Janamejaya Umarji Column: ಒಟಿಟಿ ಬೆಕ್ಕಿಗೆ ಗಂಟೆ ಕಟ್ಟಬೇಕಾಗಿದೆಯೇ ?
ಒಟಿಟಿಗಳು ಮತ್ತು ಸಾಮಾಜಿಕ ಮಾಧ್ಯಮಗಳ ಬೆಳವಣಿಗೆಯು ಜನರಿಗೆ ಸಾಟಿಯಿಲ್ಲದ ವಾಕ್ ಸ್ವಾ ತಂತ್ರ್ಯವನ್ನು ನೀಡಿದೆ, ಪ್ರತಿಯೊಬ್ಬರ ಧ್ವನಿಗೆ ಅವಕಾಶ ಕೊಟ್ಟಿದೆ. ಆದಾಗ್ಯೂ, ಈ ಸ್ವಾತಂತ್ರ್ಯ ವು ನಕಾರಾತ್ಮಕ ನಿರೂಪಣೆಗಳು, ತಪ್ಪು ಮಾಹಿತಿ ಮತ್ತು ಅಸಂವೇದನಾ ಶೀಲತೆಗೂ ಬಾಗಿಲು ತೆರೆದಿದೆ. ಇದು ವಿವಾದದಿಂದ ಮಾರಾಟವಾಗುವ, ಸತ್ಯ ಮತ್ತು ನೈತಿಕತೆಯ ವೆಚ್ಚದಲ್ಲಿ ಲಾಭ ವನ್ನು ಗಳಿಸುವ ಕಸರತ್ತಾಗಿದೆ.
![ಒಟಿಟಿ ಬೆಕ್ಕಿಗೆ ಗಂಟೆ ಕಟ್ಟಬೇಕಾಗಿದೆಯೇ ?](https://cdn-vishwavani-prod.hindverse.com/media/original_images/janamejaya_Umarji_Column_120225.jpg)
ಅಂಕಣಕಾರ ಜನಮೇಜಯ ಉಮರ್ಜಿ
![Profile](https://vishwavani.news/static/img/user.png)
ಚರ್ಚಾವೇದಿಕೆ
ಜನಮೇಜಯ ಉಮರ್ಜಿ
ಒಟಿಟಿಗಳು ಮತ್ತು ಸಾಮಾಜಿಕ ಮಾಧ್ಯಮಗಳ ಬೆಳವಣಿಗೆಯು ಜನರಿಗೆ ಸಾಟಿಯಿಲ್ಲದ ವಾಕ್ ಸ್ವಾತಂತ್ರ್ಯವನ್ನು ನೀಡಿದೆ, ಪ್ರತಿಯೊಬ್ಬರ ಧ್ವನಿಗೆ ಅವಕಾಶ ಕೊಟ್ಟಿದೆ. ಆದಾಗ್ಯೂ, ಈ ಸ್ವಾತಂತ್ರ್ಯ ವು ನಕಾರಾತ್ಮಕ ನಿರೂಪಣೆಗಳು, ತಪ್ಪು ಮಾಹಿತಿ ಮತ್ತು ಅಸಂವೇದನಾ ಶೀಲತೆಗೂ ಬಾಗಿಲು ತೆರೆದಿದೆ. ಇದು ವಿವಾದದಿಂದ ಮಾರಾಟವಾಗುವ, ಸತ್ಯ ಮತ್ತು ನೈತಿಕತೆಯ ವೆಚ್ಚದಲ್ಲಿ ಲಾಭ ವನ್ನು ಗಳಿಸುವ ಕಸರತ್ತಾಗಿದೆ. ಇದು ವೈರಲ್ ಜಮಾನ, ಬೆಳಗಾಗುವುದರೊಳಗಾಗಿ ವೈರಲ್ ಆಗಿಬಿಡಬೇಕು ಎಂಬ ಆಸೆ ಎಲ್ಲರಿಗಿದೆ. ‘ಮುಖ ನೋಡಿ ಮೊಳ ಹಾಕಬೇಡ, ಗುಣ ನೋಡಿ ತಿಳಿಯಮ್ಮ’ ಎಂಬ ಗೀತೆ ಮೊದಲಿತ್ತು. ಮುಂದೆ ಅದು ‘ದುಡ್ಡೇ ದೊಡ್ಡ ಪ್ಪ ಅಂದ ನಮ್ಮಪ್ಪ’ ಎಂದಾಯಿತು. ಈಗ ‘ಲೈಕ್ಸು ಬರಲಿ, ಇನ್ನೂ ಶೇರ್ ಆಗಲಿ, ಇದು ಅವನಿಗೂ ರೀಚ್ ಇವನಿಗೂ ರೀಚ್ ಆಗಲಿ’ ಆಗಿದೆ. ‘ವೈರಲ್ ವಿಡಿಯೋ ಆದವನೇ ಮಹಾಶೂರ’ ಎನ್ನುವಂತಾ ಗಿದೆ.
