ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಸ್ವಚ್ಛತೆ ಮತ್ತ ಸಾರ್ವಜನಿಕ ವರ್ತನೆ

ಸುಮಾರು 25-28 ವರ್ಷದ ಯುವತಿಯೊಬ್ಬಳು ವಿಪರೀತ ಕುಡಿದು ಟ್ರೇನನ್ನು ಹತ್ತಿದಳು. ಅವಳಿಗೆ ನಿಂತುಕೊಳ್ಳಲೂ ಆಗುತ್ತಿರಲಿಲ್ಲ, ಜೋಲಿ ಹೊಡೆಯುತ್ತಿದ್ದಳು. ಟ್ರೇನ್ ಖಾಲಿಯಿದ್ದು ದರಿಂದ ಸೀಟಿನಲ್ಲಿ ಹೋಗಿ ಕುಳಿತುಕೊಂಡಳು. ಹತ್ತು ನಿಮಿಷದ ಬಳಿಕ ಆಕೆ ಜೋರಾಗಿ ವಾಂತಿ ಮಾಡಿಕೊಳ್ಳುವ ಸದ್ದು ಕೇಳಿತು. ಪ್ರಯಾಣಿಕರು ಓಡಾಡುವ ಮಧ್ಯದ ಜಾಗದಲ್ಲಿ ವಾಂತಿ ಮಾಡಿದ್ದಳು

ಸ್ವಚ್ಛತೆ ಮತ್ತ ಸಾರ್ವಜನಿಕ ವರ್ತನೆ

ಇತ್ತೀಚೆಗೆ ನಾನು ‘ಜಪಾನ್ ಟೈಮ್ಸ್’ ಪತ್ರಿಕೆಯಲ್ಲಿ ಓದಿದ ಪ್ರಸಂಗವಿದು. ಜಪಾನ್ ಪ್ರವಾ ಸದ ಸಂದರ್ಭದಲ್ಲಿ ಸ್ವೀಡನ್ನಿನ ಪ್ರವಾಸಿಗರೊಬ್ಬರು ಹಂಚಿಕೊಂಡ ಪ್ರಸಂಗವಿದು. ಅವರು ಕ್ಯೋಟೋದಿಂದ ನಾರಾನಗರಕ್ಕೆ ರೈಲಿನಲ್ಲಿ ಪ್ರವಾಸ ಮಾಡುತ್ತಿದ್ದರು. ಆಗ ರಾತ್ರಿ ಒಂಬತ್ತು ಗಂಟೆ ಸಮಯ. ಟ್ರೇನಿನಲ್ಲಿ ಹೆಚ್ಚು ಜನರಿರಲಿಲ್ಲ. ಸುಮಾರು 25-28 ವರ್ಷದ ಯುವತಿಯೊಬ್ಬಳು ವಿಪರೀತ ಕುಡಿದು ಟ್ರೇನನ್ನು ಹತ್ತಿದಳು. ಅವಳಿಗೆ ನಿಂತುಕೊಳ್ಳಲೂ ಆಗುತ್ತಿರಲಿಲ್ಲ, ಜೋಲಿ ಹೊಡೆಯುತ್ತಿದ್ದಳು. ಟ್ರೇನ್ ಖಾಲಿ ಯಿದ್ದುದರಿಂದ ಸೀಟಿನಲ್ಲಿ ಹೋಗಿ ಕುಳಿತುಕೊಂಡಳು. ಹತ್ತು ನಿಮಿಷದ ಬಳಿಕ ಆಕೆ ಜೋರಾಗಿ ವಾಂತಿ ಮಾಡಿ ಕೊಳ್ಳುವ ಸದ್ದು ಕೇಳಿತು. ಪ್ರಯಾಣಿಕರು ಓಡಾಡುವ ಮಧ್ಯದ ಜಾಗದಲ್ಲಿ ವಾಂತಿ ಮಾಡಿ ದ್ದಳು.

