ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

UAN Aadhaar Link: ಯುಎಎನ್ ಜೊತೆ ಆಧಾರ್‌ ಲಿಂಕ್‌ ಮಾಡಲು ಮಾರ್ಚ್15 ಲಾಸ್ಟ್ ಡೇಟ್; ಲಿಂಕ್‌ ಮಾಡುವುದು ಹೇಗೆ?

ಕಾರ್ಮಿಕರ ಭವಿಷ್ಯ ನಿಧಿಯ (ಇಪಿಎಫ್) ಚಂದಾದಾರರಾಗಬೇಕಾದರೆ UAN ನಂಬರ್ ಪಡೆಯುವುದು ಕಡ್ಡಾಯವಾಗಿದೆ. ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ ಸಂಸ್ಥೆಯು ತನ್ನ ಪೋರ್ಟಲ್ ಮೂಲಕ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಪಡೆಯುವ ಸೌಲಭ್ಯವನ್ನು ನೀಡುತ್ತದೆ. ಹಾಗಾಗಿ ಇಪಿಎಫ್‌ಒ ನೀಡುವ ಯುಎಎನ್‌ ಮತ್ತು ಆಧಾರ್‌ ಜತೆ ಲಿಂಕ್‌ ಕಲ್ಪಿಸಲು 2025 ಮಾರ್ಚ್ 15 ಕೊನೆಯ ದಿನವಾಗಿದೆ. ಲಿಂಕ್‌ ಕಲ್ಪಿಸುವುದು ಕಡ್ಡಾಯವಾಗಿದ್ದು, ಹೇಗೆ ಲಿಂಕ್‌ ಮಾಡುವುದು ಎನ್ನುವುದನ್ನು ಇಲ್ಲಿ ನೀಡಲಾಗಿದೆ.

ಇಪಿಎಫ್‌ ಖಾತೆದಾರರು UAN ಜತೆಗೆ ಆಧಾರ್‌ ಲಿಂಕ್‌ ಮಾಡಲು ಗಡುವು ವಿಸ್ತರಣೆ

Profile Sushmitha Jain Feb 28, 2025 6:00 AM

ನವದೆಹಲಿ: ಇಪಿಎಫ್‌ಒ (EPFO) ನೀಡುವ ಯುಎಎನ್‌ (ಸಾರ್ವತ್ರಿಕ ಖಾತೆ ಸಂಖ್ಯೆ) ಮತ್ತು ಆಧಾರ್‌ ಜತೆ ಲಿಂಕ್‌ (UAN-Aadhar Link) ಕಲ್ಪಿಸಲು 2025ರ ಮಾರ್ಚ್ 15 ಕೊನೆ ದಿನವಾಗಿದೆ. ಲಿಂಕ್‌ ಕಲ್ಪಿಸುವುದು ಕಡ್ಡಾಯವಾಗಿದ್ದು, ತಪ್ಪಿದರೆ ಮುಂಬರುವ ದಿನಗಳಲ್ಲಿ ನಿಮ್ಮ ಕಂಪನಿಯು ಅಥವಾ ಉದ್ಯೋಗದಾತರು ಮಾಸಿಕ ನೀಡುವ ಇಪಿಎಫ್‌ ಪಾಲಿನ ಮೊತ್ತವು ಇಪಿಎಫ್‌ ಖಾತೆಗೆ (PF Account) ಜಮೆಯಾಗುವುದಿಲ್ಲ. ಈ ಹಿಂದೆ ಆಧಾರ್ ಹಾಗೂ ಯುಎಎನ್ ಲಿಂಕ್ ಮಾಡಲು 2025 ಫೆಬ್ರವರಿ 15ರಂದು ಕೊನೆ ದಿನವಾಗಿತ್ತು. ಆದರೀಗ ಇಪಿಎಫ್‌ಒ ಗಡುವನ್ನು ಮುಂದೂಡಿದ್ದು, ಮಾರ್ಚ್ 15 ರೊಳಗೆ ಯುಎನ್ ಜತೆಗೆ ಆಧಾರ್‌ ಲಿಂಕ್‌ ಮಾಡಬೇಕಿದೆ.

