ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಅಗ್ರ ಸ್ಥಾನ ಅಲಂಕರಿಸಿದರೂ ಬೆಂಬಲ ಇಲ್ಲʼ: ಪಂಜಾಬ್ ಫ್ಯಾನ್ಸ್‌ ವಿರುದ್ದ ಅರ್ಷದೀಪ್‌ ಬೇಸರ!

Arshdeep Singh on Punjabi Fans: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇಆಫ್ಸ್‌ ಪಂದ್ಯಗಳಿಗೂ ಮುನ್ನ ಪಂಜಾಬ್‌ ಕಿಂಗ್ಸ್‌ ವೇಗದ ಬೌಲರ್‌ ಅರ್ಷದೀಪ್‌ ಸಿಂಗ್‌ ತಮ್ಮ ಅಭಿಮಾನಿಗಳ ಬಗ್ಗೆ ಅಚ್ಚರಿ ಹೇಳಿಯೊಂದನ್ನು ನೀಡಿದ್ದಾರೆ.

ಅಗ್ರ ಸ್ಥಾನ ಅಲಂಕರಿಸಿದರೂ ನಮಗೆ ಬೆಂಬಲ ಇಲ್ಲ: ಅರ್ಷದೀಪ್‌!

ಪಂಜಾಬಿ ಫ್ಯಾನ್ಸ್‌ ಬಗ್ಗೆ ಅರ್ಷದೀಪ್‌ ಸಿಂಗ್‌ ಅಸಮಾಧಾನ.

Profile Ramesh Kote May 29, 2025 4:42 PM

ಚಂಡೀಗಢ: ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪ್ಲೇಆಫ್ಸ್‌ ಪಂದ್ಯಗಳಿಗೂ ಮುನ್ನ ಪಂಜಾಬ್‌ ಕಿಂಗ್ಸ್‌ (Punjab Kings) ತಂಡದ ವೇಗದ ಬೌಲರ್‌ ಅರ್ಷದೀಪ್‌ ಸಿಂಗ್‌ (Arshdeep Singh) ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಪಂಜಾಬ್‌ನ ಕೆಲ ಅಭಿಮಾನಿಗಳು ನಮಗೆ ಬೆಂಬಲ ನೀಡುತ್ತಿಲ್ಲ ಹಾಗೂ ಅವರು ಬೇರೆ-ಬೇರೆ ತಂಡಗಳಿಗೆ ಬೆಂಬಲ ನೀಡುತ್ತಿದ್ದಾರೆಂದು ಯುವ ವೇಗಿ ಬೇಸರ ವ್ಯಕ್ತಪಡಿಸಿದ್ದಾರೆ. ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಈ ಸೀಸನ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದೆ. ಲೀಗ್‌ ಹಂತದಲ್ಲಿ 9 ಪಂದ್ಯಗಳ ಗೆಲುವಿನ ಮೂಲಕ 19 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ ಟಾಪರ್‌ ಆಗಿ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದೆ. ಆ ಮೂಲಕ ಚೊಚ್ಚಲ ಕಪ್‌ ಗೆಲ್ಲಲು ಎದುರು ನೋಡುತ್ತಿದೆ.

2014ರ ಬಳಿಕ ಇದೇ ಮೊದಲ ಬಾರಿ ಪಂಜಾಬ್‌ ಕಿಂಗ್ಸ್‌ ತಂಡ ಐಪಿಎಲ್‌ ಟೂರ್ನಿಯ ಮೊದಲ ಕ್ವಾಲಿಫೈಯರ್‌ಗೆ ಪ್ರವೇಶ ಮಾಡಿದೆ. ಶ್ರೇಯಸ್‌ ಅಯ್ಯರ್‌ ನಾಯಕನಾದ ಬಳಿಕ ಪಂಜಾಬ್‌ ಕಿಂಗ್ಸ್‌ ತಂಡದ ಐಪಿಎಲ್‌ ಪಯಣವನ್ನು ಬದಲಿಸಿದ್ದಾರೆ. 2025ರ ಐಪಿಎಲ್‌ ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಸ್ನ್ಯಾಪ್‌ಚಾಟ್‌ನಲ್ಲಿ ಮಾತನಾಡಿದ ಅರ್ಷದೀಪ್‌ ಸಿಂಗ್‌ ತಮ್ಮ ಸ್ಥಳೀಯ ಅಭಿಮಾನಿಗಳ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕೆಲ ಅಭಿಮಾನಿಗಳಿಗೆ ನಮಗೆ ಬೆಂಬಲ ನೀಡದೆ ವಿವಿಧ ತಂಡಗಳಿಗೆ ಸಪೋರ್ಟ್‌ ನೀಡುತ್ತಿದ್ದಾರೆಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

