Digvesh Rathi: ಸತತ 5 ವಿಕೆಟ್ ಪಡೆದು ಮಿಂಚಿದ ಸ್ಪಿನ್ನರ್ ದಿಗ್ವೇಶ್ ರಾಥಿ
25 ವರ್ಷದ ದಿಗ್ವೇಶ್ ರಾಥಿ, ಇತ್ತೀಚೆಗೆ ಮುಕ್ತಾಯ ಕಂಡಿದ್ದ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ನಿರ್ಣಾಯಕ ಪಾತ್ರವಹಿಸಿದ್ದರು. ನಿರಾಶೆ ಅನುಭವಿಸಿದ್ದ ಲಕ್ನೋ ತಂಡಕ್ಕೆ ಅವರು ಏಕೈಕ ಬೆಳ್ಳಿರೇಖೆಯಾಗಿ ಕಂಡಿದ್ದರು. ಅವರು 12 ಪಂದ್ಯಗಳಿಂದ 8.18 ಇಕಾನಮಿ ದರದಲ್ಲಿ 14 ವಿಕೆೆಟ್ ಪಡೆದಿದ್ದರು.


ನವದೆಹಲಿ: 18ನೇ ಆವೃತ್ತಿಯ ಐಪಿಎಲ್(IPL 2025) ಟೂರ್ನಿಯಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನದ ಮಧ್ಯೆಯೂ ‘ಟಿಕ್ ದಿ ನೋಟ್‌ಬುಕ್’ ಸಂಭ್ರಮವನ್ನು(notebook celebration) ಪ್ರಚೋದನಕಾರಿ ರೀತಿ ಆಚರಿಸಿ ಹಲವು ಬಾರಿ ದಂಡ ಮತ್ತು ಒಂದು ಪಂದ್ಯ ಅಮಾನತು ಶಿಕ್ಷೆ ಎದುರಿಸಿದ್ದ ಲೆಗ್ ಸ್ಪಿನ್ನರ್ ದಿಗ್ವೇಶ್ ರಾಥಿ(Digvesh Rathi) ಸ್ಥಳೀಯ ಟಿ20 ಪಂದ್ಯವೊಂದರಲ್ಲ ಸತತ ಐದು 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಸತತ ಐದು ವಿಕೆಟ್‌ಗಳಲ್ಲಿ ಮೂರು ಬ್ಯಾಟ್ಸ್‌ಮನ್‌ಗಳನ್ನು ಕ್ಲೀನ್ ಬೌಲ್ಡ್ ಮಾಡಿರೆ, 2 ಎಲ್‌ಬಿಡಬ್ಲ್ಯೂ ಮೂಲಕ ವಿಕೆಟ್ ಪಡೆದರು.
25 ವರ್ಷದ ದಿಗ್ವೇಶ್ ರಾಥಿ, ಇತ್ತೀಚೆಗೆ ಮುಕ್ತಾಯ ಕಂಡಿದ್ದ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ನಿರ್ಣಾಯಕ ಪಾತ್ರವಹಿಸಿದ್ದರು. ನಿರಾಶೆ ಅನುಭವಿಸಿದ್ದ ಲಕ್ನೋ ತಂಡಕ್ಕೆ ಅವರು ಏಕೈಕ ಬೆಳ್ಳಿರೇಖೆಯಾಗಿ ಕಂಡಿದ್ದರು. ಅವರು 12 ಪಂದ್ಯಗಳಿಂದ 8.18 ಇಕಾನಮಿ ದರದಲ್ಲಿ 14 ವಿಕೆೆಟ್ ಪಡೆದಿದ್ದರು.ಈ ಮೂಲಕ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಸುನಿಲ್ ನರೈನ್ ಶೈಲಿಯಲ್ಲಿ ಬೌಲಿಂಗ್ ನಡೆಸುವ ಅವರು ಭವಿಷ್ಯದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಅವರು ತಮ್ಮ ಅತಿರೇಕದ ಸಂಭ್ರಮಾಚರಣೆಯನ್ನು ನಿಲ್ಲಿಸಿ ಕೇವಲ ಆಟದ ಕಡೆ ಗಮನಹರಿಸಬೇಕಿದೆ.
Stumbled upon this clip of Digvesh Rathi taking 5 in 5 in a local T20 game. Just a glimpse of the talent that made him a breakout star for @LucknowIPL in IPL 2025. pic.twitter.com/i8739cjxpk
— Dr. Sanjiv Goenka (@DrSanjivGoenka) June 16, 2025
ದಿಗ್ವೇಶ್ ರಾಥಿಯ ಬೌಲಿಂಗ್ ಪ್ರದರ್ಶನಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಮೆಚ್ಚುಗೆ ಸೂಚಿಸಿ ಅವರ ಬೌಲಿಂಗ್ ವಿಡಿಯೊವನ್ನು ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಾಜಿ ಕ್ರಿಕೆಟಿಗ ಸೈಮನ್ ಡೂಲ್ ಸೇರಿದಂತೆ ಕೆಲವರು ದಿಗ್ವೇಶ್ ಅವರ ಸಂಭ್ರಮ ಅಸಭ್ಯವಾಗಿರಲಿಲ್ಲ, ಒಳ್ಳೆಯ ಅಭಿರುಚಿಯಿಂದ ಕೂಡಿತ್ತು ಎಂದು ಸಮರ್ಥಿಸಿಕೊಂಡಿದ್ದರು. ಅವರಿಗೆ ದಂಡ ಹಾಕುವ ಮತ್ತು ಅಮಾನತು ಮಾಡುವ ಅಗತ್ಯವಿರಲಿಲ್ಲ ಎಂದು ಹೇಳಿದ್ದರು. ಬಿಸಿಸಿಐ ಎಷ್ಟೇ ದಂಡ ವಿಧಿಸಿದರೂ ಕೂಡ ದಿಗ್ವೇಶ್ ಮಾತ್ರ ಇದಾವುದರ ಪರಿವೆಯೂ ಇಲ್ಲ. ಅವರು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದರು.