ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijayapur (Indi) News: ಮಗುವಿನ ಆರೋಗ್ಯ ಪಾಲನೆಯಲ್ಲಿ ತಾಯಿ ಪಾತ್ರ ಮುಖ್ಯ: ಡಾ.ವಿಫುಲ ಕೋಳೆಕರ್

ವೈದ್ಯರನ್ನು ದೇವರ ನಂತರದ ಸ್ಥಾನದಲ್ಲಿ ಪರಿಗಣಿಸಲಾಗುತ್ತದೆ ಎಂದರು. ಭಾರತದಲ್ಲಿ ಪ್ರತಿ ವರ್ಷ ಜು.1ರಂದು ಅವರ ಕೊಡುಗೆ ಮತ್ತು ಉದಾತ್ತ ಕೆಲಸವನ್ನು ಗೌರವಿಸಲು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಮುಖ್ಯ ಗುರು ಯಾಸೀಕ ತುರ್ಕಿಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಮಗುವಿನ ಆರೋಗ್ಯ ಪಾಲನೆಯಲ್ಲಿ ತಾಯಿ ಪಾತ್ರ ಮುಖ್ಯ

ವೈದ್ಯರ ದಿನಾಚರಣೆಯಲ್ಲಿ ಡಾ.ವಿಫುಲ್ ಕೋಳೆಕರ್ ಮಾತನಾಡಿದರು.

Profile Ashok Nayak Jul 3, 2025 4:24 PM

ಇಂಡಿ: ಮಗುವಿನ ಪಾಲನೆ ,ಪೋಷಣೆಯಲ್ಲಿ ತಾಯಿಯ ಪಾತ್ರ ಪ್ರಮುಖವಾಗಿದ್ದು, ಮಗು ಆರೋಗ್ಯದ ಹಿತದೃಷ್ಠಿಯಿಂದ ಸ್ವಚ್ಚತೆ ಕೂಡಾ ಅರೋಗ್ಯದ ಮೇಲೆ ಪರಿಣಾಮ ಬಿರುತ್ತದೆ ಎಂದು ಚಿಕ್ಕಮಕ್ಕಳ ತಜ್ಞೆ ಡಾ.ವಿಫುಲ್ ಕೋಳೆಕರ್ ಹೇಳಿದರು.

ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ (ಯು.ಬಿ.ಎಮ್.ಪಿ.ಎಸ್) ನಲ್ಲಿ ವೈದ್ಯ ದಿನಾ ಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಕ್ಕಳಿಗೆ ಆರೋಗ್ಯ, ಸ್ವಚ್ಛತೆ ಹಾಗೂ ದೈನಂದಿನ ಜೀವನಶೈಲಿಗೆ ಸಂಬಂಧಿಸಿದಂತೆ ಅನೇಕ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಸ್ತ್ರೀ ರೋಗ ತಜ್ಞರಾದ ಡಾ.ಶೀರಿನ ಜಮಾದಾರ ಅವರು ವಿಶೇಷವಾಗಿ ಹೆಣ್ಣುಮಕ್ಕಳ ಆರೋಗ್ಯ ಸಮಸ್ಯೆಗಳ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತ, ಹೈಸ್ಜಿನ್, ಪೋಷಣಾ ತತ್ವಗಳು ಮತ್ತು ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು.

ಇದನ್ನೂ ಓದಿ; Indi (vijayapura) News: ಸಂಶೋಧನೆಯು ಅಲ್ಪ ವಿರಾಮ, ಮಧ್ಯವಿರಾಮದಿಂದ ಪೂರ್ಣವಿರಾಮದೆಡೆಗೆ ಹೋಗುತ್ತದೆ: ಯಶವಂತರಾಯಗೌಡ

ಸಮಾಜ ಸೇವಕ ಹಾಗೂ ಬಿ.ಎಲ್.ಈ ಸಂಸ್ಥೆಯ ಉಪಾಧ್ಯಕ್ಷರಾದ ಹಸನ ಮುಜಾವರ ಮಾತನಾಡಿ ವೈದ್ಯರನ್ನು ದೇವರ ನಂತರದ ಸ್ಥಾನದಲ್ಲಿ ಪರಿಗಣಿಸಲಾಗುತ್ತದೆ ಎಂದರು. ಭಾರತದಲ್ಲಿ ಪ್ರತಿ ವರ್ಷ ಜುಲೈ ೧ ರಂದು ಅವರ ಕೊಡುಗೆ ಮತ್ತು ಉದಾತ್ತ ಕೆಲಸವನ್ನು ಗೌರವಿಸಲು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಮುಖ್ಯ ಗುರು ಯಾಸೀಕ ತುರ್ಕಿಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದರು.

ಈ ಸಂದರ್ಭದಲ್ಲಿ ಡಾ. ಅಂಜುಮ್, ಹಾಗೂ ಶಾಲೆಯ ಶಿಕ್ಷಕಯರಾದ ಶಕೀರಾ ನಾಗೂರ್, ಬಿದರೇಕಾರ್ ಮೇಡಂ, ಗುಲಾಮ ಭಗವಾನ್, ಖತೀಬ್ ಸರ್, ಅಥಿತಿ ಶಿಕ್ಚಕರಾದ ಜಾಸ್ಮಿನ್ ಅರಬ, ರುಬಿನಾ ಮಕಾಂದಾರ್, ಮಿಸ್ಬಾ ನಾಗಠಾಣ್ ಹಾಗೂ ಮಿಸ್ಬಾ ಇಂಡಿ ಆಫತಾಬ ತುರ್ಕಿ ಉಪಸ್ಥಿತ ರಿದ್ದರು.

ಕಾರ್ಯಕ್ರಮದಲ್ಲಿ ಮಕ್ಕಳು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ವೈದ್ಯರೊಂದಿಗೆ ಸಂವಾದ ನಡೆಸಿದರು.