ಮೊನ್ನೆ ವಿಖ್ಯಾತ ಯೂಟ್ಯೂಬರ್ ಒಬ್ಬರು ಜನಪ್ರಿಯ ಹಾಸ್ಯ ಕಾರ್ಯಕ್ರಮದಲ್ಲಿ ಸಿಡಿಸಿದ ಅಸಭ್ಯ ಜೋಕು ಈಗ ಟೀಕೆಗೆ ಆಹಾರವಾಗಿದೆ. ಯಾವ ದೇಶದಲ್ಲಿ ಸಭ್ಯತೆಯು ಉತ್ಕೃಷ್ಟವಾಗಿದೆಯೋ, ಅಲ್ಲಿಯೇ ಸಭ್ಯತೆಯು ತಡಗೋಡೆ ಮುರಿದುಕೊಂಡು ಪಾತಾಳ ತಲುಪಿರುವುದರ ಬಗ್ಗೆ ಜನ ಆಡಿ ಕೊಳ್ಳುತ್ತಿದ್ದಾರೆ. ತಂದೆ ತಾಯಿಯರ ಬಗ್ಗೆಯೇ ಮಾತಾಡಿದ್ದನಂತೆ ಈ ಭೂಪ.
ವಿಡಿಯೋ ವೈರಲ್ ಆಗಿ ಲಕ್ಷ ಲಕ್ಷ ಜನಕ್ಕೆ ತಲುಪಿದೆ ಎಂದು ಅವರು ಹೇಳಿಕೊಂಡರೆ, ಜಾಲತಾಣಕ್ಕೆ ಬಂದಿದ್ದೇ ತಡ, ಸರಿಯಾಗಿ ಬೆಂಡೆತ್ತಲಾಗಿದೆ ಎಂದು ಜನ ಹೇಳಿಕೊಳ್ಳುತ್ತಿದ್ದಾರೆ. ಒಟಿಟಿ ಪ್ಲಾಟ್ ಫಾರ್ಮ್‌ಗಳಲ್ಲಿ ಈ ರೀತಿ ಅಪಸವ್ಯಗಳು ಹೊ ದಲ್ಲ. ಒಂದು ಕಡೆ ಇದೊಂದು ತಂತ್ರವಾದರೆ, ವೈರಲ್ ಜ್ವರ ಮಿದುಳಿಗೆ ಏರಿದಾಗ ಹೀಗಾಗುವುದೂ ಉಂಟು.
