Hina Khan: ಹಿನಾ ಖಾನ್ ಭರ್ಜರಿ ಕಾಶ್ಮೀರ ಟ್ರಿಪ್; ತವರಿನಲ್ಲಿ ಸನ್ ಸೆಟ್, ರೋಡ್ ಟ್ರಿಪ್ ಎಂಜಾಯ್ ಮಾಡಿದ ನಟಿ
Hina Khan's Kashmir Trip: ಕ್ಯಾನ್ಸರ್ ವಿರುದ್ಧ ಯಶಸ್ವಿಯಾಗಿ ಹೋರಾಟ ನಡೆಸಿ ಗೆದ್ದು ಇಂಡಸ್ಟ್ರಿಗೆ ಗ್ರ್ಯಾಂಡ್ ಕಮ್ ಬ್ಯಾಕ್ ಮಾಡಿರುವ ನಟಿ ಹಿನಾ ಖಾನ್ ಇದೀಗ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ತಮ್ಮ ತವರಾದ ಕಾಶ್ಮೀರದಲ್ಲಿ ಟ್ರಿಪ್ ಮಾಡುತ್ತಿರುವ ನಟಿ,ಅಲ್ಲಿನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳ ಝಲಕ್ ಇಲ್ಲಿವೆ ನೋಡಿ



ಮಹಾಮಾರಿ ಕ್ಯಾನ್ಸರ್ಗೆ ತುತ್ತಾಗಿ ಅದರ ವಿರುದ್ಧ ಯಶಸ್ವಿ ಹೋರಾಟ ಮಾಡುತ್ತಿರುವ ನಟಿ ಹಿನಾ ಖಾನ್ ಭರ್ಜರಿ ಟ್ರಿಪ್ನಲ್ಲಿದ್ದಾರೆ. ತಮ್ಮ ತವರುನಾಡು ಕಾಶ್ಮೀರದಲ್ಲಿ ಬೀಡು ಬಿಟ್ಟಿರುವ ಹಿನಾ ಖಾನ್ ಅಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಖ್ಯಾತ ಟಿವಿ ಶೋ ಯೇ ರಿಷ್ತಾ ಕ್ಯಾ ಕೆಹ್ಲತಾ ಹೈಯಿಂದ ಖ್ಯಾತಿಯ ಈ ನಟಿ ತಮ್ಮ ಕಾಶ್ಮೀರ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸುಂದರ ಸೂರ್ಯಾಸ್ತ, ಸಾಂಪ್ರದಾಯಿಕ ಮಾರುಕಟ್ಟೆಗಳು, ಕಾರ್ಯಕ್ರಮಗಳು ಮತ್ತು ರೋಡ್ ಟ್ರಿಪ್ಗಳ ಫೋಟೋಗಳಿವೆ.

ಹಿನಾ ಖಾನ್ ದಾಲ್ ಸರೋವರದಲ್ಲಿ ಮೀನು ಹಿಡಿಯುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ, ನಂತರ ರೋಮಾಂಚಕ ಕಾಶ್ಮೀರ ಮಾರುಕಟ್ಟೆಯ ಕೆಲವು ದೃಶ್ಯಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಆಲ್ಬಮ್ನಲ್ಲಿ ಹಿನಾ ದೋಣಿಯಲ್ಲಿ ಪ್ರಾಣಾಯಾಮ ಮಾಡುತ್ತಿರುವ ವೀಡಿಯೊ ಕೂಡ ಸೇರಿದೆ.

ಕಾಶ್ಮೀರ ಎಂದು ಬರೆದಿರುವ ಫಲಕದ ಪೋಸ್ ನೀಡುತ್ತಿರುವ ಮತ್ತು ಕಣಿವೆಯಲ್ಲಿ ಸೂರ್ಯಾಸ್ತವನ್ನು ಆನಂದಿಸುತ್ತಿರುವ ಫೋಟೋಗಳು ಸೂಪರ್ ಆಗಿವೆ. ಇದಕ್ಕೂ ಮೊದಲು, ಕಾಶ್ಮೀರದ ಪ್ರಶಾಂತಮಯ ಸುಂದರ ರಸ್ತೆಗಳ ವಿಹಂಗಮ ನೋಟದ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.

"ದಾಲ್ನಲ್ಲಿ ಒಂದು ಸಣ್ಣ ಮೀನುಗಾರಿಕಾ ವಿಹಾರದಿಂದ ಹಿಡಿದು ಪ್ರಾಣಾಯಾಮದವರೆಗೆ, ಝೀಲಂನಲ್ಲಿ ಆಹ್ಲಾದಕರ ವಾಕ್, ಕಾಫಿ, ರಸ್ತೆ ಪ್ರವಾಸಗಳು, ಸುಂದರವಾದ ಸೂರ್ಯಾಸ್ತಗಳು, ಸಾಂಪ್ರದಾಯಿಕ ಮಾರುಕಟ್ಟೆಗಳು, ಸಮೋವರ್ ಚಾಯ್ ತೆ ಕಾಶ್ಮೀರಿ ಥಾನಿ ಟ್ಚೋಟ್ (ಇದುವರೆಗಿನ ಅತ್ಯುತ್ತಮ ಉಪಹಾರ) ಮಸೀದಿ ಕಿ ಆಜಾನ್, ಹೀಗೆ ಎಲ್ಲವೂ ಕಾಶ್ಮೀರಿ.. ಚಿಕಿತ್ಸೆ" ಎಂದು ಹಿನಾ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.