ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪಾರಾಸೈಲಿಂಗ್ ಮಾಡ್ತಿದ್ದ ಮಾಡೆಲ್‌ ದುರಂತ ಸಾವು; ಕೊನೆಯ ಕ್ಷಣದ ಭಯಾನಕ ವಿಡಿಯೊ ಇಲ್ಲಿದೆ

ಸರ್ಬಿಯಾದ 19 ವರ್ಷದ ಮಾಡೆಲ್ ತಿಜಾನಾ ರಡೋಂಜಿಕ್ ಯುರೋಪ್‍ನ ಮೊಂಟೆನೆಗ್ರೋದಲ್ಲಿ ಪಾರಾಸೈಲಿಂಗ್ ಮಾಡುವಾಗ ದುರಂತವಾಗಿ ಸಾವಿಗೀಡಾಗಿದ್ದಾಳೆ. ಈ ಭಯಾನಕ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.ಇದನ್ನು ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.

ಪಾರಾಸೈಲಿಂಗ್ ಮಾಡುವಾಗ ದುರಂತವಾಗಿ ಸಾವಿಗೀಡಾದ ಮಾಡೆಲ್!

Profile pavithra Jun 3, 2025 5:57 PM

ಸರ್ಬಿಯಾದ 19 ವರ್ಷದ ಮಾಡೆಲ್ ತಿಜಾನಾ ರಡೋಂಜಿಕ್, ಯುರೋಪ್‍ನ ಮೊಂಟೆನೆಗ್ರೋದಲ್ಲಿ ರಜಾದಿನಗಳನ್ನು ಕಳೆಯಲು ಹೋಗಿದ್ದು, ಅಲ್ಲಿ ಸಂಜೆಯ ವೇಳೆ ಪಾರಾಸೈಲಿಂಗ್ ಮಾಡುವಾಗ ದುರಂತವಾಗಿ ಸಾವನ್ನಪ್ಪಿದ್ದಾಳೆ. ಈ ದುರಂತ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಇದನ್ನು ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ. ತಿಜಾನಾ ತನ್ನ ಆಂಟಿಯ ಜೊತೆ ರಜೆಯನ್ನು ಕಳೆಯಲು ಹೋಗಿದ್ದು, ಅಲ್ಲಿ ಆಕೆ ಬೀಚ್‍ನಲ್ಲಿ ಪಾರಾಸೈಲಿಂಗ್ ಮಾಡುವಾಗ ಸಾವನ್ನಪ್ಪಿದ್ದಾಳೆ.

ವೈರಲ್ ಆದ ವಿಡಿಯೊದಲ್ಲಿ ಪಾರಾಸೈಲಿಂಗ್ ಮಾಡುತ್ತಿರುವುದು ಸೆರೆಯಾಗಿದೆ. ಅದರಲ್ಲಿ ಆಕೆ ಲೈಫ್ ಜಾಕೆಟ್‍ ಅನ್ನು ತೆಗೆಯಲು ಪ್ರಯತ್ನಿಸುವ ವೇಳೆ ಸಡನ್ ಆಗಿ ತಲೆಕೆಳಗಾಗಿ ಕೆಳಗೆ ಬಿದ್ದಿದ್ದಾಳೆ. ಬೀಳುವ ಮುನ್ನ ಆಕೆ ತನ್ನನ್ನು ಕೆಳಗಿಳಿಸಿ ಎಂದು ಕೂಗುವುದು ವಿಡಿಯೊದಲ್ಲಿ ರೆಕಾರ್ಡ್ ಆಗಿದೆ. ಅವಳ ಶವವು ಸಮುದ್ರದಲ್ಲಿ ಪತ್ತೆಯಾಗಿದ್ದು, ನಂತರ ರಕ್ಷಣಾತಂಡಗಳು ಅದನ್ನು ಸಮುದ್ರದಿಂದ ಹೊರತೆಗೆದಿದ್ದಾರೆ ಎನ್ನಲಾಗಿದೆ.



ಮಾಹಿತಿ ಪ್ರಕಾರ, ಈ ಘಟನೆ ಇತ್ತೀಚೆಗೆ ಬುಡ್ವಾ ನಗರದ ಕಡಲತೀರದಲ್ಲಿ ಸಂಭವಿಸಿದೆಯಂತೆ. ವಾಟರ್ ಸ್ಪೋಟ್ಸ್ ಏಜೆನ್ಸಿ ಆಯೋಜಿಸಿದ ಉಚಿತ ಪ್ಯಾರಾಸೈಲಿಂಗ್ ಸೆಶನ್‌ಗೆ ತಿಜಾನಾ ರಡೋಂಜಿಕ್ ಸೇರಿದ್ದು, ಆ ವೇಳೆ ಈ ದುರಂತ ಸಂಭವಿಸಿದೆ. ಕೆಲವು ವರದಿಗಳ ಪ್ರಕಾರ, ಅವಳು ಪಾರಾಸೈಲಿಂಗ್‍ ಮಾಡುವಾಗ ಆತಂಕಗೊಂಡು ಅದರಿಂದ ಜಿಗಿಯಲು ಪ್ರಯತ್ನಿಸಿದ್ದಾಳೆ ಎಂದು ಹೇಳಿದ್ದಾರೆ. ಸ್ಥಳೀಯ ಅಧಿಕಾರಿಗಳು ಅಪಘಾತದ ನಿಖರ ಕಾರಣವನ್ನು ತಿಳಿಯಲು ಮತ್ತು ಸುರಕ್ಷತಾ ಪ್ರೋಟೋಕೋಲ್‌ಗಳಲ್ಲಿ ಯಾವುದೇ ಸಮಸ್ಯೆ ಇದೆಯೇ ಅಥವಾ ಇಲ್ಲದೆಯೆಂದು ಪರಿಶೀಲಿಸಲು ತನಿಖೆ ಶುರುಮಾಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಮೆಟ್ರೋ ಸ್ಟೇಷನ್‌ ಬಳಿ ತನಗೇ ತಾನೇ ಬೆಂಕಿ ಹಚ್ಚಿಕೊಂಡ ಭೂಪ! ಶಾಕಿಂಗ್ ವಿಡಿಯೊ ಫುಲ್‌ ವೈರಲ್‌

ಪಾರಾಸೈಲಿಂಗ್‍ನಿಂದ ದುರಂತವಾಗಿ ಜನರು ಸಾವಿಗೀಡಾದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಕರೋನ್ ಬೀಚ್ ಬಳಿ 31 ವರ್ಷದ ಪ್ಯಾರಸೇಲಿಂಗ್ ಆಪರೇಟರ್ 50 ಮೀಟರ್ ಎತ್ತರದಿಂದ ಬಿದ್ದಿದ್ದನು. ಜೋರಾಗಿ ಗಾಳಿ ಬೀಸಿದ ಕಾರಣ ಆಪರೇಟರ್‌ ಗಟ್ಟಿಯಾಗಿ ಹಿಡಿದುಕೊಳ್ಳಲು ಸಾಧ್ಯವಾಗದ ಕಾರಣ ಪಾರಾಸೈಲಿಂಗ್‍ನಿಂದ ಕೆಳಗೆ ಬಿದ್ದಿದ್ದಾನಂತೆ. ಆತನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿತ್ತಂತೆ.