ಪುಸ್ತಕ, ಸುದ್ದಿ, ಕಲಾ ಮಾಧ್ಯಮಗಳು ನಿನ್ನೆ ಮೊನ್ನೆಯವರೆಗೂ, ಆಯಕಟ್ಟಿನ ಜಾಗದಲ್ಲಿ ಕುಳಿತಿದ್ದ ಮಾರ್ಕ್ಸ್, ಮಾವೋವಾದಿಗಳ ಹಿಡಿತದಲ್ಲಿದ್ದವು. ಕ್ರಿಯಾಶೀ ಲತೆಯ ನಿರಂತರ ಶೋಷಣೆ ನಡೆಯು ತ್ತಿತ್ತು. ವಿಧಿಯಿಲ್ಲದೇ ಎಡಕ್ಕೆ ವಾಲುವ ಅನಿವಾರ್ಯತೆ ಸೃಷ್ಟಿಸಲಾಗಿತ್ತು. ಅವರ ಕಾಗಕ್ಕ ಗುಬ್ಬಕ್ಕನ ಕಟ್ಟುಕಥೆಗಳನ್ನು ಜನ ಓದಬೇಕಾಗಿತ್ತು, ನೋಡಬೇಕಾಗಿತ್ತು, ನಂಬಬೇಕಾಗಿತ್ತು. ಕಾಲ ಕಳೆದಂತೆ ಬಂದ ಸಾಮಾಜಿಕ ಜಾಲತಾಣ ಹೊಸ ಕ್ರಾಂತಿ ಮಾಡಿತು.
‘ಜಸ್ಟ್ ಆಸ್ಕಿಂಗ್, ಫ್ಯಾಕ್ಟ್ ಚೆಕಿಂಗ್’ ಅಂತ ಎಷ್ಟೇ ಬಡಿದಾಡಿದರೂ ಸತ್ಯ ತಿಳಿಯುವುದರಿಂದ ಜನರನ್ನು ತಡೆಯಲಾಗಲಿಲ್ಲ. ಇದು ಸಂತೋಷವೇ. ಆದರೆ ಯಾವಾಗ ಸಾಮಾಜಿಕ ಜಾಲತಾಣ ಗಳಿಂದ ಹಣ ಮಾಡುವುದು ಬಂತೋ ಆಗ ಎಲ್ಲ ಬದಲಾಯಿತು. ‘ಜನಪ್ರಿಯರಾಗುವವರೆಗೆ ಸವ್ಯ, ನಂತರ ಅಪಸವ್ಯ’ ಎಂಬಂತಾಯಿತು. ವೈರಲ್ ಅಗುವುದಕ್ಕೆ ಕಸರತ್ತು ಶುರುವಾಯಿತು.
ಒಟಿಟಿಗಳು ಮತ್ತು ಸಾಮಾಜಿಕ ಮಾಧ್ಯಮಗಳ ಬೆಳವಣಿಗೆಯು ಜನರಿಗೆ ಸಾಟಿಯಿಲ್ಲದ ವಾಕ್ ಸ್ವಾತಂತ್ರ್ಯವನ್ನು ನೀಡಿದೆ, ಪ್ರತಿಯೊಬ್ಬರ ಧ್ವನಿಗೆ ಅವಕಾಶ ಕೊಟ್ಟಿದೆ. ಆದಾಗ್ಯೂ, ಈ ಸ್ವಾತಂತ್ರ್ಯ ವು ನಕಾರಾತ್ಮಕ ನಿರೂಪಣೆಗಳು, ತಪ್ಪು ಮಾಹಿತಿ ಮತ್ತು ಅಸಂವೇದನಾಶೀಲತೆಗೂ ಬಾಗಿಲು ತೆರೆದಿದೆ. ಇದು ವಿವಾದದಿಂದ ಮಾರಾಟವಾಗುವ, ಸತ್ಯ ಮತ್ತು ನೈತಿಕತೆಯ ವೆಚ್ಚದಲ್ಲಿ ಲಾಭ ವನ್ನು ಗಳಿಸುವ ಕಸರತ್ತಾಗಿದೆ.
ಇದನ್ನೂ ಓದಿ: Janamejaya Umarji Column: ವಿಶ್ವಾಸಾರ್ಹರು ಎನಿಸಿಕೊಳ್ಳೋಣ
ಇಂದು ಅನೇಕ ವಿಷಯ ಸೃಷ್ಟಿಕರ್ತರಿಗೆ ಸತ್ಯ ಅಥವಾ ಅರ್ಥಪೂರ್ಣ ಚರ್ಚೆ ಬೇಕಾಗಿಲ್ಲ. ಪ್ರಚೋ ದನಕಾರಿ ಮತ್ತು ದಾರಿತಪ್ಪಿಸುವ ಸಂಕಥನಗಳೇ ಲಾಭ ತಂದುಕೊಡುತ್ತವೆ ಎಂದಾಗಿದೆ. ಪೋ ಅಥವಾ ವಿಡಿಯೋ ಎಷ್ಟು ಹೆಚ್ಚು ಆಕ್ರೋಶ, ವಿವಾದ ಮತ್ತು ವಿಭಜನೆಯನ್ನು ಸೃಷ್ಟಿಸು ತ್ತದೆಯೋ, ಅಷ್ಟು ಹೆಚ್ಚು ಲಾಭ ನಿಶ್ಚಿತ ಎನ್ನುವಂತಾಗಿದೆ. ಇದು ಅರ್ಧ-ಸತ್ಯಗಳು, ವೈಯಕ್ತಿಕ ಟೀಕೆಗಳು ಮತ್ತು ವಾಕ್ ಸ್ವಾತಂತ್ರ್ಯದ ವೇಷದಲ್ಲಿ ಪಕ್ಷಪಾತದ ಅಭಿಪ್ರಾಯಗಳ ಪ್ರಚಾರಕ್ಕೆ ಕಾರಣ ವಾಗುತ್ತಿದೆ. ಅನೇಕ ಜಾಲತಾಣ ಪ್ರಭಾವಿಗಳು ಉದ್ದೇಶಪೂರ್ವಕವಾಗಿ ವಿವಾದವನ್ನು ಹುಟ್ಟು ಹಾಕುತ್ತಿದ್ದಾರೆ ಎಂಬದಕ್ಕೆ ದಿನಾಲೂ ಉದಾಹರಣೆ ಸಿಗಬಹುದು.
ಒಂದು ಅಧ್ಯಯನದ ಪ್ರಕಾರ, ನಕಲಿ ಸುದ್ದಿಗಳು ನೈಜ ಸುದ್ದಿಗಳಿಗಿಂತ ಆರು ಪಟ್ಟು ವೇಗವಾಗಿ ಹರಡುತ್ತವೆ. ತೀವ್ರವಾದ ಅಭಿಪ್ರಾಯಗಳನ್ನು ಹೊಂದಿರುವ ರಾಜಕೀಯ, ಧಾರ್ಮಿಕ ಅಥವಾ ಸಾಮಾಜಿಕ ವಿಡಿಯೋ ಹೆಚ್ಚಿಗೆ ವೈರಲ್ ಆಗುತ್ತವೆ. ಒಟಿಟಿಗಳು ಸಾಂಪ್ರದಾಯಿಕ ಮಾಧ್ಯಮ ಗಳಿಗಿಂತ ಭಿನ್ನವಾಗಿ, ನಿಯಂತ್ರಣದಲ್ಲಿಲ್ಲ, ಜವಾಬುದಾರ ಆಗಿಲ್ಲ.
ಹೀಗಾಗಿ ಹಲವರು ನೈತಿಕತೆಯ ಗಡಿದಾಟುತ್ತಿದ್ದಾರೆ. ವಾಕ್ ಸ್ವಾತಂತ್ರ್ಯವು ಅಗತ್ಯವಾಗಿದ್ದರೂ, ಅದು ನಕಾರಾತ್ಮಕತೆ, ತಪ್ಪು ಮಾಹಿತಿ ಮತ್ತು ಸಾಮಾಜಿಕ ವಿಭಜನೆಯನ್ನು ಉತ್ತೇಜಿಸಿದಾಗ, ಅದು ಸಬಲೀ ಕರಣದ ಸಾಧನಕ್ಕಿಂತ ಅಪಾಯಕಾರಿ ಅಸವಾಗುತ್ತದೆ.
