ಆಸ್ಟ್ರೇಲಿಯಾ ಎ vs ಭಾರತ ಎ ಮಹಿಳಾ ಕ್ರಿಕೆಟ್ ಸರಣಿ ವೇಳಾಪಟ್ಟಿ ಪ್ರಕಟ
ಮುಂಬರುವ ಐಸಿಸಿ ಮಹಿಳಾ ವಿಶ್ವಕಪ್‌ಗೆ ತಯಾರಿ ನಡೆಸಲು ನಾಯಕಿ ಅಲಿಸಾ ಹೀಲಿ ಮತ್ತು ಉಪನಾಯಕಿ ತಹ್ಲಿಯಾ ಮೆಕ್‌ಗ್ರಾತ್ ಈ ಸರಣಿಯಲ್ಲಿ ಆಡಲಿದ್ದಾರೆ. ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ಸೆಪ್ಟೆಂಬರ್ 30ರಿಂದ ಆರಂಭಗೊಳ್ಳಲಿದೆ. ಉದ್ಘಾಟನ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿದೆ.


ಸಿಡ್ನಿ: ಆಗಸ್ಟ್‌ನಲ್ಲಿ ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಎ ಮತ್ತು ಭಾರತ ಎ(Aus A vs Ind A Women’s Series) ನಡುವಿನ ಮುಂಬರುವ ಮಹಿಳಾ ಸರಣಿಯ ವೇಳಾಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಮಂಗಳವಾರ ಪ್ರಕಟಿಸಿದೆ. ಬಹು-ಸ್ವರೂಪದ ಸರಣಿಯು ಆಗಸ್ಟ್ 7, 9 ಮತ್ತು 10 ರಂದು ಮೂರು ಪಂದ್ಯಗಳ ಟಿ20 ಸರಣಿಯೊಂದಿಗೆ ಪ್ರಾರಂಭವಾಗಲಿದೆ. T20ಗಳ ನಂತರ ಆಗಸ್ಟ್ 13, 15 ಮತ್ತು 17 ರಂದು ಮೂರು ಪಂದ್ಯಗಳ ಏಕದಿನ ಸರಣಿ ಆ ಬಳಿಕ ನಾಲ್ಕು ದಿನಗಳ ಟೆಸ್ಟ್ ಪಂದ್ಯ ನಡೆಯಲಿದೆ.
ಮುಂಬರುವ ಐಸಿಸಿ ಮಹಿಳಾ ವಿಶ್ವಕಪ್‌ಗೆ ತಯಾರಿ ನಡೆಸಲು ನಾಯಕಿ ಅಲಿಸಾ ಹೀಲಿ ಮತ್ತು ಉಪನಾಯಕಿ ತಹ್ಲಿಯಾ ಮೆಕ್‌ಗ್ರಾತ್ ಈ ಸರಣಿಯಲ್ಲಿ ಆಡಲಿದ್ದಾರೆ. ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ಸೆಪ್ಟೆಂಬರ್ 30ರಿಂದ ಆರಂಭಗೊಳ್ಳಲಿದೆ. ಉದ್ಘಾಟನ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿದೆ.
ಟಿ20 ಸರಣಿ
ಆಗಸ್ಟ್ 7: ಮೊದಲ ಟಿ20, ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ
ಆಗಸ್ಟ್ 9: ಎರಡನೇ ಟಿ20, ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ
ಆಗಸ್ಟ್ 10: ಮೂರನೇ ಟಿ20, ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ
ಇದನ್ನೂ ಓದಿ IND vs ENG: ರಾಹುಲ್ ದ್ರಾವಿಡ್ ವಿಶ್ವ ದಾಖಲೆ ಸರಿಗಟ್ಟಿದ ಜೋ ರೂಟ್
ಏಕದಿನ ಸರಣಿ
ಆಗಸ್ಟ್ 13: ಮೊದಲ ಏಕದಿನ, ಬ್ರಿಸ್ಬೇನ್
ಆಗಸ್ಟ್ 15: ಎರಡನೇ ಏಕದಿನ, ಬ್ರಿಸ್ಬೇನ್
ಆಗಸ್ಟ್ 17: ಮೂರನೇ ಏಕದಿನ, ಬ್ರಿಸ್ಬೇನ್
ನಾಲ್ಕು ದಿನಗಳ ಪಂದ್ಯ
ಆಗಸ್ಟ್ 21-24: ನಾಲ್ಕು ದಿನಗಳ ಪಂದ್ಯ, ಬ್ರಿಸ್ಬೇನ್