Pahalgam Terror attack: ಉಗ್ರ ಪೋಷಕ ಪಾಕ್‌ಗೆ ಶಾಕ್ ಮೇಲೆ ಶಾಕ್! ಪಾಕಿಸ್ತಾನ ಸರ್ಕಾರದ ಎಕ್ಸ್ ಅಕೌಂಟ್ ಬ್ಲಾಕ್
Pak Government's X Account Suspended:ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಉಗ್ರರು ಮಾರಣಹೋಮಗೈದ ಬೆನ್ನಲ್ಲೇ ಪಾಕ್ ವಿರುದ್ಧ ಭಾರತ ಒಂದಾದ ಮೇಲೊಂದರಂತೆ ಪ್ರಬಲ ಅಸ್ತ್ರ ಹೂಡುತ್ತಿರುವ ಭಾರತ ಇದೀಗ ಪಾಕಿಸ್ತಾನ ಸರ್ಕಾರದ ಎಕ್ಸ್ ಖಾತೆಯನ್ನೇ ಬ್ಲಾಕ್ ಮಾಡಿದೆ.


ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಎರಡು ದಿನಗಳ ಹಿಂದೆ ನಡೆದ ಉಗ್ರರ ದಾಳಿಗೆ(Pahalgam Terror attack) ಪ್ರತಿಕಾರದ ಪ್ರತಿಜ್ಞೆ ಮಾಡಿರುವ ಭಾರತ, ಕುತಂತ್ರಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಂಧೂ ಜಲ ಒಪ್ಪಂದ ರದ್ದು ಸೇರಿದಂತೆ ಪಾಕ್ ವಿರುದ್ಧ ಭಾರತ ಐದು ಮಹತ್ವದ ನಿರ್ಧಾರಗಳನ್ನು ಘೋಷಿಸಿದೆ. ಇದೀಗ ಇದರ ಬೆನ್ನಲ್ಲೇ ಭಾರತದಲ್ಲಿ ಭಾರತ ಇದೀಗ ಪಾಕಿಸ್ತಾನ ಸರ್ಕಾರದ ಎಕ್ಸ್ ಖಾತೆ ಬ್ಲಾಕ್(X Account Suspended) ಮಾಡಲಾಗಿದೆ.
Government of Pakistan's account on 'X' withheld in India pic.twitter.com/Lq4mc2G62g
— ANI (@ANI) April 24, 2025
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕ್ರೂರ ಪಹಲ್ಗಾಮ್ ಭಯೋತ್ಪಾದಕ ದಾಳಿಯ(Pahalgam terror attack) ನಂತರ ಪಾಕಿಸ್ತಾನ ವಿರುದ್ಧ ಖಡಕ್ ರಾಜತಾಂತ್ರಿಕ ನಿರ್ಧಾರ ತೆಗೆದುಕೊಂಡಿರುವ ಭಾರತ ದೆಹಲಿಯಲ್ಲಿರುವ ಪಾಕ್ ರಾಜತಾಂತ್ರಿಕ ಅಧಿಕಾರಿ ಸಾದ್ ಅಹ್ಮದ್ ವಾರೈಚ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ರಾತ್ರೋರಾತ್ರಿ ಪಾಕ್‌ನ ಎಲ್ಲಾ ಮಿಲಿಟಲಿ ಅಧಿಕಾರಿಗಳ ವಿರುದ್ದ ವಿದೇಶಾಂಗ ಸಚಿವಾಲಯ ಜಾರಿಗೊಳಿಸಿರುವ ಪರ್ಸೋನಾ ನಾನ್ ಗ್ರಾಟಾ ನೋಟ್ ಅನ್ನು ವಾರೈಚ್ ಅವರಿಗೆ ಹಸ್ತಾಂತರಿಸಲಾಗಿದೆ. ಆ ಮೂಲಕ ಭಾರತದಲ್ಲಿರುವ ಪಾಕಿಸ್ತಾನಿ ರಕ್ಷಣಾ, ನೌಕಾ ಮತ್ತು ವಾಯುಪಡೆ ಸಲಹೆಗಾರರು ತಕ್ಷಣ ಭಾರತದಿಂದ ಜಾಗ ಖಾಲಿ ಮಾಡಬೇಕಿದೆ. ಅವರಿಗೆಒಂದು ವಾರದ ಸಮಯಾವಕಾಶ ನೀಡಲಾಗಿದೆ. ಅಲ್ಲದೇ ಇಸ್ಲಮಾಬಾದ್‌ನಲ್ಲಿರುವ ಭಾರತೀಯ ಅಧಿಕಾರಿಗಳನ್ನೂ ತಕ್ಷಣ ಕರೆಸಿಕೊಳ್ಳಲು ಭಾರತ ನಿರ್ಧರಿಸಿದೆ.
ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್‌ನಲ್ಲಿ ಉಗ್ರರಿಂದ ಮೃತಪಟ್ಟ ಭರತ್ ಭೂಷಣ್ ಅಂತಿಮ ದರ್ಶನ ಮಾಡಿದ ಸಿಎಂ
ಪಹಲ್ಗಾಮ್ ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಹೈವೋಲ್ಟೇಜ್ ಸಭೆ ನಡೆದಿದೆ. ಎರಡುವರೆಗೆ ಗಂಟೆಗಳ ಕಾಲ ಸಭೆ ನಡೆಸಲಾಗಿದೆ. ಸಭೆಯ ನಂತರ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ ನಡೆಸಿದ್ದು, ಹಲವು ಮಹತ್ವದ ವಿಚಾರಗಳನ್ನು ತಿಳಿಸಿದೆ. ಭಾರತ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಯುದ್ಧವನ್ನು ಸಾರಿದೆ. ಸಿಂಧೂ ನದಿ ಒಪ್ಪಂದವನ್ನು ಅಂತ್ಯಗೊಳಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಪಾಕ್‌ಗೆ ದೊಡ್ಡ ಆಘಾತ ನೀಡಿರುವ ಭಾರತ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಗಳಿಗೆ ಭಾರತವನ್ನು ತೊರೆಯಲು ಸೂಚಿಸಿದೆ.