Viral Video: ಒಳಗೆ ಸೇರಿದರೆ ಗುಂಡು... ನಡುರಸ್ತೆಯಲ್ಲಿ ನಾರಿಯ ಹೈಡ್ರಾಮಾ; ಈಕೆಯ ಕಿತಾಪತಿಯ ವಿಡಿಯೋ ಇಲ್ಲಿದೆ ನೋಡಿ
ಕುಡಿದ ನಶೆಯಲ್ಲಿದ್ದ ಮಹಿಳೆಯು ದೆಹಲಿ-ಡೆಹರಾಡೂನ್ ಹೆದ್ದಾರಿಯಲ್ಲಿ ಈ ಹಂಗಾಮಾ ಸೃಷ್ಟಿಸಿದ್ದಾಳೆ. ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ನಿಲ್ಲಿಸಿ ಬೀದಿ ರಂಪಾಟ ಮಾಡಿದ್ದಾಳೆ. ಸ್ಥಳದಲ್ಲಿದ್ದ ಜನರು ಮಹಿಳೆಯ ಗಲಾಟೆಯ ವಿಡಿಯೊವನ್ನು ಸೆರೆಹಿಡಿದಿದ್ದು, ಸಾರ್ವಜನಿಕ ಸ್ಥಳದಲ್ಲಿ ಪಾನಮತ್ತ ಮಹಿಳೆಯ ಹುಚ್ಚಾಟವನ್ನು(Viral Video) ಕಂಡು ಶಾಕ್ ಆಗಿದ್ದಾರೆ..


ರಾಂಚಿ: ಮಹಿಳೆಯೊಬ್ಬಳು ಕಂಠ ಪೂರ್ತಿ ಮದ್ಯಪಾನ ಸೇವಿಸಿ ರಸ್ತೆ ಮಧ್ಯೆಯೇ ರಂಪಾಟ ಮಾಡುತ್ತಿದ್ದ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ (Viral Video). ಉತ್ತರಾಖಂಡದ ಹರಿದ್ವಾಣದಲ್ಲಿ ಈ ಘಟನೆ ನಡೆದಿದೆ. ಕುಡಿದ ನಶೆಯಲ್ಲಿದ್ದ ಮಹಿಳೆಯು ದೆಹಲಿ-ಡೆಹರಾಡೂನ್ ಹೆದ್ದಾರಿಯಲ್ಲಿ ಈ ಹಂಗಾಮಾ ಸೃಷ್ಟಿಸಿದ್ದಾಳೆ. ರಸ್ತೆಯಲ್ಲಿ ಬರುತ್ತಿದ್ದ ವಾಹನ ಗಳನ್ನು ನಿಲ್ಲಿಸಿ ಅವಂತಾರ ಸೃಷ್ಟಿಸಿದ್ದಾಳೆ. ರಂಪಾಟ ಮಾಡಿದ ಮಹಿಳೆ ಯಾರು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಕುಡಿದ ಮತ್ತಿನಲ್ಲಿಯೇ ಮಹಿಳೆ ಈ ದಾಂಧಲೆ ಎಬ್ಬಿಸಿದ್ದಾಳೆ. ಸ್ಥಳದಲ್ಲಿದ್ದ ಜನರು ಮಹಿಳೆಯ ಗಲಾಟೆಯ ವಿಡಿಯೊವನ್ನು ಸೆರೆ ಹಿಡಿದಿದ್ದು ಸಾರ್ವಜನಿಕ ಸ್ಥಳದಲ್ಲಿ ಪಾನಮತ್ತ ಮಹಿಳೆಯ ಹುಚ್ಚಾಟವನ್ನು ಕಂಡು ಶಾಕ್ ಆಗಿದ್ದಾರೆ.
ದೆಹಲಿ ಡೆಹ್ರಾಡೂನ್ ಹೆದ್ದಾರಿ ಬಳಿ ಕುಡಿದ ಮತ್ತಿನಲ್ಲಿದ್ದ ಮಹಿಳೆಯು ರಸ್ತೆ ಮಧ್ಯೆಯೇ ಗದ್ದಲ ಸೃಷ್ಟಿಸಿದ್ದಾಳೆ. ಕೆಲವು ವರದಿಗಳ ಪ್ರಕಾರ ಆ ಮಹಿಳೆಯನ್ನು ಯಾರೋ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.. ಈ ವೇಳೆ, ಕುಡಿದ ನಶೆಯಲ್ಲಿ ತೇಲಾ ಡುತ್ತಿದ್ದ ಈ ಮಹಿಳೆ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಮಾಡಿದ್ದಳು. ವೈರಲ್ ವಿಡಿಯೊ ದಲ್ಲಿ ಕೆಂಪು ಬಣ್ಣದ ಡ್ರೆಸ್ ಧರಿಸಿದ ಮಹಿಳೆ VIP ಘಾಟ್ ಬಳಿ ರಸ್ತೆಯಲ್ಲಿ ಸಾಗುತ್ತಿರುವ ಅನೇಕ ವಾಹನಗಳನ್ನು ತಡೆದು ಹತ್ತಲು ಯತ್ನಿಸುತ್ತಿರುವ ದೃಶ್ಯವಿದೆ. ಕೆಲವು ವಾಹನಗಳ ಗಾಜುಗಳನ್ನು ಒಡೆಯಲು ಯತ್ನಿಸುತ್ತಿರುವುದು ಕಂಡುಬರುತ್ತದೆ.