ಒಂದು ವೇಳೆ ಈ ಕಾಲಾವಧಿ ಯೊಳಗೆ ಲಿಂಕ್ ಆಗದಿದ್ದರೆ, ಉದ್ಯೋಗದಾತರು ನಿಮ್ಮ ಇಪಿಎಫ್‌ (EPF) ಖಾತೆಗೆ ಮಾಸಿಕ ಕೊಡುಗೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ನಿಮ್ಮ ಯುಎಎನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ನಿಮ್ಮ ಇಪಿಎಫ್ ಖಾತೆಯಿಂದ ಹಣ ಹಿಂಪಡೆಯಲೂ ಸಾಧ್ಯವಾಗುವುದಿಲ್ಲ. ಹೌದು ಸಾಮಾಜಿಕ ಭದ್ರತೆ ಸಂಹಿತೆಯ ಸೆಕ್ಷನ್ 142, ಪಿಂಚಣಿ, ಗ್ರಾಚ್ಯುಟಿ ಅಥವಾ ಇನ್ನಾವುದೇ ಲಾಭವನ್ನು ಪಡೆಯಲು ಅರ್ಹರಾಗಲು ಈಗಿರುವ ಇಪಿಎಫ್ ಸದಸ್ಯರು ಆಧಾರ್ ಬಳಸಿ ತಮ್ಮ ಗುರುತನ್ನು ಧೃಡಿಕರಿಸಬೇಕಿದ್ದು, ಇಪಿಎಫ್ ಯೋಜನೆಯಡಿ ನೋಂದಾಯಿಸಲು ಹಾಗೂ ಇಪಿಎಫ್ ಯೋಜನೆಯಿಂದ ಹಿಂತೆಗೆದುಕೊಳ್ಳುವ ಸಮಯದಲ್ಲಿ ಆಧಾರ್ ಕಡ್ಡಾಯವಾಗಿದೆ.

ಹೀಗಾಗಿ, ಮಾರ್ಚ್ 15 ರೊಳಗೆ ಯುಎಎನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಉದ್ಯೋಗದಾತರು ಇಪಿಎಫ್ ಖಾತೆಗೆ ಹಣವನ್ನು ಠೇವಣಿ ಮಾಡಲು ಸಾಧ್ಯವಿಲ್ಲ ಅಥವಾ ಉದ್ಯೋಗಿಗಳು ತಮ್ಮ ಇಪಿಎಫ್ ಖಾತೆಯಿಂದ ಯಾವುದೇ ಹಣ ಹಿಂಪಡೆಯಲು ಸಾಧ್ಯವಾಗುವುದಿಲ್ಲ.

ನಿಮ್ಮ UAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ?

ಯುಎಎನ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಸದಸ್ಯ ಸೇವಾ ಪೋರ್ಟಲ್, ಉಮಾಂಗ್ ಆಪ್ ಅಥವಾ ಇಪಿಎಫ್ಒನ ಇ-ಕೆವೈಸಿ ಪೋರ್ಟಲ್ ನಲ್ಲಿ ಒಟಿಪಿ ಪರಿಶೀಲನೆ ಮೂಲಕ ಇಲ್ಲವೇ ಇಪಿಎಫ್‌ಒನ ಇ-ಕೆವೈಸಿ ಪೋರ್ಟಲ್‌ನಲ್ಲಿ ಬಯೋಮೆಟ್ರಿಕ್ ಬಳಸಿ ಲಿಂಕ್‌ ಮಾಡಬಹುದಾಗಿದೆ.

ಹೀಗೆ ಮಾಡಿ

  • ಮೊದಲನೆಯದಾಗಿ, ನೀವು ಇಪಿಎಫ್‌ಒ ವೆಬ್‌ಸೈಟ್ www.epfindia.gov.in ಗೆ ಲಾಗ್ ಇನ್ ಆಗಬೇಕು.
  • ಇದರ ನಂತರ ನೀವು ಆನ್‌ಲೈನ್ ಸೇವೆಗಳು >> ಇ-ಕೆವೈಸಿ ಪೋರ್ಟಲ್ >> ಲಿಂಕ್ ಯುಎಎನ್ ಆಧಾರದ ಮೇಲೆ ಕ್ಲಿಕ್ ಮಾಡಬೇಕು.
  • ಈ ಮೂಲಕ, ನಿಮ್ಮ ಯುಎಎನ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಯುಎಎನ್ ಖಾತೆಯಿಂದ ಅಪ್‌ಲೋಡ್ ಮಾಡಬೇಕು.
  • ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿ ಸಂಖ್ಯೆಯನ್ನು ಭರ್ತಿ ಮಾಡಿದ ನಂತರ, ಕೆಳಗಿನ ಆಧಾರ್ ಪೆಟ್ಟಿಗೆಯಲ್ಲಿ ನಿಮ್ಮ 12 ಅಂಕೆ ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಿ, ನಂತರ ಆ ಫಾರ್ಮ್ ಅನ್ನು ಸಲ್ಲಿಸಿ.
  • ಈಗ ನೀವು ನೀಡಿದ ಒಟಿಪಿ ಪರಿಶೀಲನೆ ಆಯ್ಕೆ ಬರಲಿದ್ದು, ದಯವಿಟ್ಟು ಅದರ ಮೇಲೆ ಕ್ಲಿಕ್ ಮಾಡಿ. ಈಗ ಮತ್ತೊಮ್ಮೆ, ನಿಮ್ಮ ಆಧಾರ್ ವಿವರಗಳನ್ನು ಪರಿಶೀಲಿಸಲು ನಿಮ್ಮ ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ ಅಥವಾ ಮೇಲ್‌ನಲ್ಲಿ ಒಟಿಪಿ ರಚಿಸಬೇಕು. ಪರಿಶೀಲನೆಯ ನಂತರ ನಿಮ್ಮ ಆಧಾರ್ ಅನ್ನು ಪಿಎಫ್‌ ಖಾತೆಗೆ ಲಿಂಕ್ ಮಾಡಲಾಗುತ್ತದೆ.

