ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: ಇಂದಿನ ಪಂದ್ಯದಲ್ಲಿ ಕೊಹ್ಲಿಗಿದೆ ನೂತನ ದಾಖಲೆ ಬರೆಯುವ ಅವಕಾಶ

ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನ ಅಲಂಕರಿಸಿ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯವ ಸಲುವಾಗಿ ಆರ್‌ಸಿಬಿಗೆ ಲಕ್ನೋ ಎದುರಿನ ಪಂದ್ಯ ಅತ್ಯಂತ ಮುಖ್ಯವಾಗಿದೆ. ಈ ಪಂದ್ಯವನ್ನು ಗೆದ್ದರೆ ಆರ್‌ಸಿಬಿ ತಂಡ 2016ರ ಬಳಿಕ ಇದೇ ಮೊದಲು ಕ್ವಾಲಿಫೈಯರ್‌ 1 ಆಡಿದಂತಾಗುತ್ತದೆ.

ಇಂದಿನ ಪಂದ್ಯದಲ್ಲಿ ಕೊಹ್ಲಿಗಿದೆ ನೂತನ ದಾಖಲೆ ಬರೆಯುವ ಅವಕಾಶ

Profile Abhilash BC May 27, 2025 8:34 AM

ಲಕ್ನೋ: ದಾಖಲೆಗಳ ಸರದಾರ ವಿರಾಟ್‌ ಕೊಹ್ಲಿ(Virat Kohli) ತಮ್ಮ ಹೆಸರಿಗೆ ಮತ್ತೊಂದು ದಾಖಲೆಯನ್ನು ಬರೆಯಲು ಸಜ್ಜಾಗಿದ್ದಾರೆ. ಇಂದು(ಮೇ 27) ನಡೆಯುವ ಐಪಿಎಲ್‌ನ(IPL 2025) ಲಕ್ನೋ ಸೂಪರ್‌ಜೈಂಟ್ಸ್‌(RCB vs LSG) ವಿರುದ್ಧದ ಪಂದ್ಯದಲ್ಲಿ 24 ರನ್‌ ಬಾರಿಸಿದರೆ ಟಿ20 ಇತಿಹಾಸದಲ್ಲಿ ಒಂದೇ ತಂಡದ ಪರ 9,000 ರನ್ ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಕಳೆದ ಪಂದ್ಯದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಒಂದೇ ತಂಡದ(ಆರ್‌ಸಿಬಿ) ಪರ 800 ಬೌಂಡರಿ ಬಾರಿಸಿದ ವಿಶ್ವದ ಮೊದಲ ಬ್ಯಾಟರ್‌ ಎಂಬ ದಾಖಲೆ ಬರೆದಿದ್ದರು.

ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನ ಅಲಂಕರಿಸಿ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯವ ಸಲುವಾಗಿ ಆರ್‌ಸಿಬಿಗೆ ಲಕ್ನೋ ಎದುರಿನ ಪಂದ್ಯ ಅತ್ಯಂತ ಮುಖ್ಯವಾಗಿದೆ. ಈ ಪಂದ್ಯವನ್ನು ಗೆದ್ದರೆ ಆರ್‌ಸಿಬಿ ತಂಡ 2016ರ ಬಳಿಕ ಇದೇ ಮೊದಲು ಕ್ವಾಲಿಫೈಯರ್‌ 1 ಆಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ, ಎಲ್‌ಎಸ್‌ಜಿ ತಂಡವನ್ನು ಅವರದೇ ನೆಲದಲ್ಲಿ ಮಣಿಸಲು ಹೊಸ ಯೋಜನೆಯೊಂದಿಗೆ ಕಣಕ್ಕೆ ಇಳಿಯಲಿದೆ.

ಪ್ಲೇ ಆಫ್‌ ರೇಸ್‌ನಿಂದ ಹೊರ ನಡೆದಿರುವ ಲಕ್ನೋ ತಂಡಕ್ಕೆ ಆರ್‌ಸಿಬಿ ಎದುರು ಯಾವುದೇ ಒತ್ತಡ ಇಲ್ಲ. ಆದರೆ, ತನ್ನ ಕೊನೆಯ ಲೀಗ್‌ ಪಂದ್ಯವನ್ನು ಗೆದ್ದು 2025ರ ಐಪಿಎಲ್‌ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಲು ರಿಷಭ್‌ ಪಂತ್‌ ಪಡೆ ಎದುರು ನೋಡುತ್ತಿದೆ. ಲೀಗ್‌ ಹಂತದಲ್ಲಿ ಎರಡು ಬಾರಿ ಗುಜರಾತ್‌ ಟೈಟನ್ಸ್‌ ತಂಡವನ್ನು ಮಣಿಸಿದ ಮೊದಲ ತಂಡ ಎಂಬ ದಾಖಲೆಯನ್ನು ಲಕ್ನೋ ತಂಡ ಬರೆದಿದೆ. ಇದೀಗ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿ ತಂಡದ ಆಸೆಯನ್ನು ಲಖನೌ ಭಗ್ನಗೊಳಿಸಬಹುದು. ಹಾಗಾಗಿ ಆರ್‌ಸಿಬಿ ತಂಡ ಬಹಳ ಎಚ್ಚರಿಕೆಯಿಂದ ಆಡಬೇಕಾಗಿದೆ.

ಇದನ್ನೂ ಓದಿ IPL 2025: ಫೈನಲ್‌ ತಲುಪಬಲ್ಲ ಎರಡು ತಂಡಗಳನ್ನು ಆರಿಸಿದ ಆಕಾಶ್‌ ಚೋಪ್ರಾ!

ಸಂಭಾವ್ಯ ತಂಡಗಳು

ಲಕ್ನೋ ಸೂಪರ್‌ ಜೈಂಟ್ಸ್‌: ಮಿಚೆಲ್‌ ಮಾರ್ಷ್‌, ಏಡೆನ್‌ ಮಾರ್ಕ್ರಮ್‌, ನಿಕೋಲಸ್‌ ಪೂರನ್‌, ರಿಷಭ್‌ ಪಂತ್‌ (ನಾಯಕ, ವಿ. ಕೀ), ಆಯುಷ್‌ ಬದೋನಿ, ಅಬ್ದುಲ್‌ ಸಮದ್‌, ಶಹಬಾಝ್‌ ಅಹ್ಮದ್‌, ವಿಲ್‌ ರೌರ್ಕಿ, ಆಕಾಶ್‌ ಸಿಂಗ್‌, ದಿಗ್ವೇಶ್‌ ಸಿಂಗ್‌, ಆವೇಶ್‌ ಖಾನ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ), ಮನೋಜ್ ಭಾಂಡಗೆ, ರೊಮಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಝಲ್‌ವುಡ್, ಯಶ್ ದಯಾಳ್.