ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಮತ್ತೊಮ್ಮೆ ಸತ್ಯದ ಅನಾವರಣ

ಯಶಸ್ಸಿಗೆ ಅಪ್ಪಂದಿರು ಹಲವರು, ಆದರೆ ಸೋಲು ಮಾತ್ರ ಅನಾಥ’ ಎಂಬುದೊಂದು ಮಾತಿದೆ. ನಿಯೋಜಿತ ಕಾರ್ಯ ಭಾರದ ನೆರವೇರಿಕೆಯ ಹಾದಿಯಲ್ಲಿ ಮುಳ್ಳುಗಳೇ ತುಂಬಿವೆ, ಹೆಜ್ಜೆ ಹೆಜ್ಜೆಗೂ ಸಂಕಷ್ಟ-ಸವಾಲುಗಳು ಎದುರಾಗುತ್ತವೆ ಎಂಬುದು ಪೂರ್ವಭಾವಿಯಾಗಿ ಅರಿವಾಗುತ್ತಿದ್ದಂತೆ ಆ ಕಡೆ ತಲೆಯಿಟ್ಟೂ ಮಲಗದವರು, ಒಂದೊಮ್ಮೆ ಆ ಕಾರ್ಯಭಾರ ಯಶಸ್ಸು ಕಂಡಿತೆಂದರೆ, ‘ಇದರಲ್ಲಿ ನನ್ನ ಯೋಗದಾನವೂ ಇತ್ತು’ ಎಂದು ಹೇಳಿಕೊಳ್ಳಲು ಹಪಹಪಿಸುವುದಿದೆ.

ಮತ್ತೊಮ್ಮೆ ಸತ್ಯದ ಅನಾವರಣ

Profile Ashok Nayak Jul 4, 2025 6:39 AM

ಯಶಸ್ಸಿಗೆ ಅಪ್ಪಂದಿರು ಹಲವರು, ಆದರೆ ಸೋಲು ಮಾತ್ರ ಅನಾಥ’ ಎಂಬುದೊಂದು ಮಾತಿದೆ. ನಿಯೋಜಿತ ಕಾರ್ಯ ಭಾರದ ನೆರವೇರಿಕೆಯ ಹಾದಿಯಲ್ಲಿ ಮುಳ್ಳುಗಳೇ ತುಂಬಿವೆ, ಹೆಜ್ಜೆ ಹೆಜ್ಜೆಗೂ ಸಂಕಷ್ಟ-ಸವಾಲುಗಳು ಎದುರಾಗುತ್ತವೆ ಎಂಬುದು ಪೂರ್ವಭಾವಿಯಾಗಿ ಅರಿವಾಗುತ್ತಿದ್ದಂತೆ ಆ ಕಡೆ ತಲೆಯಿಟ್ಟೂ ಮಲಗದವರು, ಒಂದೊಮ್ಮೆ ಆ ಕಾರ್ಯಭಾರ ಯಶಸ್ಸು ಕಂಡಿತೆಂದರೆ, ‘ಇದರಲ್ಲಿ ನನ್ನ ಯೋಗದಾನವೂ ಇತ್ತು’ ಎಂದು ಹೇಳಿಕೊಳ್ಳಲು ಹಪಹಪಿಸುವುದಿದೆ.

ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನ-ಪ್ರೇರಿತ ಉಗ್ರರು ನಡೆಸಿದ ಅಮಾಯಕರ ಮಾರಣ ಹೋಮಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಭಾರತವು ಪಾಕಿಸ್ತಾನದ ಮೇಲೆ ‘ಆಪರೇಷನ್ ಸಿಂದೂರ’ ಹೆಸರಲ್ಲಿ ದಾಳಿಗೆ ಶುರುವಿಟ್ಟುಕೊಂಡಿತು. ಇದರ ತೀವ್ರತೆಯನ್ನು ತಡೆದುಕೊಳ್ಳಲಾಗದೆ ಪಾಕಿಸ್ತಾನ ದಮ್ಮಯ್ಯಗುಡ್ಡೆ ಹಾಕಿದಾಗ ‘ಕದನ ವಿರಾಮ’ಕ್ಕೆ ಭಾರತ ಒಪ್ಪಿತು. ಆದರೆ ಇದು ತಮ್ಮಿಂದಾಗಿಯೇ ನೆರವೇರಿದ್ದು ಎಂಬ ರೀತಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಲ್ಲೆಂದರಲ್ಲಿ ಹೇಳಿಕೊಂಡು ತಿರುಗಾಡ ತೊಡಗಿ ದ್ದಾಗ, ವಾಸ್ತವ ಸಂಗತಿಯೇನು ಎಂಬುದನ್ನು ಭಾರತದ ಪ್ರಧಾನಿ ಮೋದಿಯವರು ಸೂಕ್ಷ್ಮವಾಗಿ ಮಂಡಿಸಿದ್ದುಂಟು.

ಇದನ್ನೂ ಓದಿ: Vishwavani Editorial: ಭಾರತದ ಹೆಮ್ಮೆಯ ಕ್ಷಣ

ಇಷ್ಟಾಗಿಯೂ ಟ್ರಂಪ್ ಬಡಬಡಿಕೆ ನಿಂತಿರಲಿಲ್ಲ. ಈಗ ವಿದೇಶಾಂಗ ವ್ಯವಹಾರಗಳ ಸಚಿವ ಜೈ ಶಂಕರ್ ನೀಡಿರುವ ಹೇಳಿಕೆಯನ್ನು ಗಮನಿಸಿಯಾದರೂ ಟ್ರಂಪ್ ತಮ್ಮ ಬಾಯಿಗೆ ಬೀಗ ಹಾಕಿ ಕೊಳ್ಳುವರೇ ಎಂಬುದನ್ನು ಕಾದುನೋಡಬೇಕಿದೆ.

“ಭಾರತವು ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯನ್ನು ನಿಲ್ಲಿಸಲು ಹಾಗೂ ಭಾರತ-ಪಾಕ್ ನಡುವೆ ಕದನವಿರಾಮದ ಸ್ಥಿತಿ ಏರ್ಪಡಲು ಪಾಕಿಸ್ತಾನ ಸೇನೆಯ ಉನ್ನತಾಧಿಕಾರಿಯು ಬೇಡಿ ಕೊಂಡಿದ್ದೇ ಕಾರಣ. ಈ ಕದನ ವಿರಾಮ ಏರ್ಪಡುವುದರಲ್ಲಿ ಅಮೆರಿಕ ಸೇರಿದಂತೆ ಬೇರಾವ ದೇಶದ ಪಾತ್ರವೂ ಇಲ್ಲ" ಎಂದು ಜೈಶಂಕರ್ ಅವರು ನ್ಯೂಯಾರ್ಕ್‌ನಲ್ಲಿ ಇತ್ತೀಚೆಗೆ ಪಾಲ್ಗೊಂಡ ಮಾಧ್ಯಮ ಸಂದರ್ಶನದಲ್ಲಿ ನೇರವಾಗಿ ಹೇಳಿರುವುದು ಈ ಅಭಿಪ್ರಾಯಕ್ಕೆ ಕಾರಣ. ಡೊನಾಲ್ಡ್ ಟ್ರಂಪ್ ಅವರು ಇನ್ನಾದರೂ ವಿವೇಚನೆಯಿಂದ ನಡೆದುಕೊಂಡರೆ ಒಳಿತು.