ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

21ನೇ ಶತಮಾನದ ಅತ್ಯುತ್ತಮ ಇಂಡೋ-ಆಂಗ್ಲ ತಂಡದ ಪ್ಲೇಯಿಂಗ್‌ XI ಕಟ್ಟಿದ ಅಥರ್ಟನ್‌, ಹುಸೇನ್‌!

ಇಂಗ್ಲೆಂಡ್‌ ತಂಡದ ದಿಗ್ಗಜರಾದ ಮೈಕಲ್‌ ಅಥರ್ಟನ್‌ ಹಾಗೂ ನಾಸರ್‌ ಹುಸೇನ್‌ ಅವರು 21ನೇ ಶತಮಾನದ ಭಾರತ ಹಾಗೂ ಇಂಗ್ಲೆಂಡ್‌ ಟೆಸ್ಟ್‌ ತಂಡದ ಅತ್ಯುತ್ತಮ ಪ್ಲೇಯಿಂಗ್‌ XIಅನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಭಾರತದಿಂದ ಒಟ್ಟು ಆರು ಮಂದಿ ಸ್ಥಾನವನ್ನು ಪಡೆದಿದ್ದಾರೆ. ಆದರೆ, ಆಧುನಿಕ ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ಜೋ ರೂಟ್‌ ಅವರನ್ನು ಕೈ ಬಿಡಲಾಗಿದೆ.

21ನೇ ಶತಮಾನದ ಅತ್ಯುತ್ತಮ ಇಂಡೋ-ಆಂಗ್ಲ ತಂಡ ಕಟ್ಟಿದ ದಿಗ್ಗಜರು!

ಭಾರತ-ಇಂಗ್ಲೆಂಡ್‌ ಟೆಸ್ಟ್‌ ಪ್ಲೇಯಿಂಗ್‌ XI ಆರಿಸಿದ ನಾಸರ್‌ ಹುಸೇನ್‌-ಮೈಕಲ್‌ ಅಥರ್ಟನ್‌.

Profile Ramesh Kote Jun 18, 2025 9:22 PM

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ (IND vs ENG) ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿ ಜೂನ್‌ 20 ರಂದು ಆರಂಭವಾಗಲಿದೆ. ಈ ಸರಣಿಯ ಮೂಲಕ ಉಭಯ ತಂಡಗಳು ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (WTC 2025-27) ಅಭಿಯಾನವನ್ನು ಆರಂಭಿಸಲಿವೆ.ಇದರ ನಡುವೆ ಇಂಗ್ಲೆಂಡ್‌ ದಿಗ್ಗಜರಾದ ಮೈಕಲ್‌ ಅಥರ್ಟನ್‌ ಹಾಗೂ ನಾಸರ್‌ ಹುಸೇನ್‌ ಅವರು 21ನೇ ಶತಮಾನದ ಭಾರತ ಹಾಗೂ ಇಂಗ್ಲೆಂಡ್‌ನ ಅತ್ಯುತ್ತಮ ಟೆಸ್ಟ್‌ ಪ್ಲೇಯಿಂಗ್‌ xi ಅನ್ನು ಪ್ರಕಟಿಸಿದ್ದಾರೆ. ಆದರೆ, ಫ್ಯಾಬ್‌ 4 ರಲ್ಲಿರುವ ಆಧುನಿಕ ದಿಗ್ಗಜರಾದ ವಿರಾಟ್‌ ಕೊಹ್ಲಿ (Virat Kohli) ಹಾಗೂ ಜೋ ರೂಟ್‌ ಅವರನ್ನು ಈ ತಂಡದಿಂದ ಕೈ ಬಿಡಲಾಗಿದೆ.

