ಮಲ್ಟಿಪ್ಲೆಕ್ಸ್‌ಗಳ ಪರ ಸುಪ್ರೀಂ ತೀರ್ಪು, ಟಿಕೆಟ್ ದರದ ಬಗ್ಗೆ ಅಸಮಾಧಾನ
Supreme Court: ಸಿನಿಮಾ ಟಿಕೆಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬುಕ್‌ಮೈಶೋನಂತಹ ಆನ್‌ಲೈನ್ ಆ್ಯಪ್ಗಳ ಮೂಲಕ ಮಾರಾಟ ಮಾಡಲಾಗುತ್ತಿವೆ. ಈ ರೀತಿ ಬುಕ್ ಮಾಡುವಾಗ ಅವರ ಖಾತೆಗಳನ್ನು ಮತ್ತು ಖರೀದಿದಾರರ ಗುರುತನ್ನು ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ. ಗ್ರಾಹಕರ ವಿವರ ಅವರ ಬಳಿ ಇರುತ್ತವೆ. ನಾವು ಯಾವುದೇ ವಿವರಗಳು ಅಥವಾ ಐಡಿಗಳ ವಿವರ ಇಟ್ಟುಕೊಳ್ಳುವುದಿಲ್ಲ. ಟಿಕೆಟ್ ಖರೀದಿಸಲು ಯಾರೂ ಈಗ ಕೌಂಟರ್‌ಗೆ ಹೋಗುವುದಿಲ್ಲ ಎಂದು ಮಲ್ಟಿಪ್ಲೆಕ್ಸ್ ಪರ ಮುಕುಲ್ ರೋಹಟ್ಗಿ ಅವರು ನ್ಯಾಯಮೂರ್ತಿಗಳ ಎದುರು ವಾದ ಮಂಡಿಸಿದರು. ಈ ವಾದವನ್ನು ಸುಪ್ರೀಂ ಕೋರ್ಟ್ ನ್ಯಾಪೀಠ ಒಪ್ಪಿಕೊಂಡಿದ್ದು, ಮಲ್ಟಿಪ್ಲೆಕ್ಸ್‌ಗಳ ಪರ ತೀರ್ಪು ನೀಡಿದೆ.