ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮದ್ವೆನೂ ಬೇಡ, ಕೆಲ್ಸನೂ ಬೇಡ ಎಂದು ಗುಹೆಯಲ್ಲಿ ಬದುಕುತ್ತಿರೋ ಈ ವಿಚಿತ್ರ ವ್ಯಕ್ತಿ ಬಗ್ಗೆ ನಿಮ್ಗೆ ಗೊತ್ತಾ?

ಚೀನಾದ ಸಿಚುವಾನ್ ಪ್ರಾಂತ್ಯದ 35 ವರ್ಷದ ಮಾಜಿ ರೈಡ್-ಹೇಲಿಂಗ್ ಚಾಲಕ ಮಿನ್ ಹೆಂಗ್ಕೈ, ತಿಂಗಳಿಗೆ ಸುಮಾರು 10,000 ಯುವಾನ್ ಸಂಬಳವಿರುವ ಕೆಲಸ ಮತ್ತು ಮದುವೆ ಜೀವನ ಅರ್ಥಹೀನ ಎಂದು ತ್ಯಜಿಸಿ ಗುಹೆಯೊಂದರಲ್ಲಿ ವಾಸವಾಗಿದ್ದಾನೆ. ನಿರಂತರ ಕೆಲಸ ಮತ್ತು ಸಾಲದ ಹೊರೆ ಆತ ಈ ನಿರ್ಧಾರಕ್ಕೆ ಬರಲು ಕಾರಣವಂತೆ. ಮಿನ್ ಈಗ ಕೃಷಿ ಮಾಡುವುದು, ವಾಕಿಂಗ್ ಮತ್ತು ಓದುವುದರಲ್ಲಿ ಸಮಯ ಕಳೆಯುತ್ತಾನಂತೆ.ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

ಗುಹೆಯಲ್ಲಿ ಬದುಕುತ್ತಿರೋ ಈ ವಿಚಿತ್ರ ವ್ಯಕ್ತಿ ಬಗ್ಗೆ ನಿಮ್ಗೆ ಗೊತ್ತಾ?

Profile pavithra Jun 12, 2025 5:38 PM

ಚೀನಾ: ಜೀವನದಲ್ಲಿ ಕಷ್ಟಗಳು ಎದುರಾದಾಗ ಜೀವನದ ಮೇಲೆ ಜಿಗುಪ್ಸೆ ಬರುವುದು ಸಾಮಾನ್ಯ. ಹಾಗಾಗಿ ಇಂತಹ ಸಂದರ್ಭದಲ್ಲಿ ಕೆಲವರು ಜೀವವನ್ನೇ ಕಳೆದುಕೊಂಡರೆ, ಕೆಲವರು ಮನೆ-ಮಠವನ್ನೆಲ್ಲ ಬಿಟ್ಟು ದೇಶಾಂತರ ಹೋಗಿ ಬಿಡುತ್ತಾರೆ. ಅದೇರೀತಿ ಚೀನಾದ ಸಿಚುವಾನ್ ಪ್ರಾಂತ್ಯದ 35 ವರ್ಷದ ವ್ಯಕ್ತಿಯೊಬ್ಬ ಕೆಲಸ ಮತ್ತು ಮದುವೆ ಜೀವನ ಅರ್ಥಹೀನ ಎಂದು ಎಲ್ಲವನ್ನೂ ತ್ಯಜಿಸಿ ಗುಹೆಯೊಂದರಲ್ಲಿ ವಾಸವಾಗಿದ್ದಾನಂತೆ.ಮಿನ್ ಈಗ ಕೃಷಿ ಮಾಡುವುದು, ವಾಕಿಂಗ್ ಮತ್ತು ಓದುವುದರಲ್ಲಿ ಸಮಯ ಕಳೆಯುತ್ತಾನೆ.ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral News) ಆಗಿದೆ.

