ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Devil Movie: ಹಿರಿದಾಗುತ್ತಿದೆ ದರ್ಶನ್‌ ʼಡೆವಿಲ್‌ʼ ಬಳಗ; ಚಿತ್ರಕ್ಕೆ ʼನವಗ್ರಹʼ ನಾಯಕಿ ಎಂಟ್ರಿ

Devil Movie: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸದ್ಯ ʼಡೆವಿಲ್‌ʼ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿದ್ದು, ಇದೀಗ ಮುಖ್ಯ ಪಾತ್ರಕ್ಕೆ ʼನವಗ್ರಹʼ ನಟಿ ಶರ್ಮಿಳಾ ಮಾಂಡ್ರೆ ಆಯ್ಕೆಯಾಗಿದ್ದಾರೆ.

ದರ್ಶನ್‌ ʼಡೆವಿಲ್‌ʼ ಚಿತ್ರದ ಅಖಾಡಕ್ಕೆ ʼನವಗ್ರಹʼ ನಾಯಕಿ ಎಂಟ್ರಿ

ʼಡೆವಿಲ್‌ʼ ಚಿತ್ರದ ಪೋಸ್ಟರ್‌.

Profile Ramesh B Mar 13, 2025 5:59 PM

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Darshan) ಇದೀಗ ಕಹಿ ಘಟನೆ ಮರೆತು ಶೂಟಿಂಗ್‌ ಅಖಾಡಕ್ಕೆ ಇಳಿದಿದ್ದಾರೆ. ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡಿದ್ದ ಅವರು ಇದೀಗ 'ಡೆವಿಲ್‌' ಚಿತ್ರ (Devil Movie)ದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಪ್ರಕಾಶ್‌ ನಿರ್ದೇಶನದ 'ಡೆವಿಲ್‌' ಚಿತ್ರದಲ್ಲಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಚಿತ್ರತಂಡ ಮೈಸೂರಿನಲ್ಲಿ ಬೀಡುಬಿಟ್ಟಿದ್ದು, ದರ್ಶನ್‌ ಅಭಿನಯದ ಭಾಗಗಳನ್ನು ಸೆರೆ ಹಿಡಿಯಲಾಗುತ್ತಿದೆ. ಇದೀಗ ಚಿತ್ರತಂಡಕ್ಕೆ ಸ್ಯಾಂಡಲ್‌ವುಡ್‌ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಸೇರ್ಪಡೆಯಾಗಿದ್ದು, ಅವರೂ ದರ್ಶನ್‌ ಜತೆಗೆ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.

ಸದ್ಯ ʼಡೆವಿಲ್‌ʼ ಚಿತ್ರದ ಶೂಟಿಂಗ್‌ ಮೈಸೂರಿನ ಹೋಟೆಲ್ ಲಲಿತ್ ಮಹಲ್​ನಲ್ಲಿ ನಡೆಸಲಾಗುತ್ತಿದೆ. ಈ ಸಿನಿಮಾದ ಮುಖ್ಯ ಪಾತ್ರಕ್ಕೆ ಶರ್ಮಿಳಾ ಆಯ್ಕೆಯಾಗಿದ್ದು, ಈ ಬಗ್ಗೆ ಅವರು ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಹೊಸ ಪ್ರತಿಭೆ, ಕರಾವಳಿ ಮೂಲದ ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದು, ಶರ್ಮಿಳಾ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ಶರ್ಮಿಳಾ ಮಾಂಡ್ರೆ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಇಲ್ಲಿದೆ.