ಈ ಸುದ್ದಿಯನ್ನು ಓದಿ: Bhagya Lakshmi Serial: ಮೋಸ ಮಾಡಿದ ತಾಂಡವ್​ನ ಬೆಂಡೆತ್ತಲು ಬಂದ ಭಾಗ್ಯಾ ತಂಗಿ ಲಕ್ಷ್ಮೀ

ಸದಸ್ಯ ಸೇವಾ ಪೋರ್ಟಲ್‌ನಲ್ಲಿ UAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಪ್ರಕ್ರಿಯೆ ಇಲ್ಲಿದೆ.

  • ಮೊದಲಿಗೆ https://unifiedportal-mem.epfindia.gov.in/ ನಲ್ಲಿ ಸದಸ್ಯ ಸೇವಾ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
  • 'ಮ್ಯಾನೇಜ್' ಟ್ಯಾಬ್ ಅಡಿಯಲ್ಲಿ 'KYC' ಆಯ್ಕೆ ಬಟನ್‌ ಆಯ್ಕೆ ಮಾಡಿ
  • KYC ಡಾಕ್ಯುಮೆಂಟ್ ಸೇರಿಸಲು 'ಆಧಾರ್' ಆಯ್ಕೆಯನ್ನು ಕ್ಲಿಕ್‌ ಮಾಡಿ.
  • ಆಧಾರ್ ಪ್ರಕಾರ ಸ್ಕ್ರೀನ್‌ ಮೇಲೆ ನಿಮ್ಮ ಹೆಸರನ್ನು ತೋರಿಸುತ್ತದೆ. ನೀವು ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಲು ನೀವು ಬಯಸದಿದ್ದರೆ, ನೀವು ವರ್ಚುವಲ್ ಐಡಿ ಸಂಖ್ಯೆಯನ್ನು ಸಹ ನಮೂದಿಸಬಹುದು.ಆಧಾರ್ ಜೊತೆ ಯುಎಎನ್ ಲಿಂಕ್ ಮಾಡುವ ಉದ್ದೇಶಕ್ಕಾಗಿ ಆಧಾರ್ ಆಧಾರಿತ ದೃಢೀಕರಣಕ್ಕಾಗಿ ನೀವು ಒಪ್ಪಿಗೆ ನೀಡಬೇಕಾಗುತ್ತದೆ.
  • 'ಸೇವ್' ಬಟನ್ ಮೇಲೆ ಕ್ಲಿಕ್ ಮಾಡಿ. ಅದನ್ನು ಉಳಿಸಿದ ನಂತರ, ಅದನ್ನು 'ಬಾಕಿ ಇರುವ KYC' ಅಡಿಯಲ್ಲಿ ತೋರಿಸಲಾಗುತ್ತದೆ. ನಿಮ್ಮ UAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನಿಮ್ಮ ಉದ್ಯೋಗದಾತನು ಅನುಮೋದಿಸಬೇಕಾಗುತ್ತದೆ. ನಿಮ್ಮ ಉದ್ಯೋಗದಾತರಿಂದ ಅನುಮೋದನೆ ಪಡೆದ ನಂತರ, ಅದನ್ನು ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಪಿಎಫ್‌ಒ ಅನುಮೋದಿಸಬೇಕಾಗುತ್ತದೆ.
  • ಲಿಂಗ್ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?: ಇಪಿಎಫ್‌ಒದ ವೆಬ್‌ಸೈಟ್‌ ಲಿಂಕ್‌ ಅನ್ನು ಕ್ಲಿಕ್ಕಿಸಿ: https://unifiedportal ಯುಎಎನ್‌ ಮತ್ತು ಪಾಸ್‌ ವರ್ಡ್‌ ಒತ್ತಿ ಲಾಗಿನ್‌ ಆಗಿ. ಲಾಗಿನ್‌ ಆದ ಬಳಿಕ ‘ಮ್ಯಾನೇಜ್‌’ ಟ್ಯಾಬ್‌ ಅಡಿಯಲ್ಲಿರುವ ‘ಕೆವೈಸಿ’ ಆಯ್ಕೆಯನ್ನು ಒತ್ತಿ. ಸ್ಕ್ರೀನ್‌ನಲ್ಲಿ ವೆರಿಫೈಡ್‌ ಡಾಕ್ಯುಮೆಂಟ್‌ ಟ್ಯಾಬ್‌ನಲ್ಲಿ ಆಧಾರ್‌ ಸಂಖ್ಯೆ ಕಾಣಿಸುತ್ತಿದ್ದರೆ ಯುಎಎನ್‌-ಆಧಾರ್‌ ಲಿಂಕ್‌ ಆಗಿದೆ ಎಂದರ್ಥ.