ನಿರಂತರ ಕೆಲಸ, ಸಾಲದ ಹೊರೆಯಿಂದ ಜೀವನದಲ್ಲಿ ಬೇಸತ್ತಿದ್ದ ಮಿನ್ ಸಾಲ ತೀರಿಸಲು ದಿನಕ್ಕೆ 10 ಗಂಟೆಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದಾನಂತೆ.ಇದರಿಂದ ಅವನಿಗೆ ಬದುಕು ಅರ್ಥಹೀನವೆನಿಸಿದೆಯಂತೆ.ಕೊನೆಗೆ ಆತ ತನ್ನೆಲ್ಲಾ ಆಸ್ತಿಪಾಸ್ತಿಗಳನ್ನು ಮಾರಿ ಸಾಲ ತೀರಿಸಿದ್ದಾನಂತೆ. ಕೊನೆಗೆ ಸಣ್ಣತುಂಡು ಭೂಮಿಯೊಂದನ್ನು ಖರೀದಿಸಿ ಅದರಲ್ಲಿ ಹುಹೆ ರೀತಿಯಂತೆ ಚಿಕ್ಕಮನೆಯೊಂದನ್ನು ಮಾಡಿಕೊಂಡು ಕೃಷಿ ಮಾಡುವುದು, ವಾಕಿಂಗ್ ಮತ್ತು ಓದುವುದರಲ್ಲಿ ಸಮಯ ಕಳೆಯುತ್ತಾನಂತೆ. ಅದು ಅಲ್ಲದೇ, ಮನೆಯಲ್ಲಿಯೇ ತರಕಾರಿಗಳನ್ನು ಬೆಳೆದು ಅದರಿಂದಲೇ ಆಹಾರ ತಯಾರಿಸಿ ಖುಷಿಯಿಂದ ಜೀವನ ನಡೆಸುತ್ತಿದ್ದಾನಂತೆ.

ಮದುವೆ ಎಂದರೆ "ಸಮಯ ಮತ್ತು ಹಣದ ವ್ಯರ್ಥ" ಎಂದು ಹೇಳುತ್ತಾನೆ ಮಿನ್.ಇನ್ನು ಅವನು ತನ್ನ ಪುಟ್ಟದಾದ ಮನೆಯಲ್ಲಿ. ನೆಮ್ಮದಿಯಾಗಿ ಬದುಕುತ್ತಿದ್ದಾನಂತೆ. ಆಧುನಿಕ ಜೀವನವನ್ನು ತಿರಸ್ಕರಿಸಿದರೂ, ಮಿನ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿದ್ದಾನೆ. 40,000 ಕ್ಕೂ ಹೆಚ್ಚು ಫಾಲೋವರ್ಸ್‍ಗಳನ್ನು ಹೊಂದಿರುವ ಆತ ತನ್ನ ಬದುಕಿನ ಕುರಿತು ಹಂಚಿಕೊಳ್ಳುತ್ತಿರುತ್ತಾನೆ.

ಈ ಸುದ್ದಿಯನ್ನೂ ಓದಿ:‌Viral Video: ಬರೋಬ್ಬರಿ 10 ವರ್ಷಗಳ ನಂತರ ಹೆತ್ತವರ ಮಡಿಲು ಸೇರಿದ ಮಗ; ಹೃದಯಸ್ಪರ್ಶಿ ವಿಡಿಯೊ ವೈರಲ್!

ಯುನೈಟೆಡ್ ಸ್ಟೇಟ್ಸ್‌ನ ಡೇನಿಯಲ್ ಸುಯೆಲೊ ಕೂಡ 2000ರಲ್ಲಿ ಸಾಲ, ಮನೆ ಮತ್ತು ಉದ್ಯೋಗವನ್ನು ಬಿಟ್ಟು ಉತಾಹ್‌ನ ಮೋವಾಬ್ ಬಳಿಯ ಗುಹೆಯಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ವಾಸಿಸುತ್ತಿದ್ದನಂತೆ