Gauthami Jadav: ಧನರಾಜ್ ಆಚಾರ್ ಮನೆಗೆ ದಿಢೀರ್ ಭೇಟಿ ಕೊಟ್ಟ ಗೌತಮಿ ಜಾಧವ್
ಗೌತಮಿ ಜಾಧವ್ ಅವರು ಶೋ ಮುಗಿದ ಬಳಿಕ ಹೆಚ್ಚು ಕರಾವಳಿಯಲ್ಲಿ ಬೀಡುಬಿಟ್ಟಿದ್ದರು. ಅನೇಕ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಟೆಂಪಲ್ ರನ್ ನಡೆಸುತ್ತಿದ್ದಾರೆ. ಇದರ ಮಧ್ಯೆ ಗೌತಮಿ ಜಾಧವ್ ಹಾಗೂ ಅವರ ಪತಿ ಅಭಿಷೇಕ್ ಅವರು ಧನರಾಜ್ ಆಚಾರ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ಕೂಡು ಕುಟುಂಬದ ಜೊತೆಗೆ ವಾಸಿಸುತ್ತಿರುವ ಧನರಾಜ್ ಅವರ ಮನೆಗೆ ಗೌತಮಿ ದಂಪತಿ ಅವರು ಬಂದು ಸರ್ಪ್ರೈಸ್ ಕೊಟ್ಟಿದ್ದಾರೆ.

Dhanraj Achar and Gauthami Jadav

ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯವಾದ ಬಳಿಕ ಸ್ಪರ್ಧಿಗಳು ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲ ಸ್ಪರ್ಧಿಗಳಿಗೆ ಸಿನಿಮಾ, ಸೀರಿಯಲ್ಗಳಿಂದ ಆಕರ್ಷಕ ಆಫರ್ ಬರುತ್ತಿದ್ದರೆ ಇನ್ನೂ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿನ್ನರ್ ಹನುಮಂತ, ಧನರಾಜ್, ರಜತ್, ಚೈತ್ರ ಸೇರಿದಂತೆ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ನಲ್ಲಿ ಭಾಗವಹಿಸುತ್ತಿದ್ದಾರೆ. ರನ್ನರ್-ಅಪ್ ತ್ರಿವಿಕ್ರಮ್ ಸಿಸಿಎಲ್ ಜೊತೆ ಮುದ್ದು ಸೊಸೆ ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ಉಗ್ರಂ ಮಂಜು ಕೂಡ ಹೊಸ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಆದರೆ, ಗೌತಮಿ ಜಾಧವ್ ಅವರು ಶೋ ಮುಗಿದ ಬಳಿಕ ಹೆಚ್ಚು ಕರಾವಳಿಯಲ್ಲಿ ಬೀಡುಬಿಟ್ಟಿದ್ದರು. ಅನೇಕ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಟೆಂಪಲ್ ರನ್ ನಡೆಸುತ್ತಿದ್ದಾರೆ. ಇತ್ತೀಚೆಗೆ ಕೃಷ್ಣನ ನಾಡು ಉಡುಪಿಯಲ್ಲೂ ಕಾಣಿಸಿಕೊಂಡಿದ್ದರು. ಇವರು ಯಾವುದೇ ರಿಯಾಲಿಟಿ ಶೋ ಆಗಲಿ ಅಥವಾ ಸೀರಿಯಲ್ನಲ್ಲಿ ನಟಿಸುವ ಬಗ್ಗೆ ಅಪ್ಡೇಟ್ ಇಲ್ಲ. ಹೀಗಿರುವಾಗ ಗೌತಮಿ ಜಾಧವ್ ದಿಢೀರ್ ಆಗಿ ಧನರಾಜ್ ಆಚಾರ್ ಮನೆಗೆ ಭೇಟಿ ಕೊಟ್ಟಿದ್ದಾರೆ.