ಹಾಗೆ ನೋಡಿದರೆ ದರ್ಶನ್‌ ಜತೆ ಶರ್ಮಿಳಾ ತೆರೆ ಹಂಚಿಕೊಳ್ಳುತ್ತಿರುವುದು ಇದು ಮೊದಲ ಸಲವೇನಲ್ಲ. 2008ರಲ್ಲಿ ತೆರೆಕಂಡ ದರ್ಶನ್‌ ಅವರ ʼನವಗ್ರಹʼ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆಯೂ ಕಾಣಿಸಿಕೊಂಡಿದ್ದರು. ದಿನಕರ್‌ ತೂಗುದೀಪ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್‌, ಶರ್ಮಿಳಾ ಜತೆಗೆ ಧರ್ಮ ಕೀರ್ತಿರಾಜ್‌, ವಿನೋದ್‌ ಪ್ರಭಾಕರ್‌, ಸೃಜನ್‌ ಲೋಕೇಶ್‌, ತರುಣ್‌ ಕಿಶೋರ್‌, ವರ್ಷಾ, ಗಿರಿ ದಿನೇಶ್‌ ಮತ್ತಿತರರು ಅಭಿನಯಿಸಿದ್ದರು. ಅದರಲ್ಲಿಯೂ ಧರ್ಮ ಕೀರ್ತಿರಾಜ್‌-ಶರ್ಮಿಳಾ ಜೋಡಿಯ ʼಕಣ್‌ ಕಣ್‌ ಸಲಿಗೆʼ ಹಾಡು ಇಂದಿಗೂ ಜನಪ್ರಿಯ. ಹಲವರ ಫೆವರೇಟ್‌ ಲಿಸ್ಟ್‌ನಲ್ಲಿ ಈಗಲೂ ಈ ಹಾಡಿದೆ.

Sharmiela Mandre

ಈ ಸುದ್ದಿಯನ್ನೂ ಓದಿ: The Devil Movie: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ʼದಿ ಡೆವಿಲ್ʼ ಚಿತ್ರದ‌ ಎರಡನೇ ಹಂತದ ಚಿತ್ರೀಕರಣ ಆರಂಭ

ʼಡೆವಿಲ್‌ʼ ಚಿತ್ರವನ್ನು ದರ್ಶನ್‌ ಜೈಲಿಗೆ ಹೋಗುವ ಮುನ್ನವೇ ಒಪ್ಪಿಕೊಂಡಿದ್ದರು. ಕೆಲವೊಂದಿಷ್ಟು ಭಾಗದ ಚಿತ್ರೀಕರಣವೂ ನಡೆದಿತ್ತು. ಇದೀಗ ಮತ್ತೆ ಶೂಟಿಂಗ್‌ ಪುನರಾರಂಭಿಸಲಾಗಿದೆ. ಮೈಸೂರಿಗೆ ತೆರಳಿರುವ ದರ್ಶನ್‌ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಹೋಟೆಲ್‌ ಲಲಿತ್‌ ಮಹಲ್‌ ಪ್ಯಾಲೇಸ್‌ ಜತೆಗೆ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿಯೂ ಚಿತ್ರೀಕರಣ ನಡೆಸಲು ಸಿನಿಮಾತಂಡ ಯೋಜನೆ ರೂಪಿಸಿದೆ.

ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ, ಪ್ರಕಾಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಮಹೇಶ್‌ ಮಂಜ್ರೇಕರ್‌, ಜಿಶು ಸೆಂಗುಪ್ತ, ಮುಖೇಶ್‌ ರಿಷಿ, ಅಚ್ಯುತ ಕುಮಾರ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನವಿದೆ.

ʼʼದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇರುವುದರಿಂದ ಈ ಹಂತದಲ್ಲಿ ಬರೀ ಮಾತಿನ ಭಾಗದ ಚಿತ್ರೀಕರಣ ಮಾತ್ರ ಮಾಡಲಾಗುವುದು. ಸಾಹಸ ಸನ್ನಿವೇಶಗಳ ಚಿತ್ರೀಕರಣವಾಗಲಿ ಅಥವಾ ಬೇರೆ ಯಾವುದೇ ರಿಸ್ಕ್ ಇರುವ ಸನ್ನಿವೇಶಗಳ ಚಿತ್ರೀಕರಣ ಮಾಡುವುದಿಲ್ಲʼʼ ಎಂದು ನಿರ್ದೇಶಕ ಪ್ರಕಾಶ್ ತಿಳಿಸಿದ್ದಾರೆ.