯಾ ದೋಖಾ ಹೊಸ ರಿಯಾಲಿಟಿ ಶೋ ಹೆಚ್ಚು ಜನರನ್ನು ಆಕರ್ಷಿಸಲಿದ್ದು ವಿಡಿಯೊದಲ್ಲಿ ಉರ್ಫಿ ಜಾವೇದ್ ರಿಯಾಲಿಟಿ ಶೋ ಪ್ರಮೋಷನ್ ನೀಡಿದ್ದಾರೆ. ಇದರಲ್ಲಿ ಲವ್, ಡ್ರಾಮಾ , ಹಾರ್ಟ್ ಬ್ರೇಕ್ ಸಂಬಂಧಿಸಿದ ವಿಚಾರ ಇರಲಿದ್ದು ಹೀಗಾಗಿ ಉರ್ಫಿ ಎಂಗೇಜ್‌ ಆಗಿಲ್ಲ ಬದಲಾಗಿ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ರಿಯಾಲಿಟಿ ಷೋ ಆರಂಭವಾಗುವ ಬಗ್ಗೆ ರಿವೀಲ್‌ ಮಾಡಿದ್ದಾರೆ.

ಇದನ್ನು ಓದಿ: ‌Viral Video: ಮಗನ ಅರಶಿನಶಾಸ್ತ್ರದಲ್ಲಿ ಪತ್ನಿಯೊಂದಿಗೆ ಸಖತ್‌ ಆಗಿ ಸ್ಟೆಪ್ಸ್‌ ಹಾಕಿದ ಸಚಿವ ಶಿವರಾಜ್ ಸಿಂಗ್ ಚೌಹಾಣ್ ; ವಿಡಿಯೊ ವೈರಲ್

ವಿಭಿನ್ನ ಡ್ರೆಸ್ ಮತ್ತು ಸ್ಟೈಲ್ ನಿಂದಲೇ ಹೆಚ್ಚು ಜನಪ್ರಿಯವಾಗಿದ್ದ ಉರ್ಫಿ ಅವರ ಸಾರಥ್ಯದಲ್ಲಿ ಈ ಹೊಸ ರಿಯಾಲಿಟಿ ಶೋ ಹೇಗೆ ಮೂಡಿ ಬರಬಹುದು ಎಂಬ ಕೌತುಕ ಎಲ್ಲರಲ್ಲೂ ಮೂಡುತ್ತಿದ್ದು ಫೆಬ್ರವರಿ 14 ರ ವ್ಯಾಲೆಂಟೈನ್ಸ್ ಡೇ ದಿನ ಈ ಶೋ ತೆರೆಕಾಣಲಿದ್ದು ಎಲ್ಲರ ಕುತೂಹಲ ಮತ್ತಷ್ಟು ಹೆಚ್ಚಿಸುತ್ತಾ ಎಂದು ಕಾದುನೋಡಬೇಕು.