Shraddha Srinath: ಬಿಕಿನಿಯಲ್ಲಿ ಶ್ರದ್ಧಾ ಶ್ರೀನಾಥ್ ಹಾಟ್ ಹಾಟ್ ಫೋಟೋಶೂಟ್; ಪಡ್ಡೆ ಹುಡುಗ್ರು ಕ್ಲೀನ್ ಬೋಲ್ಡ್
ಯೂ ಟರ್ನ್ ಸಿನಿಮಾ ಖ್ಯಾತಿಯ ಶ್ರದ್ಧಾ ಶ್ರೀನಾಥ್ ಇದೀಗ ಮಾಲ್ಡೀವ್ಸ್ನಲ್ಲಿ ವೆಕೇಶನ್ ಮೂಡ್ನಲ್ಲಿದ್ದಾರೆ. ಮಾಲ್ಡೀವ್ಸ್ನಲ್ಲಿ ಶ್ರದ್ಧಾ ಶ್ರೀನಾಥ್ ಬಿಕಿನಿ ತೊಟ್ಟು ಹಾಟ್ ಫೋಟೋಶೂಟ್ ಮಾಡಿಸಿಕೊಂಡಿದ್ದು, ಆ ಫೋಟೋಗಳು ಇದೀಗ ಫುಲ್ ವೈರಲ್ ಆಗುತ್ತಿವೆ. ಇನ್ನು ಶ್ರದ್ಧಾ ಅವರು ಈ ಹಸಿಬಿಸಿ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.



ಯೂ ಟರ್ನ್, ಆಪರೇಷನ್ ಅಲಮೇಲಮ್ಮ, ರುಸ್ತುಂ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿರುವ ಕನ್ನಡತಿ ಶ್ರದ್ಧಾ ಶ್ರೀನಾಥ್ ಇದೀಗ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿ ಫುಲ್ ಬ್ಯುಸಿ ಆಗಿದ್ದಾರೆ.

ಇದೀಗ ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡಿರುವ ಶ್ರದ್ಧಾ ಶ್ರೀನಾಥ್ ಇತ್ತೀಚೆಗೆ ಮಾಲ್ಡೀವ್ಸ್ ಟ್ರಿಪ್ ಮಾಡಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಭಾರೀ ವೈರಲ್ ಆಗುತ್ತಿದೆ.

ಮೊದಲ ಬಾರಿಗೆ ಸಖತ್ ಬೋಲ್ಡ್ ಆಗಿರುವ ಲುಕ್ನಲ್ಲಿ ಅವರು ಕಾಣಿಸಿಕೊಂಡಿರುವುದು ವಿಶೇಷ. ಈ ಫೋಟೋಗಳು ಪಡ್ಡೆ ಹುಡುಗರ ಎದೆ ಬಡಿತವನ್ನು ಹೆಚ್ಚಿಸುವಂತಿವೆ.

ಶ್ರದ್ಧಾ ತಮ್ಮ ಫೋಟೋಗಳಿಗೆ ʻಅದು ಕೇವಲ ಕನಸಾಗಿ ಉಳಿಯಲಿಲ್ಲʼ ಎನ್ನುವ ಶೀರ್ಷಿಕೆ ಕೊಟ್ಟಿದ್ದಾರೆ.

ಇನ್ನು ವಿಡಿಯೊ ಕೂಡ ಅವರು ಹಂಚಿಕೊಂಡಿದ್ದು, 'ವಾಸ್ತವದಲ್ಲಿ ಒಂದು ಕಾಲು, ಇನ್ನೂ ಒಂದು ಮರಳಿನಲ್ಲಿ..' ಎಂದು ಕ್ಯಾಪ್ಷನ್ ನೀಡಿದ್ದಾರೆ.

ಇನ್ನು ಶ್ರದ್ಧಾ ಫೋಟೋಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಲೈಕ್ಸ್, ಕಮೆಂಟ್ಗಳು ಬಂದಿವೆ. ಸೆಲೆಬ್ರಿಟಿಗಳು ಕೂಡ ಶ್ರದ್ಧಾ ಫೋಟೋಗೆ ಕಮೆಂಟ್ ಮಾಡಿದ್ದಾರೆ.

ಶ್ರದ್ಧಾ ಅವರ ಫೋಟೋಗಳಿಗೆ 1.48 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ.

ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದಾರೆ. 2022ರಲ್ಲಿ ತೆರೆಕಂಡಿದ್ದ 'ಡಿಯರ್ ವಿಕ್ರಮ್' ಸಿನಿಮಾವೇ ಅವರು ನಟಿಸಿದ ಕೊನೆಯ ಚಿತ್ರವಾಗಿದೆ.