ಸೆನ್ಸಾರು ಉಚಿತವೂ ಅಲ್ಲ ಪರಿಹಾರವೂ ಅಲ್ಲವಾದರೂ, ಸಮಾಜದ ಸ್ವಾಸ್ಥ್ಯ ಕೆಡಿಸುವ ನಿರೂಪಣೆ ಗಳಿಗೆ ಮೂಗುದಾರದ ಅಗತ್ಯ ಇದ್ದೇ ಇದೆ. ವಿಷಯ ಸೃಷ್ಟಿಕರ್ತರು, ಪ್ರಭಾವಿಗಳು ಮತ್ತು ಒಟಿಟಿ ಯಲ್ಲಿ ಪ್ರಸಾರ ಮಾಡುವವರು ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಸಂವೇದನಾ ಶೀಲತೆಯನ್ನು ಬಲಿಕೊಟ್ಟು ಲಾಭ ಮಾಡಿಕೊಳ್ಳುವುದು ತಪ್ಪಬೇಕು.
ಅತಿರೇಕದ, ಒಮ್ಮುಖ ಒಲವಿನ ಕಥನಗಳ ಬದಲಿಗೆ ಸಮತೋಲಿತ ಚರ್ಚೆಗಳನ್ನು ಉತ್ತೇಜಿಸಬೇಕು. ಇವೆಲ್ಲವೂ ಸ್ವಯಂಪ್ರೇರಿತರಾಗಿ ನೈತಿಕ ಹೊಣೆಹೊತ್ತು ಮಾಡಬೇಕಾದದ್ದೇ ಆದರೂ, ಕಾನೂನಿಕ ಬಿಗಿತ ಬೇಕೆ ಬೇಕು. ಏಕೆಂದರೆ ವಿಷಯ ನಿಯಂತ್ರಣ ಮತ್ತು ಹೊಣೆಗಾರಿಕೆಯ ಕೊರತೆ ಇದೆ. ಟಿವಿ, ಸಿನಿಮಾಗಳಂತೆ ಇಲ್ಲಿ ಸೆನ್ಸಾರ್ ಇಲ್ಲ. ಅತಿಯಾದ ಅಶ್ಲೀಲತೆ ಮತ್ತು ಮಾದಕದ್ರವ್ಯದ ದುರುಪ ಯೋಗದ ವೈಭವೀಕರಣ, ಕೋಮು ಅಥವಾ ರಾಜಕೀಯ ಪ್ರಚಾರ, ಆಗಾಗ್ಗೆ ಪಕ್ಷಪಾತದ ಅಥವಾ ದಾರಿತಪ್ಪಿಸುವ ನಿರೂಪಣೆಯನ್ನು ಅಭಿಪ್ರಾಯದ ಸೋಗಿನಲ್ಲಿ ಹರಡುವ ಪಾಡ್ ಕಾಸ್ಟುಗಳು ಕಷ್ಟ, ಕಷ್ಟ.