ಗೌತಮಿ ಜಾಧವ್ ಹಾಗೂ ಅವರ ಪತಿ ಅಭಿಷೇಕ್ ಅವರು ಧನರಾಜ್ ಆಚಾರ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ಕೂಡು ಕುಟುಂಬದ ಜೊತೆಗೆ ವಾಸಿಸುತ್ತಿರುವ ಧನರಾಜ್ ಅವರ ಮನೆಗೆ ಗೌತಮಿ ದಂಪತಿ ಅವರು ಬಂದು ಸರ್ಪ್ರೈಸ್ ಕೊಟ್ಟಿದ್ದಾರೆ.

ಧನರಾಜ್ ಅವರ ಮನೆಗೆ ಭೇಟಿ ಕೊಟ್ಟು ಅವರ ಕುಟುಂಬಸ್ಥರ ಜೊತೆಗೆ ಗೌತಮಿ ಹಾಗೂ ಅಭಿಷೇಕ್ ಕೆಲ ಸಮಯ ಕಳೆದಿದ್ದಾರೆ.

ಜೊತೆಗೆ ಧನರಾಜ್ ಅವರ ಕುಟುಂಬಸ್ಥರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನು ಕಳೆದ ವಾರ ಧನರಾಜ್ ಅವರ ಊರಿಗೆ ತ್ರಿವಿಕ್ರಮ್ ಕೂಡ ಭೇಟಿಕೊಟ್ಟಿದ್ದರು. ಇವರು ಧನರಾಜ್ ಫ್ಯಾಮಿಲಿಯನ್ನ ಭೇಟಿಯಾಗಿದ್ದರು. ಮನೆಯ ಎಲ್ಲಾ ಸದಸ್ಯರ ಜೊತೆ ಕಾಲ ಕಳೆದ ತ್ರಿವಿಕ್ರಮ್ ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದರು. ತ್ರಿವಿಕ್ರಮ್ ಕಂಡು ಕಮಲಜ್ಜಿ ಕುಟುಂಬದ ಸದಸ್ಯರು ಕೂಡ ಸಂತೋಷವಾಗಿ, ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟಿದ್ದರು. ಈ ಫೋಟೋ ಕೂಡ ವೈರಲ್ ಆಗಿತ್ತು.
ತ್ರಿವಿಕ್ರಮ್ ಆಗಮನದ ಬಗ್ಗೆ ಖುಷಿ ಹಂಚಿಕೊಂಡಿದ್ದ ಧನರಾಜ್ ಅವರು, ನಮ್ಮ ಮನೆಯಲ್ಲಿ ಮಾಸ್ಟರ್ ತ್ರಿವಿಕ್ರಮ್. ಲವ್ ಯು ಮಾಸ್ಟರ್ ನೀವು ಬಂದಿದ್ದು ಖುಷಿ, ಖುಷಿ, ಖುಷಿ ಅಷ್ಟೇ. ಕಮಲಜ್ಜಿ ಕುಟುಂಬ ಮತ್ತು ವಿಕ್ಕಿ ಎಂದು ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಮಂತ್ರಾಲಯದಲ್ಲಿ ಹಲವು ಮುಗ್ಧ ಮನಸಿನ ದೈವವನ್ನು ಕಂಡೆ. ಥ್ಯಾಂಕ್ಯು ಮಂಗಳೂರು ಹುಲಿ ಎಂದು ತ್ರಿವಿಕ್ರಮ್ ಅವರು ಧನರಾಜ್ ಆಚಾರ್‌ಗೆ ಧನ್ಯವಾದಗಳನ್ನು ತಿಳಿಸಿದ್ದರು.
Chaithra Kundapura: ಕೂಲಿಂಗ್ ಗ್ಲಾಸ್ ಹಾಕಿ ಸಖತ್ ಸೈಲಿಶ್ ಲುಕ್ನಲ್ಲಿ ಮಿಂಚಿದ ಚೈತ್ರಾ ಕುಂದಾಪುರ