ಪ್ರಧಾನಿ ಮೋದಿಯಿಂದ ಘಾನಾ ಅಧ್ಯಕ್ಷರಿಗೆ ಬಿದ್ರಿವೇರ್ ಹೂದಾನಿ ಉಡುಗೊರೆ
PM Narendra Modi: ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಘಾನಾ ಅಧ್ಯಕ್ಷರಿಗೆ ಬೀದರ್‌ನಲ್ಲಿ ಸಿದ್ಧವಾದ ʼಬಿದ್ರಿವೇರ್ ಹೂದಾನಿʼಯನ್ನೇ ಉಡುಗೊರೆಯಾಗಿ ನೀಡಿದ್ದು ವಿಶೇಷ. ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಬೀದರ್‌ನಿಂದ ತರಿಸಿಕೊಂಡಿದ್ದ ಈ 'ಬಿದ್ರಿವೇರ್ ಹೂದಾನಿ' ಕಪ್ಪು ವರ್ಣರಂಜಿತವಾಗಿದ್ದು, ಬೆಳ್ಳಿಯ ಕುಸುರಿ ಕೂಡ ಹೊಂದಿದ್ದು, ಭಾರತದ ಪ್ರಸಿದ್ಧ ಲೋಹದ ಕರಕುಶಲತೆಯನ್ನು ಪ್ರದರ್ಶಿಸುತ್ತದೆ.