ಅದಾದ ಬಳಿಕ ಆಕೆಯಲ್ಲಿ ಒಂಥರಾ ವಿಷಾದಭಾವ ವ್ಯಕ್ತವಾಯಿತು. ಬೋಗಿಯಲ್ಲಿದ್ದ ಜನರನ್ನು ಉದ್ದೇಶಿಸಿ, “ನನ್ನ ಆರೋಗ್ಯ ಸರಿ ಇಲ್ಲ. ವಾಂತಿ ಮಾಡಿಬಿಟ್ಟೆ. ಇದರಿಂದ ನಿಮ ಗೆಲ್ಲ ತೊಂದರೆ ಆಗಿರಬಹುದು. ಅದಕ್ಕೆ ನಾನು ನಿಮ್ಮೆಲ್ಲರ ಕ್ಷಮೆಯಾಚಿಸುತ್ತೇನೆ" ಎಂದು ನಡು ಬಗ್ಗಿಸಿದಳು. ಅಷ್ಟಕ್ಕೇ ಅವಳಿಗೆ ಸಮಾಧಾನವಾಗಲಿಲ್ಲ. ಪುನಃ ಮೂರ್ನಾಲ್ಕು ಸಲ ನಡು ಬಗ್ಗಿಸಿ ಕ್ಷಮೆಯಾಚಿಸಿದಳು. ಅವಳು ಅಷ್ಟಕ್ಕೇ ಸುಮ್ಮನಿದ್ದುಬಿಡಬಹುದಿತ್ತು.

ಇದನ್ನೂ ಓದಿ: Vishweshwar Bhat Column: ಕಳ್ಳತನವೇ ಮಂಗಮಾಯ !

ಆಕೆ ತಾನು ಧರಿಸಿದ್ದ ಸ್ವೇಟರನ್ನು ತೆಗೆದುಕೊಂಡು ನೆಲದ ಮೇಲೆ ಬಿದ್ದಿದ್ದ ವಾಂತಿಯನ್ನು ಬಳಿಯಲಾರಂಭಿಸಿದಳು. ರೈಲಿನೊಳಗಿದ್ದ ಕಸದ ಡಬ್ಬದಿಂದ ಒಂದು ಕ್ಯಾರಿಬ್ಯಾಗ್ ತೆಗೆದು ಕೊಂಡು ಬಂದಳು. ಸ್ವೇಟರ್ ಅನ್ನು ಟ್ರೇನಿನ ವಾಷ್ ರೂಮಿಗೆ ತೆಗೆದುಕೊಂಡು ಹೋಗಿ ತೊಳೆದು, ನೆಲದಲ್ಲಿ ಬಿದ್ದಿದ್ದ ವಾಂತಿಯನ್ನು ಮತ್ತೊಮ್ಮೆ ಬಳಿದಳು. ಕಸದ ಡಬ್ಬದಲ್ಲಿದ್ದ ಪೇಪರಿನಿಂದ ನೆಲವನ್ನು ಮತ್ತೊಮ್ಮೆ ಒರೆಸಿದಳು. ಆದರೂ ಅವಳಿಗೆ ಸಮಾಧಾನ ವಾಗಲಿಲ್ಲ.

ಮತ್ತೊಮ್ಮೆ ತನ್ನ ಸ್ವೇಟರನ್ನು ವಾಷ್ ರೂಮಿನಲ್ಲಿ ತೊಳೆದು ಮೂರನೇ ಬಾರಿ ವಾಂತಿ ಬಿದ್ದ ಜಾಗದಲ್ಲಿ ನೆಲವನ್ನು ಒರೆಸಿದಳು. ಅವಳಿಗೆ ಟ್ರೇನಿನಲ್ಲಿ ಓಡಾಡುತ್ತಾ ಒರೆಸುವುದು ಕಷ್ಟವಾಗುತ್ತಿತ್ತು. ಆದರೆ ಅವಳು ಸುಮ್ಮನಾಗಲಿಲ್ಲ. ವಾಂತಿಯನ್ನು ಸ್ವಚ್ಛಗೊಳಿಸದೇ ಅವಳು ತನ್ನ ನಿಲ್ದಾಣ ಬರುತ್ತಿರುವಂತೆ ಎದ್ದು ಹೋಗಿದ್ದಿದ್ದರೆ, ಯಾರೂ ಏನೂ ಮಾಡುತ್ತಿರಲಿಲ್ಲ.

ಆದರೆ ಆಕೆ ತನ್ನಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ತನ್ನ ವಾಂತಿಯನ್ನು ಒರೆಸಿ ಸ್ವಚ್ಛಗೊಳಿಸಿದ್ದಳು. ಅಷ್ಟಾದರೂ ಆಕೆಗೆ ಸಮಾಧಾನವಾಗಲಿಲ್ಲ. ರೈಲು ನಿಲ್ದಾಣ ಬರುತ್ತಿದ್ದಂತೆ, ಅಲ್ಲಿಯೇ ನಿಂತಿದ್ದ ಸಿಬ್ಬಂದಿಯ ಜತೆ ಏನೋ ಮಾತಾಡಿ, ಮತ್ತೊಮ್ಮೆ ನಡು ಬಗ್ಗಿಸಿ ಕ್ಷಮೆಯಾಚಿಸಿ ಮುಂದಕ್ಕೆ ಹೋದಳು.