ಇವುಗಳ ನಿಯಂತ್ರಣವೇ ಇಲ್ಲ ಅಂತಿಲ್ಲ. ಒಂದಿಷ್ಟು ದೇಶಗಳಲ್ಲಿಯ ವ್ಯವಸ್ಥೆ ನೋಡುವುದಾದರೆ, ಇಂಗ್ಲೆಂಡಿನಲ್ಲಿ ಸ್ಟ್ರೀಮಿಂಗ್ ಸೇವೆಗಳಿಗೆ, ದೂರದರ್ಶನ ಪ್ರಸಾರಕ್ಕೆ ಅನ್ವಯಿಸುವ ಆ-ಮ್ ಮಾನ ದಂಡಗಳಿವೆ. ಸಿಂಗಾಪುರದ ಇನೋಕಾಮ್ ಮೀಡಿಯಾ ಡೆವಲಪ್‌ಮೆಂಟ್ ಅಥಾರಿಟಿ (ಐಎಂಡಿಎ) ಸ್ಪಷ್ಟವಾದ ವಿಷಯ, ನಕಲಿ ಸುದ್ದಿ ಮತ್ತು ಧಾರ್ಮಿಕವಾಗಿ ಸೂಕ್ಷ್ಮವಾದ ವಿಷಯಗಳ ಬಗ್ಗೆ ಕಟ್ಟು ನಿಟ್ಟಾದ ಮಾರ್ಗಸೂಚಿಗಳನ್ನು ಹೊಂದಿದೆ. ಇನ್ನು ಚೀನಾದೊಂದು ಅತಿರೇಕ.
ಅಲ್ಲಿ ಒಟಿಟಿ, ಎಲ್ಲವೂ ನಿಯಂತ್ರಿತ. ಸರಕಾರ ಒಪ್ಪಿದರಷ್ಟೇ ಪ್ರಸಾರ. ಭಾರತ ಸರಕಾರವು 2021ರಲ್ಲಿ ಮಧ್ಯಂತರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿP ಕೋಡ್ ಅನ್ನು ಪರಿಚಯಿ ಸಿದೆ. ಇಲ್ಲಿ ಸ್ವಯಂ-ನಿಯಂತ್ರಣ ಮತ್ತು ಮೂರು ಹಂತದ ಮೇಲ್ವಿಚಾರಣಾ ವ್ಯವಸ್ಥೆ ಇದೆ.
ವಾಕ್ ಸ್ವಾತಂತ್ರ್ಯ ಮತ್ತು ಸೃಜನಾತ್ಮಕ ಸ್ವಾತಂತ್ರ್ಯ ಅವಶ್ಯಕವೇ ಆಗಿದ್ದರೂ, ಜವಾಬ್ದಾರಿಯಿಲ್ಲದೇ ಸ್ವೇಚ್ಛಾಚಾರವಾಗಬಾರದು. ಅದು ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಸೃಜನಾತ್ಮಕ ಸ್ವಾತಂತ್ರ್ಯ ವನ್ನು ಖಾತ್ರಿಪಡಿಸಿಕೊಳ್ಳುವಾಗ ಹಾನಿಕಾರಕ ಕಥನಗಳ ಹರಡುವಿಕೆಯನ್ನು ತಡೆಯಲು ಒಂದಿ ಷ್ಟು ಸ್ಪಷ್ಟ ನಿಯಂತ್ರಕ ಮಾನದಂಡಗಳ ಅಗತ್ಯವಿದೆ. ವಿಷಯದ ವರ್ಗೀಕರಣ ಮತ್ತು ವಯಸ್ಸಿನ ನಿರ್ಬಂಧಗಳು, ತಥ್ಯ-ಪರಿಶೀಲನೆ ಮತ್ತು ತಪ್ಪು ಮಾಹಿತಿ ನಿಯಂತ್ರಣ, ನಿಯಂತ್ರಕ ಸಂಸ್ಥೆಯ ಮೇಲ್ವಿಚಾರಣೆ, ಸಮುದಾಯ ಮಾರ್ಗಸೂಚಿಗಳು ಮತ್ತು ದೂರು ನೀಡಲು ಬಳಕೆದಾರ-ಸ್ನೇಹಿ ಕಾರ್ಯವಿಧಾನಗಳು ಕುರಿತಂತೆ ಒಂದಿಷ್ಟು ಚಿಂತನೆ ನಡೆಯಬೇಕಾಗಿದೆ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)