Rakshak Bullet: ಚಾಮುಂಡೇಶ್ವರಿಗೆ ಅವಮಾನ; ರಕ್ಷಕ್ ಬುಲೆಟ್ ವಿರುದ್ಧ ನೆಟ್ಟಿಗರ ಆಕ್ರೋಶ
Rakshak Bullet: ಜೀ ಕನ್ನಡದ ಭರ್ಜರಿ ಬ್ಯಾಚುಲರ್ಸ್-2 ವೇದಿಕೆಯಲ್ಲಿ ಇತ್ತೀಚೆಗೆ ದರ್ಶನ್ ಹಾಗೂ ರಚಿತಾ ರಾಮ್ ನಟನೆಯ ಬುಲ್ ಬುಲ್ ಚಿತ್ರದ ದೃಶ್ಯವನ್ನು ಜಡ್ಜ್ ಆಗಿದ್ದ ರಚಿತಾ ರಾಮ್ ಎದುರೇ ರಕ್ಷಕ್ ಮರುಸೃಷ್ಟಿ ಮಾಡಿದ್ದರು. ಇದು ಸದ್ಯ ವಿವಾದಕ್ಕೆ ಕಾರಣವಾಗಿದೆ.


ಬೆಂಗಳೂರು: ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್ (Rakshak Bullet ), ಸಿನಿಮಾವೊಂದರ ವಿವಾದಿತ ಡೈಲಾಗ್ ಅನ್ನು ರಿಯಾಲಿಟಿ ಶೋದಲ್ಲಿ ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ನಟ ದರ್ಶನ್ ಅವರ ಬುಲ್‌ಬುಲ್ ಸಿನಿಮಾದಲ್ಲಿನ ವಿವಾದಿತ ಡೈಲಾಗ್ ಅನ್ನು ಕಿರುತೆರೆ ವೇದಿಕೆಯಲ್ಲಿ (Bharjari Bachelors-2) ಪುನರುಚ್ಚರಿಸುವುದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ರಕ್ಷಕ್ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಕ್ಷಕ್ ಬುಲೆಟ್ ಕ್ಷಮೆಯಾಚಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಜೀ ಕನ್ನಡದ ಭರ್ಜರಿ ಬ್ಯಾಚುಲರ್ಸ್-2 ವೇದಿಕೆಯಲ್ಲಿ ಇತ್ತೀಚೆಗೆ ದರ್ಶನ್ ಹಾಗೂ ರಚಿತಾ ರಾಮ್ ನಟನೆಯ ಬುಲ್ ಬುಲ್ ಚಿತ್ರದ ದೃಶ್ಯವನ್ನು ಜಡ್ಜ್ ಆಗಿದ್ದ ರಚಿತಾ ರಾಮ್ ಎದುರೇ ರಕ್ಷಕ್ ಮರುಸೃಷ್ಟಿ ಮಾಡಿದ್ದರು. ಭರ್ಜರಿ ಬ್ಯಾಚುಲರ್ಸ್-2 ನಲ್ಲಿ ರಕ್ಷಕ್‌ಗೆ ರಮೋಲಾ ಜೋಡಿಯಾಗಿದ್ದಾರೆ. ಇವರ ಸ್ಕಿಟ್ ನೋಡಿ ರಚಿತಾ ರಾಮ್ ಖುಷಿ ಪಟ್ಟು, ಸಿನಿಮಾ ನೋಡಿದ ಹಾಗೆಯೇ ಇತ್ತು ಎಂದು ಹೊಗಳಿದ್ದರು. ಆದರೆ, ಬುಲ್‌ಬುಲ್ ಸಿನಿಮಾದಲ್ಲಿದ್ದ ವಿವಾದಿತ ಡೈಲಾಗ್ ಅನ್ನೇ ಮತ್ತೊಮ್ಮೆ ಹೇಳುವ ಮೂಲಕ ರಕ್ಷಕ್ ಬುಲೆಟ್ ವಿವಾದಕ್ಕೆ ಕಾರಣರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Karimani: 'ಕರಿಮಣಿ' ಧಾರಾವಾಹಿಯ 'ಬ್ಲ್ಯಾಕ್ ರೋಜ್' ಯಾರು ? ಮಾ. 24 ಕ್ಕೆ ಬಯಲಾಗಲಿದೆ ಸತ್ಯ
ಬುಲ್‌ಬುಲ್ ಚಿತ್ರದಲ್ಲಿದ ದರ್ಶನ್ ಹಾಗೂ ರಚಿತಾ ರಾಮ್ ಸ್ವಿಡ್ಜರ್‌ಲ್ಯಾಂಡ್ ಭೇಟಿಯಾಗಿ ಮಾತುಕತೆಯಾಗುವ ದೃಶ್ಯವನ್ನು ಮರು ಸೃಷ್ಟಿಸಲಾಗಿತ್ತು. ರಕ್ಷಕ್ ಬುಲೆಟ್ ಮಾತನಾಡುತ್ತಾ, 'ನಾವು ನಿಮ್ಮವರೇ ಕಣ್ರಿ. ಮಂಡ್ಯದವರು. ನಿಮ್ಮನ್ನ ನೋಡ್ತಾ ಇದ್ದ ಹಾಗೆಯೇ ಅಂದುಕೊಂಡೆ. ತಾಯಿ ಚಾಮುಂಡೇಶ್ವರಿನೇ ಬೆಟ್ಟದಿಂದ ಇಳಿದು, ಸೀರೆ-ಒಡವೆ ಎಲ್ಲಾ ಬಿಚ್ಚಿಟ್ಟು, ಪ್ಯಾಂಟು-ಶರ್ಟು ಹಾಕಿಕೊಂಡು ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಒಳ್ಳೇ ಟ್ರಿಪ್ ಹೊಡೀತಾ ಇದ್ದಾರೆ ಅಂತ..' ಎಂದು ಹೇಳಿದ್ದರು. ರಕ್ಷಕ್ ಬುಲೆಟ್ ಏನೋ ಜೋಶ್‌ನಲ್ಲಿ ಈ ಡೈಲಾಗ್ ಹೇಳಿದ್ದಾರೆ. ಆದರೆ, ಈ ಡೈಲಾಗ್ ಬುಲ್ ಬುಲ್ ಸಿನಿಮಾ ಸಂದರ್ಭದಲ್ಲಿಯೂ ವಿವಾದ ಸೃಷ್ಟಿಸಿತ್ತು. ಇದೀಗ ಚಾಮುಂಡೇಶ್ವರಿ ದೇವಿಯ ಬಗ್ಗೆ ರಕ್ಷಕ್ ಬುಲೆಟ್ ಮಾತನಾಡಿಡುವುದು ವಿವಾದಕ್ಕೆ ಕಾರಣವಾಗಿದೆ.
Le so-called Rboss crct agi matadoddu kalyo...
— Virat👑Rocky✨️ (@Virat_Rocky18) March 20, 2025
Nimma cheap tevlige tayi Chamundeshwari hesru yake togaltya😬
Yako Shavasa dosha ansutte 😴 pic.twitter.com/IZZ0H4j8MF
ಈ ಸುದ್ದಿಯನ್ನೂ ಓದಿ | BAD Movie: ನಕುಲ್ ಗೌಡ - ಮಾನ್ವಿತ ಹರೀಶ್ ಅಭಿನಯದ ‘BAD’ ಚಿತ್ರದ ಟೀಸರ್ ಔಟ್
ಈ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. 'ಸೋಕಾಲ್ಡ್ ಆರ್ ಬಾಸ್ ಮೊದಲು ಕರೆಕ್ಟ್ ಆಗಿ ಮಾತನಾಡೋದನ್ನು ಕಲಿ. ನಿಮ್ಮ ಚೀಪ್ ತೆವಲಿಗೆ ತಾಯಿ ಚಾಮುಂಡೇಶ್ವರಿ ಹೆಸರು ಯಾಕೆ ತೆಗೀತಿಯಾ. ಯಾಕೋ ನಿನಗೂ ಸಹವಾಸ ದೋಷ ಅನಿಸುತ್ತದೆ' ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ಈ ಬಗ್ಗೆ ಸೂಕ್ತವಾದ ನೋಟಿಸ್ ಜಾರಿ ಮಾಡಿ ಅವರಿಂದ ಒಂದು ಕ್ಷಮಾಪಣೆ ಹೇಳಿಸಬಹುದೇ ಎಂದು ವ್ಯಕ್ತಿಯೊಬ್ಬರು ವಕೀಲರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.