ಪ್ರಾಯಶಃ ಆಕೆ ರೈಲ್ವೆ ಸಿಬ್ಬಂದಿಗೆ, ‘ವಾಂತಿ ಬಳಿದರೂ ಇನ್ನೂ ವಾಸನೆ ಬರುತ್ತಿದ್ದಿರಬೇಕು’ ಎಂದು ಹೇಳಿರಬಹುದು. ಅದಾದ ಬಳಿಕ ರೈಲ್ವೆ ಸಿಬ್ಬಂದಿ ಒದ್ದೆ ಮಾಡಿದ ಪೊರಕೆಯಲ್ಲಿ ಆ ಇಡೀ ಬೋಗಿಯ ನೆಲವನ್ನು ಒರೆಸಿದ. “ಬೋಗಿಯಲ್ಲಿ ಆಕೆ ‘ವ್ಯಾಕ್ ವ್ಯಾಕ್’ ಎಂದು ವಾಂತಿ ಮಾಡುವಾಗ ಆ ಯುವತಿಯ ಬಗ್ಗೆ ಅಸಹ್ಯವಾದರೂ, ನಂತರ ಆಕೆ ನಡೆದು ಕೊಂಡ ರೀತಿ ಕಂಡು ಅವಳ ಬಗ್ಗೆ ಅಭಿಮಾನ ಮೂಡಿತು" ಎಂದು ಸ್ವೀಡಿಷ್ ಓದುಗರು ಬರೆದಿದ್ದರು.

ಬೇರೆ ಯಾವ ದೇಶದಗಿದ್ದರೂ, ವಾಂತಿ ಮಾಡಿದ್ದಿದ್ದರೆ ಪ್ರಯಾಣಿಕರು ತಮ್ಮ ಪಾಡಿಗೆ ಎದ್ದು ಹೋಗುತ್ತಿದ್ದರು. ಆದರೆ ಜಪಾನಿನ ಜನರ ಸಾರ್ವಜನಿಕ ವರ್ತನೆ ಜಗತ್ತಿನ ಎಲ್ಲ ರಿಗೂ ಮಾದರಿಯಾಗುವಂಥದ್ದು. ಆಗ ನನಗೆ ಎರಡು ವರ್ಷಗಳ ಹಿಂದೆ, ಕತಾರಿನಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಸಂದರ್ಭದಲ್ಲಿ ನಡೆದ ಒಂದು ಘಟನೆ ನೆನಪಾಯಿತು.

ನಾನು ಸಹ ಆ ಪಂದ್ಯಾವಳಿಯನ್ನು ವೀಕ್ಷಿಸಲು ಅಲ್ಲಿಗೆ ಹೋಗಿದ್ದೆ. ಜಪಾನ್ ಭಾಗ ವಹಿಸಿದ ಪಂದ್ಯ ಮುಗಿಯುತ್ತಿದ್ದಂತೆ, ಕ್ರೀಡಾಂಗಣದಲ್ಲಿ ಬಿದ್ದಿದ್ದ ಕಸವನ್ನು ಗಮನಿಸಿದ ಜಪಾನಿನಿಂದ ಆಗಮಿಸಿದ ನೂರಾರು ಪ್ರೇಕ್ಷಕರು, ಇಡೀ ಕ್ರೀಡಾಂಗಣದ ಗ್ಯಾಲರಿಯನ್ನು ಅರ್ಧ ಗಂಟೆ ಅವಧಿಯಲ್ಲಿ ಸ್ವಚ್ಛಗೊಳಿಸಿದ್ದರು. ತಮ್ಮ ದೇಶದ ತಂಡ ಗೆzಗ, ಜಪಾನ್ ಪ್ರೇಕ್ಷಕರು ಕ್ರೀಡಾಂಗಣವನ್ನು ಗಲೀಜು ಮಾಡಿದರು ಎಂದು ಯಾರೂ ಮಾತಾಡಬಾರದು ಎಂದು ಅವರು ಕ್ರೀಡಾಂಗಣ ಸ್ವಚ್ಛತೆಗೆ ಮುಂದಾಗಿದ್ದರು.

ತಮ್ಮಿಂದಾಗಿ ತಮ್ಮ ದೇಶದ ಬಗ್ಗೆ ಯಾರೂ ಕೆಟ್ಟ ಭಾವನೆ ಮೂಡಿಸಿಕೊಳ್ಳಲು ಆಸ್ಪದ ನೀಡದಂತೆ ಅವರು ನಡೆದುಕೊಂಡಿದ್ದು ಎಲ್ಲರ ಕಣ್ಣು ತೆರೆಯಿಸಿತ್ತು.