ಸ್ಕೈ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ನಾಸರ್‌ ಹುಸೇನ್‌ ಹಾಗೂ ಮೈಕಲ್‌ ಅಥರ್ಟನ್‌ ಅವರು, ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ವೀರೇಂದ್ರ ಸೆಹ್ವಾಗ್‌ ಮತ್ತು ಅಲ್‌ಸ್ಟೈರ್‌ ಕುಕ್‌ ಅವರನ್ನು ಆರಿಸಿದ್ದಾರೆ. "ನಾನು ರೋಹಿತ್‌ ಶರ್ಮಾ ಅವರನ್ನು ಇಷ್ಟ ಪಡುತ್ತೇನೆ ಆದರೆ, ವೀರೇಂದ್ರ ಸೆಹ್ವಾಗ್‌ ಅವರನ್ನು ಈ ಅವಧಿಯಲ್ಲಿ ಉತ್ತಮವಾಗಿದ್ದರು. ಸೆಹ್ವಾಗ್‌ ಮತ್ತು ಕುಕ್‌ ಅವರು ಸುಂದರ ಆರಂಭಿಕ ಜೋಡಿಯಾಗಿದೆ. ಎಡಗೈ ಹಾಗೂ ಬಲಗೈ ಸಂಯೋಜನೆ. ದಶೆರ್‌ ಮತ್ತು ಬ್ಲಾಕರ್‌," ಎಂದು ನಾಸರ್‌ ಹುಸೇನ್‌ ತಿಳಿಸಿದ್ದಾರೆ.

IND vs ENG: ಮೊದಲನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡದ ಪ್ಲೇಯಿಂಗ್‌ XI ಪ್ರಕಟ!

ನಾಲ್ಕನೇ ಕ್ರಮಾಂಕಕ್ಕೆ ಈ ಇಬ್ಬರೂ ಸಚಿನ್‌ ತೆಂಡೂಲ್ಕರ್‌ ಅವರನ್ನು ಆಯ್ಕೆ ಮಾಡಿದ್ದಾರೆ. ನಂತರ, ಮಧ್ಯಮ ಕ್ರಮಾಂಕಕ್ಕೆ ವಿರಾಟ್‌ ಕೊಹ್ಲಿ, ಜೋ ರೂಟ್‌, ಕೆವಿನ್‌ ಪೀಟರ್ಸನ್‌ ಹಾಗೂ ರಾಹುಲ್‌ ದ್ರಾವಿಡ್‌ ಅವರಲ್ಲಿ ಇಬ್ಬರನ್ನು ಆಯ್ಕೆ ಮಾಡಲು ಇವರು ನಿರ್ಧರಿಸಿದ್ದಾರೆ. ಮೂರನೇ ಕ್ರಮಾಂಕಕ್ಕೆ ರಾಹುಲ್‌ ದ್ರಾವಿಡ್‌ ಹಾಗೂ ಐದನೇ ಕ್ರಮಾಂಕಕ್ಕೆ ಕೆವಿನ್‌ ಪೀಟರ್ಸನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ಗೆ ಆರನೇ ಸ್ಥಾನವನ್ನು ನೀಡಲಾಗಿದೆ ಹಾಗೂ ಇವರಿಗೆ ನಾಯಕತ್ವವನ್ನು ನೀಡಲಾಗಿದೆ. ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಆಗಿ ರಿಷಭ್‌ ಪಂತ್‌ ಅವರನ್ನು ಆರಿಸಲಾಗಿದೆ.