PBKS vs RCB Qualifier 1: ಇಂದಿನ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ 2 ಬದಲಾವಣೆ

ಪಂಜಾಬಿ ಫ್ಯಾನ್ಸ್‌ ಬಗ್ಗೆ ಅರ್ಷದೀಪ್‌ ಬೇಸರ

"ನಮಗೆ ಬೆಂಬಲ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. ಪಂಜಾಬ್‌ನ ಕೆಲ ಅಭಿಮಾನಿಗಳು ನಮಗೆ ಬೆಂಬಲ ನೀಡದೆ ಐಪಿಎಲ್‌ ಟೂರ್ನಿಯ ವಿವಿಧ ತಂಡ ನೀವು ಪಂಜಾಬಿ ಅಲ್ಲದೇ ಇದ್ದರೂ ನಮ್ಮ ತಂಡಕ್ಕೆ ಬೆಂಬಲ ನೀಡುತ್ತಿದ್ದಾರೆ. ಆದರೆ, ನೀವು ಪಂಜಾಬಿ ಅಲ್ಲದೇ ಇದ್ದರೂ ನಮಗೆ ಬೆಂಬಲವನ್ನು ನೀಡುತ್ತಿದ್ದೀರಿ. ಹಾಗಾಗಿ ಪಂಜಾಬ್‌ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿ ನಿಮ್ಮ ರಾಜ್ಯಕ್ಕೆ ಬೆಂಬಲ ನೀಡಬೇಕೆಂದು ಆಗ್ರಹಿಸುತ್ತೇನೆ," ಎಂದು ಅರ್ಷದೀಪ್‌ ಸಿಂಗ್‌ ಸ್ನ್ಯಾಪ್‌ ಚಾಟ್‌ನಲ್ಲಿನ ಅಭಿಮಾನಿಯ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅದ್ಭುತ ಲಯದಲ್ಲಿರುವ ಅರ್ಷದೀಪ್‌ ಸಿಂಗ್

ಪ್ರಸ್ತುತ ನಡೆಯುತ್ತಿರುವ 2025ರ ಐಪಿಎಲ್‌ ಟೂರ್ನಿಯಲ್ಲಿ ಅರ್ಷದೀಪ್‌ ಸಿಂಗ್‌ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರುತ್ತಿದ್ದಾರೆ. ಅವರು ಆಡಿದ 13 ಪಂದ್ಯಗಳಿಂದ 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಹಾಗೂ 8.56ರ ಎಕಾನಮಿಯಲ್ಲಿ ರನ್‌ ನೀಡಿದ್ದಾರೆ. ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಹಲವು ಕಠಿಣ ಸಂದರ್ಭಗಳಲ್ಲಿ ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸುವ ಮೂಲಕ ನೆರವು ನೀಡಿದ್ದಾರೆ. ಇದೀಗ ಅದೇ ಲಯವನ್ನು ಪ್ಲೇಆಫ್ಸ್‌ ಪಂದ್ಯಗಳಲ್ಲಿ ಮುಂದುವರಿಸಲು ಎದುರು ನೋಡುತ್ತಿದ್ದಾರೆ.

PBKS vs RCB Qualifier 1: ಆರ್‌ಸಿಬಿ vs ಪಂಜಾಬ್ ಕಿಂಗ್ಸ್‌ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

ಮೊದಲನೇ ಕ್ವಾಲಿಫೈಯರ್‌

ಮೇ 29 ರಂದು ಗುರುವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ದ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಸೆಣಲಿದೆ. ಲೀಗ್‌ ಹಂತದಲ್ಲಿ ಈ ಎರಡೂ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಒಂದರಲ್ಲಿ ಪಂಜಾಬ್‌ ಗೆದ್ದಿದ್ದರೆ, ಮತ್ತೊಂದು ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಪಡೆದಿತ್ತು. ಇದೀಗ ಮೂರನೇ ಬಾರಿ ಈ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶ ಮಾಡಲಿದೆ. ಆದರೆ, ಸೋತ ತಂಡ, ಎಲಿಮಿನೇಟರ್‌ ಪಂದ್ಯವನ್ನು ಗೆಲ್ಲುವ ತಂಡದ ವಿರುದ್ಧ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಆಡಲಿದೆ.