ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸ್ಯಾನ್ ಫ್ರಾನ್ಸಿಸ್ಕೋದ‌ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡ ಗಾಂಧೀಜಿ; ಏನಿದು ವೈರಲ್ ವಿಡಿಯೊ?

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಭಾರತೀಯ ಮೂಲಕ ಚೆಫ್ ರಂಜನ್ ಡೇ, ದುಂಡಗಿನ ಕನ್ನಡಕ, ಬೋಳು ತಲೆ ಮತ್ತು ತೆಳ್ಳಗಿನ ಮುಖವನ್ನು ಹೊಂದಿದ್ದು, ಅವರ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಈತನನ್ನು ನೋಡಿದವರು ಮಹಾತ್ಮ ಗಾಂಧಿಯವರಂತೆ ಕಾಣುತ್ತಾರೆ ಎಂದು ಹೋಲಿಕೆ ಮಾಡಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡ ಗಾಂಧೀಜಿ; ಏನಿದು ವೈರಲ್ ವಿಡಿಯೊ?

Profile pavithra Jul 3, 2025 11:19 AM

ವಾಷಿಂಗ್ಟನ್: ಒಬ್ಬರ ಮುಖಚರ್ಯೆಯ ಹಾಗೇ ಇನ್ನೊಬ್ಬರು ಹೋಲುತ್ತಿರುತ್ತಾರೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ ಟ್ರಂಪ್‌ ಮುಖಭಾವ ಹೋಲುವ ವ್ಯಕ್ತಿಯೊಬ್ಬ ಕುಲ್ಫಿ ಮಾರುತ್ತಿರುವ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌(Viral Video) ಆಗಿತ್ತು. ಇದೀಗ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆಲೆಸಿರುವ ಭಾರತೀಯ ಮೂಲದ ಶೆಫ್ ನೋಡುವುದಕ್ಕೆ ಥೇಟ್‌ ರಾಷ್ಟ್ರಪಿತ ಗಾಂಧೀಜಿಯ(Gandhiji) ಹಾಗೇ ಇದ್ದಾನೆ ಎಂಬ ಕಾರಣಕ್ಕೆ ಆತನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಶೆಫ್ ರಂಜನ್ ಡೇ ನೋಡಿ ನೆಟ್ಟಿಗರು ಆತ ನೋಡುವುದಕ್ಕೆ ಗಾಂಧೀಜಿಯ ಹಾಗೇ ಇದ್ದಾನೆ ಎಂದು ಹೋಲಿಕೆ ಮಾಡಿದ್ದಾರೆ.

ರಂಜನ್‍ ಡೇ 36 ವರ್ಷಗಳಿಗೂ ಹೆಚ್ಚು ಕಾಲ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಸಿದ್ಧ ರೆಸ್ಟೋರೆಂಟ್ ಅನ್ನು ನಡೆಸುತ್ತಿದ್ದಾನೆ. ಈತ ಮಾಡುವ ರುಚಿಕರವಾದ ಭಕ್ಷ್ಯ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಈತನ ಮುಖ ಕೂಡ ಗಾಂಧೀಜಿಯ ಹಾಗೇ ಇದೆ ಎಂದು ನೆಟ್ಟಿಗರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ಈ ಪೋಸ್ಟ್‌ಗೆ ನೆಟ್ಟಿಗರು ತಮಾಷೆಯ ಕಾಮೆಂಟ್‌ ಮಾಡಿದ್ದಾರೆ.ಒಬ್ಬರು, "ಬಾಪು ಆಪ್ ಕುಚ್ 'ಗೋಡ್ಸೆ' ಚೀಜ್ ಬನಾವೋ." ಎಂದು ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ "ಬಾಪು ಜಿ ಸೈಡ್‌ ಬ್ಯುಸಿನೆಸ್ ಮಾಡುತ್ತಿದ್ದಾರೆ" ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಹಾಸ್ಟೆಲ್‌ ಊಟದಲ್ಲಿ ಗೃಹ ಸಚಿವೆ ಪ್ಲೇಟ್‌ನಲ್ಲಿ ಸಿಕ್ತು ಜಿರಳೆ; ವಾರ್ಡನ್‌ ಅಮಾನತು

ನವದೆಹಲಿಯ ಶೆಫ್ ರಂಜನ್ ಡೇ ರೆಸ್ಟೋರೆಂಟ್ ಅನ್ನು 1988ರಲ್ಲಿ ಶುರುಮಾಡಿದ್ದರು. ಅದು ಶುರುವಾಗಿನಿಂದ ಈ ರೆಸ್ಟೋರೆಂಟ್‌ಗೆ ಸಾಕಷ್ಟು ರಾಜಕೀಯ ವ್ಯಕ್ತಿಗಳು ಭೇಟಿ ನೀಡಿದ್ದಾರಂತೆ.ಅವರೆಲ್ಲರೂ ಭಾರತೀಯ ಖಾದ್ಯಗಳ ರುಚಿ ನೋಡಿ ಮೆಚ್ಚುಗೆಯ ಮಾತನಾಡಿದ್ದರು ಎಂದು ಶೆಫ್‌ ಹೇಳಿದ್ದಾರೆ.

ನಂದಿಬೆಟ್ಟದಲ್ಲಿ ಕಾಣಿಸಿಕೊಂಡ ಗಾಂಧೀಜಿ

ನಂದಿ ಬೆಟ್ಟದಲ್ಲಿ ಗಾಂಧಿ ಪ್ರತಿಮೆಯ ಹಾಗೆ ವೇಷ ಧರಿಸಿದ ವ್ಯಕ್ತಿಯೊಬ್ಬರು ಕೊರೆಯುವ ಚಳಿಯಲ್ಲೂ ಅಲುಗಾಡದೆ ನಿಂತಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ವಿಗ್ರಹದಂತೆ ನಿಂತ ಆತನನ್ನು ನೋಡಿ ಶಾಕ್ ಆಗಿದ್ದಾರೆ. ವೈರಲ್ ವಿಡಿಯೊದಲ್ಲಿ ಕೊರೆಯುವ ಚಳಿಯಲ್ಲಿ ಆತ ಗಡಗಡ ನಡುಗುವುದು ಸೆರೆಯಾಗಿದೆ. ಅಲ್ಲಿದ್ದ ಪ್ರಯಾಣಿಕರು ಆ ವ್ಯಕ್ತಿಯ ಬಳಿಗೆ ಬಂದು ಅವನ ಪಾದಗಳ ಬಳಿ ಇರುವ ಬಕೆಟ್‌ನಲ್ಲಿ ಹಣವನ್ನು ಹಾಕಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ವಿಡಿಯೊ 1.3 ಮಿಲಿಯನ್ ವ್ಯೂವ್ಸ್‌ ಗಳಿಸಿದೆ. ಅದರಲ್ಲಿ ಕೆಲವರು ಆ ವ್ಯಕ್ತಿಯು ಕೊರೆಯುವ ಚಳಿಯಲ್ಲಿ ಅಚಲವಾಗಿ ನಿಂತ ಬಗ್ಗೆ ಹೊಗಳಿದ್ದಾರೆ.