"ದ್ರಾವಿಡ್, ರೂಟ್, ಕೊಹ್ಲಿ. ದ್ರಾವಿಡ್ ಮೂರನೇ ಕ್ರಮಾಂಕದಲ್ಲಿ ಹೆಚ್ಚು ಬ್ಯಾಟ್‌ ಮಾಡಿದ್ದಾರೆ. ದ್ರಾವಿಡ್ ಮೂರು, ತೆಂಡೂಲ್ಕರ್ ನಾಲ್ಕು, ಪೀಟರ್ಸನ್ ಐದು. ಆದ್ದರಿಂದ ನೀವು ರೂಟ್ ಮತ್ತು ಕೊಹ್ಲಿಯನ್ನು ಬಿಡುತ್ತಿದ್ದೀರಿ. ನಾವು ಗಂಗೂಲಿ ಮತ್ತು ಲಕ್ಷ್ಮಣ್ ಅವರನ್ನು ಕಳೆದುಕೊಂಡಿದ್ದೇವೆ. ಭಾರತಕ್ಕೆ ಆಲ್‌ರೌಂಡರ್ ಇಲ್ಲ. ಆರನೇ ಕ್ರಮಾಂಕದಲ್ಲಿ ಬೆನ್‌ ಸ್ಟೋಕ್ಸ್. ನಾವು ಕೊಹ್ಲಿಯನ್ನು ಆಯ್ಕೆ ಮಾಡಿಲ್ಲ, ನಾವು ಸ್ಟೋಕ್ಸ್ ಅನ್ನು ನಾಯಕನಾಗಿ ಆಯ್ಕೆ ಮಾಡಬೇಕು," ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಹೇಳಿದ್ದಾರೆ.

IND vs ENG: ಮೊದಲನೇ ಟೆಸ್ಟ್‌ಗೆ ತಮ್ಮ ನೆಚ್ಚಿನ ಪ್ಲೇಯಿಂಗ್‌ XI ಆರಿಸಿದ ವಸೀಮ್‌ ಜಾಫರ್‌!

ಬೌಲರ್‌ಗಳ ವಿಷಯಕ್ಕೆ ಬಂದರೆ, ಜಸ್‌ಪ್ರೀತ್‌ ಬುಮ್ರಾ ಮತ್ತು ಜೇಮ್ಸ್ ಆಂಡರ್ಸನ್ ಅವರನ್ನು ಮೊದಲ ಆಯ್ಕೆಯಾಗಿ ಆರಿಸಲಾಗಿದೆ. ಇನ್ನು ಜಹೀರ್‌ ಖಾನ್‌ ಅವರನ್ನು ಕೈ ಬಿಡಲಾಗಿದ್ದು, ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ಬದಲು ಮತ್ತೊರ್ವ ಸ್ಪಿನ್‌ ದಂತಕತೆ ಆರ್‌ ಅಶ್ವಿನ್‌ಗೆ ಸ್ಥಾನವನ್ನು ನೀಡಲಾಗಿದೆ. ಸ್ಟುವರ್ಟ್‌ ಬ್ರಾಡ್‌ಗೂ ಕೂಡ ಮೂರನೇ ವೇಗಿಯಾಗಿ ಆಯ್ಕೆ ಮಾಡಲಾಗಿದೆ.

ನಾಸರ್‌ ಹುಸೇನ್‌, ಮೈಕಲ್‌ ಅಥರ್ಟನ್‌ ಅವರ 21ನೇ ಶತಮಾನದ ಇಂಡೋ-ಆಂಗ್ಲರ ಅತ್ಯುತ್ತಮ ಟೆಸ್ಟ್‌ ಪ್ಲೇಯಿಂಗ್‌ xi‌

ವೀರೇಂದ್ರ ಸೆಹ್ವಾಗ್, ಆಲ್‌ಸ್ಟೈರ್‌ ಕುಕ್‌, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌, ಕೆವಿನ್‌ ಪೀಟರ್ಸನ್‌, ಬೆನ್‌ ಸ್ಪೋಕ್ಸ್‌, ರಿಷಭ್‌ ಪಂತ್‌ (ವಿ.ಕೀ), ರವಿಚಂದ್ರನ್‌ ಅಶ್ವಿನ್‌, ಸ್ಟುವರ್ಟ್‌ ಬ್ರಾಡ್‌, ಜಸ್‌ಪ್ರೀತ್‌ ಬುಮ್ರಾ, ಜೇಮ್ಸ್‌ ಆಂಡರ್ಸನ್‌