ವೈರಲ್ ಆಗುತ್ತಿರುವ ವಿಡಿಯೊ ಇಲ್ಲಿದೆ
नशे मे धुत युवती का हरिद्वार में बीच सड़क पर तांडव हंगामा, क्या यही है महिला सशक्तिकरण?
— Pyara Uttarakhand प्यारा उत्तराखंड (@PyaraUKofficial) April 19, 2025
उत्तराखंड के हरिद्वार में देर रात नशे में धुत युवती ने देहरादून-दिल्ली नेशनल हाईवे पर रोड़ी बेलवाला के पास किया हाईवोल्टेज ड्रामा बीच सड़क पर वाहनों को रोक-रोक कर किया परेशान। महिला ने एक… pic.twitter.com/WaCLAYrKhQ
ಆಕೆಯ ವರ್ತನೆಯಿಂದಾಗಿ ಪ್ರಯಾಣಿಕರು ಆತಂಕಗೊಂಡು ವಾಹನ ನಿಲ್ಲಿಸಿದ್ದಾರೆ. ಮಧ್ಯ ರಸ್ತೆಯಲ್ಲಿ ಸವಾರರೊಬ್ಬರು ತೀವ್ರವಾಗಿ ಬ್ರೇಕ್ ಹಾಕಿದ ಪರಿಣಾಮ ಕಾರಿಗೆ ಹಿಂದಿನಿಂದ ಬಂದ ಮತ್ತೊಂದು ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈಕೆಯ ಈ ಅವಾಂತರದಿಂದ ಕೆಲಕಾಲ ಸಂಚಾರ ಕೂಡಾ ಅಸ್ತವ್ಯಸ್ತಗೊಂಡಿತ್ತು. ಅದೇ ರೀತಿ ಮಹಿಳೆ ವೇಗವಾಗಿ ಬರುತ್ತಿದ್ದ ಸ್ಕೂಟರ್ ಅಡ್ಡಗಟ್ಟಿ, ಹಿಂದಿನಿಂದ ಕುಳಿತು ಕೊಳ್ಳುವ ದೃಶ್ಯ ವಿಡಿಯೊದ ಲ್ಲಿದ್ದು ಸ್ಕೂಟರ್ ಓಡಿಸುತ್ತಿದ್ದ ವ್ಯಕ್ತಿ ಟ್ರಾಫಿಕ್ ಪೊಲೀಸ್ ಎಂದು ತಿಳಿದುಬಂದಿದೆ. ಹೀಗಾಗಿ ಸಂಚಾರ ಪೊಲೀಸ್ ಆಕೆಯನ್ನು ಪೊಲೀಸ್ ಠಾಣೆಗೆ ಕರೆ ದೊಯ್ದಿದ್ದಾರೆ.
ಇದನ್ನು ಓದಿ:Viral News: ಪ್ಲೀಸ್ ಪಾಸ್ ಮಾಡಿಸಿ , ನನ್ನ ಲವ್ ಉಳಿಸಿ ; ಮೌಲ್ಯಮಾಪಕರಿಗೆ ರಿಕ್ವೆಸ್ಟ್ ಮಾಡಿದ SSLC ವಿದ್ಯಾರ್ಥಿ!
ಈಕೆಯ ಈ ರಂಪಾಟದ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ. ಈ ದೃಶ್ಯವನ್ನು ಕಂಡ ಬಹುತೇಕರು ಆಘಾತ ವ್ಯಕ್ತಪಡಿಸಿದದ್ದು ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಇದೆಂತಹ ನಾಟಕʼ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ನೆಟ್ಟಿಗರು ಮಹಿಳಾ ಮೀಸಲಾತಿಯ ಪರಿಣಾಮ ಎಂದು ಟ್ವೀಟ್ ಮಾಡಿದ್ದಾರೆ. ಪೋಲಿಸರು ಈಗಾಗಲೇ ಮಹಿಳೆಯನ್ನು ಬಂಧಿಸಿದ್ದು, ಆಕೆ ಯಾರು ಎನ್ನುವುದನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.